Advertisement

ಸೋಲಾರ್‌ ಇಂಪಲ್ಸ್‌ ಸೌರ ಶಕ್ತಿಯಲ್ಲಿ ಹಾರುವ ವಿಮಾನ

09:56 AM Nov 25, 2019 | mahesh |

ಏರ್‌ಟ್ರಾನ್ಸ್‌ಪೊಪೋರ್ಟ್‌ ಆ್ಯಕ್ಷನ್‌ ಗ್ರೂಪ್‌ ಸಂಸ್ಥೆಯ 2014ರ ವರದಿಯ ಪ್ರಕಾರ ಆ ವರ್ಷ ಒಟ್ಟು 37.4 ಮಿಲಿಯನ್‌ ವಿಮಾನಗಳು ಪ್ರಪಂಚದಾದ್ಯಂತ ಯಾನವನ್ನು ನಡೆಸಿದ್ದವು.ಇಂದು ದಿನವೊಂದಕ್ಕೆ ಸರಾಸರಿ 1,02,465 ವಿಮಾನಗಳು ಹಾರಾಟನಡೆಸುತ್ತಿವೆ.

Advertisement

ವಿಮಾನಗಳಿಗೆ ಹೆಚ್ಚಿನ ಗುಣಮಟ್ಟ ಹಾಗೂ ಪ್ರಮಾಣದ ಪೆಟ್ರೋಲ್‌ ಆವಶ್ಯಕತೆಯಿದ್ದು, ಇದೇ ರೀತಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಅತಿಯಾದರೆ ಮುಂದೆ ಇಂಧನಗಳಿಲ್ಲದ ಅಂಧಕಾರದಲ್ಲಿ ರಾತ್ರಿಗಳನ್ನು ಕಳೆಯಬೇಕಾದೀತು. ಇದರಿಂದಾಗಿ ಇಂದು ನವೀಕರಿಸಬಹುದಾದ ಇಂಧನದಮೂಲಗಳ ಬಳಕೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ. ಅವುಗಳ ಪೈಕಿ ಸೌರಶಕ್ತಿ ಯನ್ನು ಯಥೇತ್ಛವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಬಳಸಲು ಅವಕಾಶವಿದ್ದು, ವಿಮಾನಯಾನ ಕ್ಷೇತ್ರದಲ್ಲೂ ಸೌರಶಕ್ತಿಯ ಬಳಕೆಯ ಪ್ರಯೋಗವು ಯಶಸ್ವಿಯಾಗಿ ನಡೆದಿದೆ.ಈ ಮೂಲಕ ಸೋಲಾರ್‌ ಇಂಪಲ್ಸ್ -2 ಸೌರ ವಿಮಾನಯಾನ ಕ್ಷೇತ್ರಕ್ಕೆ ತಾರ್ಕಿಕ ಉತ್ತರವನ್ನು ನೀಡಿದೆ.

