ಬೆಳ್ತಂಗಡಿ: ಇತೀ¤ಚಿನ ದಿನಗಳಲ್ಲಿ ಸೀಮಿತವಾದ ಶಕ್ತಿಯ ಮೂಲಗಳು ಮತ್ತು ಅತಿಯಾದ ಮಾಲಿನ್ಯದಿಂದಾಗಿ ಹಲವು ರೀತಿಯ ಸಮಸ್ಯೆ ಉದ್ಭವವಾಗುತ್ತಿವೆ. ಆ ರೀತಿಯ ಸಮಸ್ಯೆಗಳನ್ನು ಸಾಂಪ್ರದಾಯಿಕವಲ್ಲದ ಶಕ್ತಿಗಳ ಮೂಲಕ ಬಗೆಹರಿಸಬಹುದು. ಅಂತಹದರಲ್ಲಿ ಒಂದು ಸೋಲಾರ್ ಶಕ್ತಿಯ ಬಳಕೆಯ ಅಂಗವಿಕಲರಿಗೆ ಮಿತ್ರನಾಗಿ ಕೆಲಸ ಮಾಡುವ ಸೋಲಾರ್ ಟ್ರೈಸೈಕಲ್ ಎಂಬ ಕಿರು ಯಂತ್ರ. ಇದನ್ನು ಕಾರ್ಯರೂಪಕ್ಕೆ ತಂದವರು ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಮೋಘರಾಜ್ ಸಿ.ಎನ್., ಅಖೀಲ್ ಎಂ., ಶಾಸಪ್ಪ ವಿ.ಜಿ., ಸುನೀಲಾ ಬಿ. ಅವರು.
ಈ ಪ್ರಾಜೆಕ್ಟನ್ನು ಕಾಲೇಜಿನ ಸಂಶೋಧನೆ ಮತ್ತು ಆವಿಷ್ಕಾರ ವಿಭಾಗದ ಮುಖ್ಯಸ್ಥ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ| ಬಸವ ಟಿ. ಅವರ ಮಾರ್ಗದರ್ಶನದಲ್ಲಿ ವಿನ್ಯಾಸ ಮಾಡಿದ್ದಾರೆ.
ಇದನ್ನು ಅಂಗವಿಕಲರಿಗೆ ಬೇಕಾದ ರೀತಿಯಲ್ಲಿ ಬಳಸಲು ಆಗುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಈ ಯಂತ್ರವು 20 ಕಿ.ಮೀ. ದೂರದ ತನಕ ಸೋಲಾರ್ ಶಕ್ತಿಯನ್ನು ಬಳಸಿ ಸಾಗಬಲ್ಲದು. 95 ಕೆ.ಜಿ. ಭಾರ ಹೊರಬಹುದು. ಕಾಲೇಜಿನ
ಸೆಲ್ಕೊ ಫೌಂಡೇಶನ್‌ನ ಮುಖ್ಯಸ್ಥ ಲಿಂಗಪ್ಪ ಅವರು ಈ ಪ್ರಾಜೆಕ್ಟ್ಗೆ ಸಹಕರಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ| ಕೆ.
ಸುರೇಶ್ ಅವರು ಮಾರ್ಗದರ್ಶನ ನೀಡಿದ್ದಾರೆ.