Advertisement

ಉಡುಪಿಯ ಸರಕಾರಿ ಆಸ್ಪತ್ರೆಗಳಿಗೆ “ಸೌರಶಕ್ತಿ’ಯ ಬಲ

12:17 AM Dec 22, 2022 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸದ್ಯದಲ್ಲಿಯೇ ಸುಸಜ್ಜಿತ ಸೌರಶಕ್ತಿ ಆಧಾರಿತ ಆಸ್ಪತ್ರೆಗಳಾಗಿ ಪರಿವರ್ತನೆಯಾಗಲಿವೆ.

Advertisement

ಇದಕ್ಕಾಗಿ ಜಿಲ್ಲಾ ಆರೋಗ್ಯ ಇಲಾಖೆಯು ಸೆಲ್ಕೋ ಫೌಂಡೇಶನ್‌ ಮುಂದಾಳತ್ವದಲ್ಲಿ ದಾನಿಗಳು ಮತ್ತು ಪಂಚಾಯತ್‌ಗಳ ಸಹಕಾರದೊಂದಿಗೆ ಆಸ್ಪತ್ರೆಗಳಲ್ಲಿ ಸೌರಶಕ್ತಿ ಅಳವಡಿಸಲು ಮುಂದಾಗಿದೆ.

ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಸರಕಾರಿ ಆಸ್ಪತ್ರೆಗಳ ಜತೆಗೆ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೌರಶಕ್ತಿ ಯನ್ನು ಉತ್ಪಾದಿಸುವುದರೊಂದಿಗೆ ವಿದ್ಯುತ್‌ ವಿಷಯದಲ್ಲಿ ಸ್ವಾವಲಂಬಿ ಯಾಗಬೇಕು ಅನ್ನುವುದು ಸರಕಾರದ ಆದೇಶ. ಆದರೆ ಅನುದಾನ, ಹತ್ತಾರು ಕಾರಣಗಳಿಂದ ರಾಜ್ಯವ್ಯಾಪಿ ಸಮರ್ಪಕ ಅನುಷ್ಠಾನಗೊಂಡಿಲ್ಲ.
ಉಡುಪಿ ಡಿಎಚ್‌ಒ ಡಾ| ನಾಗಭೂಷಣ ಉಡುಪ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ.

ಪ್ರಥಮ ಪ್ರಯೋಗ
ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ 2019ರಲ್ಲಿ ಕುಗ್ರಾಮ ಹಳ್ಳಿಹೊಳೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಯೋ ಗಿಕ ನೆಲೆಯಲ್ಲಿ ಅಳ ವಡಿಸಲಾಗಿತ್ತು. ಸೆಲ್ಕೊ ಸೋಲಾರ್‌ ಫೌಂಡೇಶನ್‌, ಕಮಲಶಿಲೆ ದೇಗುಲ ಹಾಗೂ ಲಯನ್ಸ್‌ ಕ್ಲಬ್‌ ಕುಂದಾಪುರ ಸಹಕರಿಸಿದ್ದರು.

ಪ್ರಸ್ತುತ ಬೆಳ್ವೆ, ಶಂಕರನಾರಾಯಣ, ಕಂಡೂÉರು, ಪಡುಬಿದ್ರಿಗಳಲ್ಲಿಯೂ ಬಳಸಲಾಗುತ್ತಿದೆ. ಶೀಘ್ರದಲ್ಲಿಯೇ ಬಿದ್ಕಲ್‌ಕಟ್ಟೆ, ಕಿರಿಮಂಜೇಶ್ವರ ಮತ್ತು ಮಲ್ಪೆಯಲ್ಲಿ ಅಳವಡಿಕೆಯಾಗಲಿದೆ.

Advertisement

ಹಳ್ಳಿಹೊಳೆಯಲ್ಲಿ ಮಾಡಿರುವ ಸೌರಶಕ್ತಿ ಯೋಜನೆ ಯಶಸ್ವಿ ಯಾಗಿದ್ದು, ಪ್ರಸ್ತುತ 5 ಕಡೆಗಳಿಗೆ ವಿಸ್ತರಿಸಲಾಗಿದೆ. ಇನ್ನೆರಡು ವರ್ಷಗಳಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸುವ ಯೋಜನೆಯಿದೆ. ಸ್ಥಳೀಯ ಪಂಚಾಯತ್‌, ದಾನಿಗಳ ಸಹಕಾರ ಬೇಕಿದೆ.
– ಡಾ| ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿ

ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರ ಣೆಗೆ ಒತ್ತು ಕೊಡುವುದು ನಮ್ಮ ಸಂಸ್ಥೆಯ ಪ್ರಮುಖ ಆದ್ಯತೆ. ಅದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 4-5 ಲಕ್ಷ ರೂ. ವೆಚ್ಚದಲ್ಲಿ ಸೌರಶಕ್ತಿ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಶೇ. 70ರಷ್ಟು ವೆಚ್ಚ ನಮ್ಮದು ಹಾಗೂ ಉಳಿದ ಪಾಲು ದಾನಿಗಳದ್ದು.
– ಶೇಖರ್‌ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕರು, ಸೆಲ್ಕೊ ಫೌಂಡೇಶನ್‌

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next