ಶ್ರೀನಗರ: ಎರಡು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಪೂಂಛ್ ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಐವರು ಯೋಧರು ಹುತಾತ್ಮರಾಗಿದ್ದು ಈ ನಡುವೆ ಹುತಾತ್ಮರಾದ ಐವರು ಯೋಧರಲ್ಲಿ ಓರ್ವರಾದ ಗೌತಮ್ ಕುಮಾರ್ ಅವರಿಗೆ ಮದುವೆ ನಿಗದಿಯಾಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಕೋಟ್‌ದ್ವಾರದ ಯೋಧ ಗೌತಮ್ ಕುಮಾರ್ (28) ಅವರು ಡಿಸೆಂಬರ್ 16 ರಂದು ತಮ್ಮ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಪೂಂಛ್ ನಲ್ಲಿ ಭಯೋತ್ಪಾದಕರ ಕಾರ್ಯಾಚರಣೆಗೆ ತೆರಳುತ್ತಿದ್ದ ವೇಳೆ ಉಗ್ರರ ಗುಂಡಿನ ದಾಳಿಗೆ ಐವರು ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ಐವರಲ್ಲಿ ಮದುವೆ ನಿಗದಿಯಾಗಿದ್ದ ಗೌತಮ್ ಕುಮಾರ್ ಕೂಡ ಓರ್ವರು.
ಡಿಸೆಂಬರ್ ತಿಂಗಳಲ್ಲಿ ರಜೆಯಲ್ಲಿ ಊರಿಗೆ ತೆರಳಿದ್ದ ಗೌತಮ್ ಗೆ ಮದುವೆ ನಿಗದಿಯಾಗಿತ್ತು ಅಲ್ಲದೆ ಮುಂಬರುವ ಮಾರ್ಚ್ 11, 2024 ರಂದು ಮದುವೆ ನಿಗದಿಯಾಗಿತ್ತು ಎಲ್ಲ ಮಾತುಕತೆ ಮುಗಿಸಿ ಡಿಸೆಂಬರ್ 16 ರಂದು ಕರ್ತವ್ಯಕ್ಕೆ ಹಾಜರಾಗಿದ್ದರು ಆದರೆ ವಿಧಿಯಾಟ ಭಯೋತ್ಪಾದಕರ ದಾಳಿಗೆ ಗೌತಮ್ ಜೀವ ತೆತ್ತಿದ್ದಾರೆ.
ಗೌತಮ್ ಹತರಾದ ವಿಚಾರ ಅವರ ಸಹೋದರ ರಾಹುಲ್ ಕುಮಾರ್ ಅವರಿಗೆ ಶುಕ್ರವಾರ ಮಧ್ಯರಾತ್ರಿಯ ತಿಳಿಸಲಾಗಿತ್ತು ವಿಚಾರ ತಿಳಿಯುತ್ತಲೇ ಕುಟುಂಬ ದುಃಖದಲ್ಲಿ ಮುಳುಗಿದೆ.
ಗೌತಮ್ ಕುಮಾರ್ ಮೃತದೇಹ ಊರಿಗೆ ತರಲು ಸೈನಿಕ ಕಲ್ಯಾಣ ಮಂಡಳಿಯನ್ನು ಸಂಪರ್ಕಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದ್ದು. ಸದ್ಯ ಅವರ ಪಾರ್ಥಿವ ಶರೀರ ಕೋಟ್‌ದ್ವಾರ ತಲುಪಿದ ನಂತರವೇ ಅಂತಿಮ ಸಂಸ್ಕಾರ ಎಲ್ಲಿ ನಡೆಯಲಿದೆ ಎಂಬ ಮಾಹಿತಿ ಹೊರಬೀಳಲಿದೆ.
ಇದನ್ನೂ ಓದಿ: Hindu temple: ಅಮೆರಿಕಾದಲ್ಲಿ ಭಾರತ ವಿರೋಧಿ ಘೋಷಣೆ ಬರೆದು ಹಿಂದೂ ದೇವಾಲಯ ವಿರೂಪ