ಹೊಸದಿಲ್ಲಿ: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜಯ ಸಾಧಿಸಿದ್ದ ಬಗ್ಗೆ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾ| ಎ.ಎಸ್. ಬೋಪಣ್ಣ ಮತ್ತು ನ್ಯಾ| ದೀಪಂಕರ್ ದತ್ತಾ ನೇತೃತ್ವದ ನ್ಯಾಯಪೀಠ ಸರಿತಾ ಎಸ್. ನಾಯರ್ ಎಂಬವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಿತು.
ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ನಾಯರ್ ಸಲ್ಲಿ ಸಿದ್ದ ಮೇಲ್ಮ ನವಿಯನ್ನು ನ್ಯಾಯಪೀಠ ವಿಚಾರಣೆಗೆ ಮತ್ತೆ ಪರಿಗಣಿಸಲು ಒಪ್ಪಿಕೊಂಡಿತು.
ಗಮನಾರ್ಹ ಅಂಶವೆಂದರೆ 2020ರ ನ.2ರಂದು ಅರ್ಜಿದಾರರು ಕೋರ್ಟ್‌ನಲ್ಲಿ ಉಪಸ್ಥಿತರಿರದೇ ಇದ್ದುದರಿಂದ ಸುಪ್ರೀಂ ಕೋರ್ಟ್ ಸರಿತಾ ಅರ್ಜಿಯನ್ನು ತಿರಸ್ಕರಿಸಿತ್ತು. ಆ ಸಂದರ್ಭದಲ್ಲಿ ಮುಖ್ಯ ನ್ಯಾಯಾಧೀ ಶರಾಗಿದ್ದ ಎಸ್. ಎ.ಬೋಬೆx ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ವಿಚಾರಣೆ ನಡೆಸಿತ್ತು.
ಚುನಾವಣೆಯಲ್ಲಿ ರಾಹುಲ್ ಗಾಂಧಿಯವರು ಸಿಪಿಐನ ಪಿ.ಪಿ.ಸುನೀರ್ ವಿರುದ್ಧ 2,74,597 ಮತಗಳ ಅಂತರದಿಂದ ಜಯಗಳಿಸಿದ್ದರು. ರಾಹುಲ್ ಅವರಿಗೆ 4,31, 770 ಮತಗಳು ಪ್ರಾಪ್ತವಾಗಿದ್ದವು.