Advertisement

ಲಕ್ಷ ವಿದ್ಯಾರ್ಥಿಗಳಿಗೆ ಸೋಲಾರ್‌ ಕಿಟ್‌

06:00 AM Jul 28, 2018 | Team Udayavani |

ಮುಂಬಯಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮದಿನ ಪ್ರಯುಕ್ತ, ಅ.2ರಂದು ದೇಶದ 1 ಲಕ್ಷ ವಿದ್ಯಾರ್ಥಿಗಳಿಗೆ ಸೋಲಾರ್‌ ಲ್ಯಾಂಪ್‌ ಕಿಟ್‌ ನೀಡಲಾಗುತ್ತದೆ. ಐಐಟಿ ಬಾಂಬೆಯ ವಜ್ರಮಹೋತ್ಸವ ಕಾರ್ಯಕ್ರಮ ಪ್ರಯುಕ್ತ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸೌರ ಶಕ್ತಿ ರಾಯಭಾರಿಗಳಾಗಿರುವ 5 ಸಾವಿರ ವಿದ್ಯಾರ್ಥಿಗಳಿಗೆ ಕಿಟ್‌ ನೀಡಲಾಗುತ್ತದೆ. ಉಳಿದವರಿಗೆ ಆಯ್ಕೆ ಮಾಡಲಾಗಿರುವ ದೇಶದ 100 ಶಾಲೆಗಳಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಕಿಟ್‌ ನೀಡಲಾಗುತ್ತದೆ. 

Advertisement

ಐಐಟಿ ಬಾಂಬೆಯ ಸೌರ ಶಕ್ತಿಯ ಮೂಲಕ ಸ್ಥಳೀಯ ಪ್ರದೇಶದ ಸಹ್ಯ ಅಭಿವೃದ್ಧಿ (ಎಸ್‌ಒಯುಐಎಸ್‌) ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಕಿಟ್‌ಗೆ 500 ರೂ.ಇದೆ. ಇದರ ಜತೆಗೆ ಪ್ರತಿ ವಿದ್ಯಾರ್ಥಿಗೆ 100 ರೂ. ಕೂಡ ನೀಡಲಾಗುತ್ತದೆ. ಅದಕ್ಕೆ ಕೇಂದ್ರ ಹೊಸ ಮತ್ತು ಪುನರ್‌ಬಳಕೆ ಶಕ್ತಿ ಖಾತೆ ಸಚಿವಾಲಯ ನೆರವನ್ನೂ ನೀಡಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು www.solarstudents.org ಕ್ಕೆ ಭೇಟಿ ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next