Advertisement

ಹೊನ್ನಾಳಿ : ಪ್ರೇಯಸಿಯ ತಂದೆಗೆ ಗುಂಡು ಹಾರಿಸಿದ ಯೋಧ

09:29 AM May 26, 2019 | Vishnu Das |

ದಾವಣಗೆರೆ:ಯೋಧನೊಬ್ಬ ತನ್ನ ಪ್ರೇಯಸಿಯ ತಂದೆಯ ಮೇಲೆ ಗುಂಡು ಹಾರಿಸಿರುವ ಘಟನೆ ಹೊನ್ನಾಳಿಯ ಬಿದರಘಟ್ಟೆಯಲ್ಲಿ ನಡೆದಿದೆ.

Advertisement

ದೇವರಾಜ್‌ ಎನ್ನುವ 27 ವರ್ಷದ ಯೋಧ ರಜೆಯ ಮೇಲೆ ಊರಿಗೆ ಬಂದಿದ್ದು, ಪ್ರೇಯಸಿಯ ತಂದೆ ಪ್ರಕಾಶ್‌ ಎನ್ನುವವರೊಂದಿಗೆ ಜಗಳವಾಡಿದ್ದು ಈ ವೇಳೆ ಗುಂಡು ಹಾರಿಸಿರುವುದಾಗಿ ವರದಿಯಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಪ್ರಕಾಶ್‌ ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊನ್ನಾಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಯೋಧ ದೇವ್‌ರಾಜ್‌ನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next