ವಾಷಿಂಗ್ಟನ್: ಇಡೀ ಪ್ರಪಂಚವೇ ಕೊರೊನಾ ಸಂಕಷ್ಟದಿಂದ ನರಳುತ್ತಿರುವ ಈ ಹೊತ್ತಿನಲ್ಲಿ ಸೂರ್ಯನ ಶಾಖದ ಅಲೆಗಳು ಸೌರ ಚಂಡಮಾರುತದ ರೂಪದಲ್ಲಿ ಗುರುವಾರದಂದು ಭೂಮಿಗೆ ಅಪ್ಪಳಿಸಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ವೃತ್ತಾಕಾರದ, ಅಯಸ್ಕಾಂತೀಯ ಗುಣವುಳ್ಳ ಈ ಅಲೆಗಳು ಒಂದು ಸೆಕೆಂಡ್‌ಗೆ 328 ಕಿ.ಮೀ.ನಷ್ಟು ದೂರ ಹಾಗೂ ಪ್ರತಿ ಗಂಟೆಗೆ 13 ಲಕ್ಷ ಕಿ.ಮೀ.ನಷ್ಟು ದೂರ ಸಾಗಿಬರುತ್ತಿದ್ದು, ವಿಕಿರಣಗಳ ರೂಪದಲ್ಲಿ ಇಡೀ ಸೌರಮಂಡಲದಲ್ಲೆಲ್ಲಾ ಹರಡುತ್ತಿವೆ.
ಸೂರ್ಯನಲ್ಲಿ ನಿರಂತರವಾಗಿ ನಡೆಯುವ ರಾಸಾಯನ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದಲೇ ಅದೊಂದು ಉರಿಯುವ ಗೋಳದ ರೂಪದಲ್ಲಿರುತ್ತದೆ. ಸೂರ್ಯನಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಏರುಪೇರಾದರೆ, ಇಂಥ ಸೌರ ಅಲೆಗಳು ಚಂಡ ಮಾರುತದ ರೂಪದಲ್ಲಿ ಏಳುತ್ತವೆ.
ಇದನ್ನೂ ಓದಿ :ಅಂತ್ಯಕ್ರಿಯೆಗೆ ಹೋದವರು ದುರಂತ ಅಂತ್ಯವಾದರು.! : ಕಾರು ಅಪಘಾತದಲ್ಲಿ ನಾಲ್ವರು ಸಾವು
ಇಂಥ ಅಲೆಗಳಿಗೆ ಮೂಲವಾಗಿರುವುದು ಸೂರ್ಯನ ಮೇಲ್ಮೆ„ನಲ್ಲಿರುವ ಸನ್‌ಸ್ಪಾಟ್‌ಗಳು. “ವರ್ಲ್x ಸೈನ್ಸ್ ಫೆಸ್ಟಿವಲ್’ ಹೇಳುವ ಪ್ರಕಾರ, ಇವು ಅಪ್ಪಳಿಸಿದಾಗ ಬಾಹ್ಯಾಕಾಶದಲ್ಲಿ ಹಾರಾಡುತ್ತಿರುವ ಉಪಗ್ರಹಗಳ ಮೇಲ್ಮೆ„ಗೆ ಧಕ್ಕೆಯಾಗುತ್ತದೆ. ಅದರಿಂದ, ಭೂಮಿಯಲ್ಲಿ ನಡೆಯುವ ಉಪಗ್ರಹ ಆಧಾರಿತ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಹುದು.