ಬೆಳ್ತಂಗಡಿ: ಭಾರತೀಯ ಭೂಸೇನೆಯಲ್ಲಿ 17 ವರ್ಷ ಸೇವೆಗೈದು ನಿವೃತ್ತಿಹೊಂದಿ ತವರೂರಿಗೆ ಮರಳಿದ ಯೋಧರಾದ ಕನ್ಯಾಡಿಯ ಸುಧಾಕರ ಗೌಡ ಮತ್ತು ಇಂದಬೆಟ್ಟುವಿನ ಮೇಘಶ್ಯಾಮ ಅವರಿಗೆ ಧರ್ಮಸ್ಥಳ ಹಾಗೂ ಉಜಿರೆ ಗ್ರಾಮಸ್ಥರ ವತಿಯಿಂದ ಉಜಿರೆಯಲ್ಲಿ ಭವ್ಯ ಸ್ವಾಗತ ಕೊರಲಾಯಿತು.
ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿ ಬಳಿಕ ಉಜಿರೆ ಪೇಟೆಯಿಂದ ಅವರ ಮನೆಯವರೆಗೆ ನಿವೃತ್ತ ಸೈನಿಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕನ್ಯಾಡಿ ಶಾಲೆವರೆಗೆ ಬಂದು ಮಕ್ಕಳು ಅಭಿನಂದಿಸಿದರು. ಬಳಿಕ ಮೆರವಣಿಗೆಯಲ್ಲಿ ತೆರಳಿ ಬೀಳ್ಕೊಡಲಾಯಿತು.
ಇದನ್ನೂ ಓದಿ:ಹಾಲಿನ ಪ್ಯಾಕೆಟ್ ಗಳು ಈತನ ಟಾರ್ಗೆಟ್: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು
ಉಜಿರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಪಿ.ಎಚ್., ಧರ್ಮಸ್ಥಳ ಗ್ರಾ.ಪಂ ಸದಸ್ಯರಾದ ಶ್ರೀನಿವಾಸ ರಾವ್, ಸುಧಾಕರ ಗೌಡ, ನಿವೃತ್ತ ಸೈನಿಕ ಗೋಪಾಲಕೃಷ್ಣ ಕಾಂಚೋಡು, ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ತುಂಗಪ್ಪ ಗೌಡ, ಉಜಿರೆ ಉದ್ಯಮಿ ಪದ್ಮನಾಭ ಶೆಟ್ಟಿಗಾರ್, ಸುದರ್ಶನ್ ಕನ್ಯಾಡಿ, ನವೀನ್ ಕನ್ಯಾಡಿ, ರವಿ ಚಕ್ಕಿತ್ತಾಯ, ಸೈನಿಕ ಸುಧಾಕರ ಗೌಡ ರವರ ಮಾತಾಪಿತರಾದ ಸುಂದರ ಗೌಡ ಮತ್ತು ವಿಶಾಲಾಕ್ಷಿ ದಂಪತಿ ಹಾಗೂ ಕುಟುಂಬವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ:ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಧರ್ಮಸ್ಥಳದಿಂದ 25 ಲಕ್ಷ ರೂ. ನಿಧಿ ಸಮರ್ಪಣೆ