Advertisement

Soldier ; ಇಂಡಿಯ ಯೋಧ ಅನಾರೋಗ್ಯದಿಂದ ಲಕ್ನೋದಲ್ಲಿ ಕೊನೆಯುಸಿರು

09:08 PM Sep 04, 2023 | Team Udayavani |

ಇಂಡಿ: ತಾಲೂಕಿನ ಖೇಡಗಿ ಗ್ರಾಮದ ಯೋಧ ಪ್ರಕಾಶ್ ಶಿರಶ್ಯಾಡ್ ಅವರು ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದ ಘಟನೆ ಭಾನುವಾರ ಲಕ್ನೋ ದ ಕಮಾಂಡೋ ಮಿಲ್ಟ್ರಿ ಆಸ್ಪತ್ರೆಯಲ್ಲಿ ನಡೆದಿದೆ.

Advertisement

ಬೆಳಗ್ಗೆ 11:40ಕ್ಕೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಪ್ರಕಾಶ್ 2011 ರಲ್ಲಿ ಸೇನೆಗೆ ಸೇರಿದ್ದರು. 7 ಮದ್ರಾಸ್ ರೆಜಮೆಂಟ್ ವೆಲಿಂಗ್ಟನ್ ನಲ್ಲಿ ತರಬೇತಿ ಪಡೆದು ನಂತರ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸಿ ಸದ್ಯ ಮಧ್ಯಪ್ರದೇಶದ ಗ್ಲಾಲಿಯರ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಲೆಬನಾನ್ ದಲ್ಲಿ ಇಂಡೋ- ಲೇಬನಾನ್ ಜಂಟಿ ಸಮಾರಾಭ್ಯಾಸದಲ್ಲಿ ಭಾಗಿಯಾಗಿದ್ದರು. ತಂದೆ ನೀಲಪ್ಪ, ತಾಯಿ ರಗಮಾಬಾಯಿ, ಪತ್ನಿ ಕವಿತಾ, ಮಕ್ಕಳಾದ ಪ್ರತಿಕ್ಷಾ, ಪ್ರಗತಿ, ಸಹೋದರ ಸಂತೋಷ ಅವರನ್ನು ಅಗಲಿದ್ದಾರೆ. ಮೃತ ಯೋಧ ಪ್ರಕಾಶ್ ಅಂತ್ಯಕ್ರಿಯೆ ನಾಳೆ (ಮಂಗಳವಾರ) ಸಕಲ ಸರಕಾರಿ ಗೌರವದೊಂದಿಗೆ ಖೇಡಗಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next