Advertisement

ಸೋಲ್ಡ್‌ ಆದ್ರು ಡ್ಯಾನಿಶ್‌!

07:08 AM Feb 20, 2022 | Team Udayavani |

ನಟ ಡ್ಯಾನಿಶ್‌ ಸೇಠ್ ಸದ್ದಿಲ್ಲದೇ ಹೊಸ ಚಿತ್ರ ವೊಂದರಲ್ಲಿ ನಟಿಸಿದ್ದಾರೆ. ಆ ಚಿತ್ರದ ಹೆಸರು ಸೋಲ್ಡ್‌. ಕಾಮಿಡಿ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುವ ಡ್ಯಾನಿಶ್‌ ಸೇಠ್, ಈ ಚಿತ್ರದಲ್ಲಿ ಕಾಮಿಡಿಹೊರತು ಪಡಿಸಿದ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Advertisement

ಕ್ರೈಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪ್ರೇರಣಾ ಅಗರವಾಲ್‌ನಿರ್ದೇಶಿಸಿದ್ದಾರೆ. ಸಾಕಷ್ಟುಕಿರುಚಿತ್ರಗಳನ್ನು ನಿರ್ದೇಶಿಸಿಅನುಭವವಿರುವ ಪ್ರೇರಣಾ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಕನ್ನಡದಲ್ಲಿ ಬೆರಳೆಣಿಕೆಯಷ್ಟು ಮಾತ್ರವಿರುವ ನಿರ್ದೇಶಕಿಯರ ಸಾಲಿಗೆ ಪ್ರೇರಣ ಸೇರಿದ್ದಾರೆ. ಚಿತ್ರದಲ್ಲಿ ನಟಿಸಿರುವ ದೀಪಂ ಕೊಹ್ಲಿ ಈ ಚಿತ್ರದ ನಿರ್ಮಾಪಕರು. “ನಮ್ಮ ಚಿತ್ರತಂಡದ ಎಲ್ಲಾ ಸದಸ್ಯರು 28ರ ಆಸುಪಾಸಿನ ವಯಸ್ಸಿನವರು. ಉತ್ಸಾಹಿ ಯುವ ತಂಡದಿಂದ ಉತ್ತಮ ಚಿತ್ರವೊಂದು ತಯಾರಾಗಿದೆ.

ಮಾರ್ಚ್‌ 4 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ’ ಎಂದು ನಿರ್ಮಾಪಕ ದೀಪಂ ಕೊಹ್ಲಿ ತಿಳಿಸಿದ್ದಾರೆ.

ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು, ಈ ಚಿತ್ರಕ್ಕೆ ಜೀತ್‌ ಸಿಂಗ್‌ ಸಂಗೀತ ನೀಡಿದ್ದಾರೆ. ಸಮೀರ್‌ ದೇಶಪಾಂಡೆ ಛಾಯಾಗ್ರಹಣ ಮಾಡಿದ್ದಾರೆ. ಶಿವಾನಿ ಆರ್‌ ಬಲ್ಲುಕರಾಯ,ದೀಪಂ ಕೊಹ್ಲಿ, ಕಾವ್ಯಾ ಶೆಟ್ಟಿ,ಭರತ್‌ ಜೆ.ಬಿ, ಸಿದ್ಧಾರ್ಥ್ ಮಾಧ್ಯಮಿಕ, ಉಗ್ರಂ ಮಂಜು,ಭವಾನಿ ಪ್ರಕಾಶ್‌, ಹನುಮಂತೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next