Advertisement

ಮನೆ ಮೇಲೆ ಸೌರಘಟಕ: ಸರ್ಕಾರಕ್ಕೇ ವಿದ್ಯುತ್‌ ಮಾರಾಟ 

10:16 PM Jul 29, 2023 | Team Udayavani |

ಹೈದರಾಬಾದ್‌: ಕಲ್ಲಿದ್ದಲು, ತೈಲ, ಜೈವಿಕ ಅನಿಲದಂತಹ ಇನ್ನಿತರೆ ವಸ್ತುಗಳನ್ನು ಇಂಧನಕ್ಕಾಗಿ ಬಳಸುವ ಬದಲು ಪರಿಸರಸ್ನೇಹಿ ಇಂಧನದ ಪ್ರಮಾಣ ಹೆಚ್ಚಿಸಲು ಭಾರತ ಸರ್ಕಾರ ಪಣತೊಟ್ಟಿದೆ. ಇದಕ್ಕೆ ಪ್ರಜೆಗಳೂ ಸಾಥ್‌ ನೀಡುತ್ತಿದ್ದು, ಹೈದರಾಬಾದ್‌ನ ವ್ಯಕ್ತಿಯೊಬ್ಬರು ಸರ್ಕಾರಕ್ಕೇ ಸೌರ ವಿದ್ಯುತ್‌ ಮಾರಾಟ ಮಾಡುತ್ತಿರುವುದು ಇದಕ್ಕೊಂದು ಉತ್ತಮ ನಿದರ್ಶನವಾಗಿದೆ.

Advertisement

ಕರೆಂಟ್‌ ಹೋಯ್ತು ಎನ್ನುವ ಮಾತೇ ಇಲ್ಲದಂತೆ ಮನೆಗೆ ಸದಾಕಾಲ ವಿದ್ಯುತ್‌ ಪೂರೈಕೆಯಾಗುವಂಥ ಸೌರ ವಿದ್ಯುತ್‌ ಘಟಕವನ್ನು ಸ್ಥಾಪಿಸಿರುವವರೇ ಹೈದರಾಬಾದ್‌ ನಿವಾಸಿ ಶಿವಕುಮಾರ್‌ ಸೇತುರಾಮನ್‌. ಇದರಿಂದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಪ್ರಕೃತಿಗೆ ಕೊಡುಗೆ ನೀಡುವುದಷ್ಟೇ ಅಲ್ಲದೇ, ಸರ್ಕಾರಕ್ಕೂ ಮಾರಾಟ ಮಾಡುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನೂ ಉತ್ತಮಗೊಳಿಸಿಕೊಳ್ಳುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಭಾರತ ಸರ್ಕಾರವು ಸೌರ ವಿದ್ಯುತ್‌ ಘಟಕಗಳ ಸ್ಥಾಪನೆಗೆ ನಾಗರಿಕರನ್ನು ಪ್ರೋತ್ಸಾಹಿಸುತ್ತಿದ್ದು, ಅದಕ್ಕಾಗಿಯೇ ಕೆಲ ಅನುಮೋದಿತ ಏಜೆನ್ಸಿಗಳು ಕೂಡ ಇವೆ. ಒಂದಷ್ಟು ಉಳಿತಾಯದ ಹಣ ಮತ್ತು ಮನೆ ಮೇಲೆ ಸೂರ್ಯನ ಬೆಳಕು ಚೆನ್ನಾಗಿ ಬೀಳುವಂಥ ಮಹಡಿ ಇದ್ದರೆ ಸಾಕು, ಅರ್ಜಿ ಮಂಜೂರಾತಿ, ಸೌರ ಫ‌ಲಕಗಳ ಅಳವಡಿಕೆ ಎಲ್ಲವೂ ಏಜೆನ್ಸಿಗಳೇ ವಹಿಸಿಕೊಳ್ಳುತ್ತವೆ ಎಂದಿದ್ದಾರೆ..

ಖರ್ಚು ವೆಚ್ಚವೆಷ್ಟು?
ಪ್ರತಿ ಸೌರಫ‌ಲಕ ದಿನವೊಂದಕ್ಕೆ 4ರಿಂದ 5 ಯೂನಿಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ನಾವೀಗ 5 ಪ್ಯಾನೆಲ್‌ಗ‌ಳಿಂದ ದಿನಕ್ಕೆ 20ರಿಂದ 22 ಯೂನಿಟ್‌ ಹಾಗೂ ತಿಂಗಳಿಗೆ 600 ಯೂನಿಟ್‌ಗಳವರೆಗೆ ವಿದ್ಯುತ್‌ ಉತ್ಪಾದಿಸಿ, ಮನೆ ಬಳಕೆಗೆ ಮಾತ್ರವಲ್ಲದೇ, ಸರ್ಕಾರಕ್ಕೂ ಮಾರಾಟ ಮಾಡುತ್ತಿದ್ದೇವೆ. ಈ ಸೌರ ಘಟಕ ಸ್ಥಾಪನೆಗೆ ನಮಗೆ ತಗುಲಿದ ವೆಚ್ಚ 3.2 ಲಕ್ಷ ರೂ. ಮಾತ್ರವೆಂದು ಶಿವಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next