ಸೋಲಾರ್‌ ಇಂಪಲ್ಸ್-2 ವಿಮಾನ
ಸೋಲಾರ್‌ ಇಂಪಲ್ಸ್ ವಿಮಾನಕ್ಕೆ ಪೆಟ್ರೋಲ್‌ ಅಥವಾ ಇತರ ಯಾವುದೇ ಇಂಧನದ ಆವಶ್ಯಕತೆ ಇಲ್ಲ. ಬದಲಿಗೆ ವಾತಾವರಣದಲ್ಲಿ ಯಥೇತ್ಛವಾಗಿ ಲಭ್ಯವಿರುವ ಸೌರಶಕ್ತಿಯನ್ನು ಬಳಸಿಕೊಂಡು ಸೌರಕೋಶಗಳಿಂದ ಚಲಿಸುವ ವಿಮಾನವೇ ಸೋಲಾರ್‌ ಇಂಪಲ್ಸ…. ದುಬೈ ವಿಮಾನ ನಿಲ್ದಾಣದಿಂದ ಕ್ಯಾಪ್ಟನ್‌ ಬಟ್ರಾìಂಡ್‌ ಪಿಕ್ಕಾರ್ಡ್‌ ಸೋಲಾರ್‌ ವಿಮಾನದ ಮೂಲಕ ಒಂದು ಹನಿ ಪೆಟ್ರೋಲ್‌ ಬಳಸದೆ 45,000 ಕಿ. ಮೀ ದೂರಹಾರಾಟವನ್ನು ನಡೆಸಿದ್ದರು. ಇವರ ಈ ಸೋಲಾರ್‌ ವಿಮಾನದ ಪ್ರಯಾಣವು ನಾಲ್ಕು ಖಂಡಗಳು, ಮೂರು ಸಮುದ್ರ, ಎರಡು ಪ್ರಸಿದ್ಧ ಮಹಾಸಾಗರಗಳನ್ನು ದಾಟಿ ವಿಶ್ವದಾಖಲೆಯನ್ನು ನಿರ್ಮಿಸಿತ್ತು. ಸೌರಶಕ್ತಿಯಿಂದ ಚಲಿಸಿದ ಈ ವಿಮಾನ ಇಡೀ ಜಗತ್ತನ್ನೇ ತನ್ನೆಡೆಗೆ ಸೆಳೆದಿದೆ.

