Advertisement
ಇದರಂತೆ ಪಚ್ಚನಾಡಿ ಘನತ್ಯಾಜ್ಯ ಸಂಸ್ಕರಣೆ ಘಟಕದಲ್ಲಿ ಸ್ವೀಕರಿಸಲಾಗುವ ಒಣ ತ್ಯಾಜ್ಯವನ್ನು ಸಂಸ್ಕರಣೆ, ವಿಲೇವಾರಿ, ನಿರ್ವಹಣೆ ಮಾಡಲು 3 ವರ್ಷಗಳ ಅವಧಿಗೆ ಹೊಸ ಟೆಂಡರ್ ಮಾಡಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ.
Related Articles
Advertisement
ಹಾಲಿ ಗುತ್ತಿಗೆ ಅವಧಿ ಮುಂದುವರಿಕೆ
ಈ ಪ್ರಕ್ರಿಯೆ ಅಂತಿಮಗೊಳ್ಳುವ ತನಕ ಪ್ರಸ್ತುತ ಒಣತ್ಯಾಜ್ಯ ಘಟಕದ ನಿರ್ವಹಣೆ ಯನ್ನು ಪಾಲಿಕೆಯಿಂದ ಹೆಚ್ಚುವರಿ ಯಾವುದೇ ಶುಲ್ಕವನ್ನು ಪಡೆಯದೇ ಲಭ್ಯ ವಿರುವ ಬೇಲಿಂಗ್ ಯಂತ್ರ, ಪಾಲಿ ಕೆಯಿಂದ ನೀಡುವ ನಿಗದಿತ ಮಾನವ ಸಂಪನ್ಮೂಲ ದೊಂದಿಗೆ ಹೆಚ್ಚುವರಿ ಸ್ವಂತ ಕಾರ್ಮಿಕರ ಸೇವೆ ಯನ್ನು ಬಳಸಿ ನಿರ್ವ ಹಣೆ ಮಾಡುವ ಎರಡೂ ಖಾಸಗಿ ಸಂಸ್ಥೆಗಳ ಗುತ್ತಿಗೆ ನಿರ್ವಹಣೆ ಅವಧಿಯನ್ನು ಮುಂದು ವರಿಸಲು ಪಾಲಿಕೆ ಚಿಂತನೆ ನಡೆಸಿದೆ.
ನಿತ್ಯ 99 ಟನ್ ಒಣಕಸ ಸಂಗ್ರಹ
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತೀ ಶುಕ್ರ ವಾರ ಸುಮಾರು 200 ಟನ್ ಒಣ ಕಸವನ್ನು ಸಂಗ್ರಹಿಸಲಾಗುತ್ತದೆ. ಇದನ್ನು ಪ್ರತೀದಿನಕ್ಕೆ ವಿಭಾಗ ಮಾಡಿದಾಗ ಸುಮಾರು 29 ಟನ್ ಒಣಕಸ ಪ್ರತೀದಿನ ಸಂಗ್ರಹ ಮಾಡಿ ದಂತಾಗುತ್ತದೆ. ಜತೆಗೆ, ವಾರಾಂತ್ಯದಲ್ಲಿ 20 ಟನ್ ಹಾಗೂ ಹಸಿ ಕಸದೊಂದಿಗೆ ಸೇರ್ಪಡೆಯಾಗಿ ಸುಮಾರು 50 ಟನ್ ಸಹಿತ ಒಟ್ಟು 99 ಟನ್ ಒಣಕಸ ಪ್ರತಿನಿತ್ಯ ಸಂಗ್ರ ಹವಾಗುತ್ತದೆ. ಈ ಬಗ್ಗೆ ಪಾಲಿಕೆಯಲ್ಲಿ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.
ಹೊಸ ಟೆಂಡರ್‌ಗೆ ನಿರ್ಧಾರ: ಪಚ್ಚನಾಡಿಯ ಸಂಸ್ಕರಣೆ ಘಟಕದಲ್ಲಿ ಸ್ವೀಕರಿಸಲಾಗುವ ಒಣತ್ಯಾಜ್ಯವನ್ನು ಸಂಸ್ಕರಣೆ, ವಿಲೇವಾರಿ ಮಾಡಲು ಹೊಸ ಟೆಂಡರ್‌ಗೆ ಪಾಲಿಕೆ ನಿರ್ಧರಿಸಿದೆ. ಇದರ ಸಾಧಕ – ಬಾಧಕ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಜತೆಗೆ ಶುಕ್ರವಾರ ಪಾಲಿಕೆಯಲ್ಲಿ ಚರ್ಚಿಸಲಾಗಿದೆ. ಶೀಘ್ರದಲ್ಲಿ ಟೆಂಡರ್ ಕುರಿತ ತೀರ್ಮಾನ ಕೈಗೊಳ್ಳಲಾಗುವುದು. -ಜಯಾನಂದ ಅಂಚನ್, ಮೇಯರ್, ಮಂ. ಪಾಲಿಕೆ
ದಿನೇಶ್ ಇರಾ