Advertisement

ಬೆಲೆ ಏರಿಕೆ ವಿರೋಧಿಸಿ ಏಕಾಂಗಿ ಧರಣಿ

04:04 PM Feb 09, 2021 | Team Udayavani |

ಶಿವಮೊಗ್ಗ: ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯುವಲ್ಲಿ ವಿಫಲವಾಗಿದ್ದು ಇದರಿಂದ ಬಡಜನತೆಗೆ ಹೆಚ್ಚಿನ ಹೊರೆಯಾಗಿದೆ ಎಂದು ಆರೋಪಿಸಿ ಸಂಯುಕ್ತ ಜನತಾದಳದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್‌ ಎಸ್‌. ಗೌಡ ಸೋಮವಾರ ಜಿಲ್ಲಾ ಧಿಕಾರಿಗಳ ಕಚೇರಿ ಆವರಣದಲ್ಲಿ ಏಕಾಂಗಿಯಾಗಿ ಧರಣಿ ಸತ್ಯಾಗ್ರಹ ನಡೆಸಿದರು. ಕಳೆದ ಮಾರ್ಚ್‌ ತಿಂಗಳಲ್ಲಿ 550 ರೂ. ಇದ್ದ ಅಡಿಗೆ ಅನಿಲ ದರವು ಡಿಸೆಂಬರ್‌ನಲ್ಲಿ 708 ರೂ. ತಲುಪಿ ಜನವರಿಯಲ್ಲಿ 740 ರೂ. ಹೆಚ್ಚಳವಾಗಿ ಬಡ ನಾಗರಿಕರಿಗೆ ಹೆಚ್ಚಿನ ಹೊರೆಯಾಗಿದೆ. ಈಗಾಗಲೇ ಕಳೆದ ಸೆಪ್ಟಂಬರ್‌ನಿಂದ ಗ್ಯಾಸ್‌ನ ಸಬ್ಸಿಡಿ ಹಣವನ್ನು ದೇಶದ ಬಡ ಜನರಿಗೆ ಕೇಂದ್ರ ಸರ್ಕಾರವು ಪಾವತಿಸುತ್ತಿಲ್ಲ ಎಂದು ದೂರಿದರು.

Advertisement

ಕೊರೊನಾ ಮಹಾಮಾರಿಯಿಂದ ಆರ್ಥಿಕವಾಗಿ ಬಡವರು ಸಂಕಷ್ಟದಲ್ಲಿರುವ ಇಂತಹ ಸಮಯದಲ್ಲಿ ಬಿಪಿಎಲ್‌ ಮತ್ತು ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಸುಮಾರು 50 ಕೋಟಿ ಕುಟುಂಬಗಳಿಗೆ ತೊಂದರೆಯಾಗುತ್ತಿದೆ. 2021ರ ಡಿಸೆಂಬರ್‌ ಅಂತ್ಯದ ವೇಳೆಗೆ ಎಲ್‌ಪಿಜಿ ಸಿಲಿಂಡರ್‌ ದರ ಸುಮಾರು 1200 ರೂ. ಗಳಿಂದ 1700 ರೂ. ಹೆಚ್ಚಾಗಬಹುದೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದರಂತೆ ಪೆಟ್ರೋಲ್‌ ಮತ್ತು ಡೀಸೆಲ್‌ದರವು ಸಹ 1 ಲೀಟರ್‌ಗೆ 170 ರೂ. ಆಗುವುದರಲ್ಲಿ  ಆಶ್ಚರ್ಯವಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣವೇ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ಒಂದು ವೇಳೆ ಬೆಲೆ ಏರಿಕೆ ದರವನ್ನು ನಿಯಂತ್ರಿಸದಿದ್ದಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next