Advertisement
ಉಗ್ರರು ಎಂದು ತಿಳಿಯದೆ ಸ್ಥಳೀಯರು ಸಣ್ಣ ಪುಟ್ಟ ಸಹಾಯ ಮಾಡಿದರೆ ಅದನ್ನು ಬಾಡಿ ಕ್ಯಾಮ್ ಮೂಲಕ ಚಿತ್ರೀಕರಿಸುತ್ತಾರೆ. ಅನಂತರ ಆ ವೀಡಿಯೋಗಳನ್ನು ಪ್ರದರ್ಶಿಸಿ ತಮ್ಮ ಪರವಾಗಿ ಕೆಲಸ ಮಾಡದಿದ್ದರೆ ಪೊಲೀಸರಿಗೆ ಅಥವಾ ಸೇನೆಗೆ “ಉಗ್ರರ ಪರ ಕೆಲಸ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡುವ ಬೆದರಿಕೆ ಒಡ್ಡುತ್ತಾರೆ. ತಮಗೆ ಊಟ, ವಸತಿ ಮತ್ತಿತರ ವ್ಯವಸ್ಥೆಗಳನ್ನು ಮಾಡದಿದ್ದರೆ ಈ ವೀಡಿಯೋಗಳನ್ನು ವೈರಲ್ ಮಾಡಿ ಉಗ್ರರೊಂದಿಗೆ ನಂಟು ಹೊಂದಿರುವಂತೆ ಬಿಂಬಿಸುವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಉಲ್ಲೇಖೀಸಿ ಇಂಗ್ಲಿಷ್ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಕಣಿವೆಯಾದ್ಯಂತ 110 ಮಂದಿ ವಿದೇಶಿ ಉಗ್ರರು ಸಕ್ರಿಯರಾಗಿದ್ದಾರೆ. ಈ ಪೈಕಿ ಉತ್ತರ ಪೀರ್ ಪಾಂಜಾಲ್ ಶ್ರೇಣಿಯಲ್ಲಿ 60 ಉಗ್ರರು ಸಕ್ರಿಯರಾಗಿದ್ದರೆ, 50 ಮಂದಿ ದಕ್ಷಿಣ ಶ್ರೇಣಿಗಳಲ್ಲಿ ಅಡಗಿದ್ದಾರೆಂದು ಶೋಧ ಕಾರ್ಯಾಚರಣೆ ನಿರತ ಭದ್ರತ ಪಡೆಗಳು ಮಾಹಿತಿ ನೀಡಿವೆ.
Related Articles
Advertisement