2016 ರಲ್ಲಿ ಒಟ್ಟು 175 ರಾಷ್ಟ್ರಗಳ ಪ್ರಸಿದ್ಧ ನಾಯಕರು ಪ್ಯಾರಿಸ್‌ ಒಪ್ಪಂದಕ್ಕೆ ಸಹಿ ಹಾಕಲು ಸೇರಿದ್ದ ದಿನವೇ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸೋಲಾರ್‌ ಇಂಪಲ್ಸ್ ಕ್ಯಾಪ್ಟನ್‌ ಬಟ್ರ್ಯಾಂಡ್‌ ಪಿಕ್ಕಾರ್ಡ್‌ ನಡುವಿನ ಸ್ಕೈಪ್‌ ಸಂವಾದವನ್ನು ಆಯೋಜಿಸಲಾಗಿತ್ತು. ಕ್ಯಾಪ್ಟನ್‌ ಪಿಕ್ಕಾರ್ಡ್‌ ಸೋಲಾರ್‌ ವಿಮಾನದ ಮೂಲಕ ಭೂಮಿಯನ್ನು ಸುತ್ತುತ್ತಿದ್ದು, ಈ ವಿಮಾನದ ಕಾಕ್‌ ಪಿಟ್‌ನಿಂದ ಸ್ಕೈಪ್‌ ಸಂಪರ್ಕಕ್ಕೆ ಸಿಕ್ಕಾಗ ಅವರ ಧ್ವನಿಯನ್ನು ಕೇಳಲು ಜಗತ್ತಿನ ಪ್ರಮುಖ ನಾಯಕರು ಸೇರಿದ್ದು, ಸೋಲಾರ್‌ ಇಂಪಲ್ಸ್ ವಿಮಾನವೂ ಇತಿಹಾಸದ ಪುಟವನ್ನು ಸೇರಿತ್ತು. ಅಬುದಾಭಿಯಿಂದ ಪ್ರಯಾಣ ಆರಂಭಿಸಿದ ಈ ವಿಮಾನ, ಮಸ್ಕತ್‌, ಅಹ್ಮದಾಬಾದ್‌, ವಾರಾಣಸಿ, ಮಯನ್ಮಾರ್‌, ಚೀನಾ ದೇಶದ ಚಾಂಗಿಂಗ್‌ ಮತ್ತು ನಾನಿjಂಗ್‌, ಜಪಾನಿನ ಅನಗೋಯಾ, ಫೆಸಿಫಿಕ್‌ ಸಾಗರ ದಾಟಿ ಅಮೆರಿಕ ದೇಶದ ಹವಾಯಿ, ಸ್ಯಾನ್‌ಫ್ರಾ ನ್ಸಿ ಸ್ಕೋ, ತುಲ್ಸಾ , ಡೆಯಾrನ್‌, ಲಿಹಿಂಗ್ವಾಲಿ, ನ್ಯೂಯಾರ್ಕ್‌ ಮೂಲಕ ಅಟ್ಲಾಂಟಿಕ್‌ ಸಾಗರ ದಾಟಿ ಯುರೋಪ್‌ನ ಸೆವಿಲ್ಲೆ, ಈಜಿಪ್ತ್ನ ಕೈರೋ ಮೂಲಕ ಮತ್ತೆ ಅಬುದಾಭಿಯನ್ನು ತಲುಪಿ ಪ್ರಪಂಚವನ್ನೇ ಒಂದು ಸುತ್ತು ಪರಿಭ್ರಮಿಸಿದೆ. ಸೌರ ವಿಮಾನ ತಯಾರಿಸಿ ಅದರಲ್ಲಿ ಪ್ರಪಂಚವನ್ನು ಸುತ್ತುವುದು ಪಿಕ್ಕಾರ್ಡ್‌ ಕನಸಾಗಿತ್ತು. ಬಟ್ರ್ಯಾಂಡ್‌ ಪಿಕ್ಕಾರ್ಡ್‌ ಮೊದಲಿಗೆ 1999ರಲ್ಲಿ ಬಲೂನ್‌ ವಿಮಾನದ ಮೂಲಕ ಭೂಮಿಯನ್ನು ಪರಿಭ್ರಮಿಸಿದ್ದರು. ಬಲೂನ್‌ ವಿಮಾನದಲ್ಲಿ ಸುತ್ತುತ್ತಿದ್ದಾಗ ಬಲೂನಿನಲ್ಲಿ ಇಂಧನದ ಪ್ರಮಾಣ ಕಡಿಮೆಯಾಗತೊಡ ಗಿತು. ಇವರಿಗೆ ಅನಿಸಿದ್ದು ಈ ಇಂಧನದ ಜೊತೆಗೆ ತಕ್ಕಮಟ್ಟಿನ ಬ್ಯಾಟರಿಯಿದ್ದಿದ್ದರೆ ಚೆನ್ನಾಗಿತ್ತಲ್ಲ ಎಂದು. ಈ ಸಣ್ಣ ಯೋಚನೆಯೇ ಇಂದು ಸೋಲಾರ್‌ ವಿಮಾನ ತಯಾರಿಕೆಗೆ ಪ್ರೇರಣೆಯಾಯಿತು. ಈ ಹೊಸ ಕನಸಿನೊಂದಿಗೆ ಬಂದ ಪಿಕ್ಕಾರ್ಡ್‌ ವಿಮಾನಯಾನ ಕ್ಷೇತ್ರದ ದಿಗ್ಗಜರನ್ನು ಭೇಟಿ ಮಾಡಿ ತನ್ನ ಕನಸಿನ ಕುರಿತಾಗಿ ತಿಳಿಸುತ್ತಾರೆ. ಈ ನನ್ನ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತೀರಾ ಎಂದು ಕೇಳಿದಾಗ ವಿಶ್ವದ ಎಲ್ಲಾ ವಿಮಾನಯಾನ ಕ್ಷೇತ್ರದ ದಿಗ್ಗಜರು, “ಇದು ಅಸಾಧ್ಯ ಮತ್ತು ಕೇವಲ ಕನಸಷ್ಟೇ’ ಎಂದು ಇವರನ್ನು ನಿರಾಶೆಗೆ ತಳ್ಳಿದ್ದರು.

ವಿಮಾನವನ್ನು ಸರಿ ಸುಮಾರು 30,000 ಅಡಿ ಎತ್ತರದಲ್ಲಿ ಹಾರಿಸಬೇಕೆಂದಾದರೆ ಅದಕ್ಕೆ ಅಗತ್ಯವಿರುವಷ್ಟು ಶಕ್ತಿಯನ್ನು ಕ್ರೋಢೀಕರಿಸಲು ಬೃಹತ್‌ ಗಾತ್ರದ ಸೋಲಾರ್‌ ಪ್ಯಾನಲ್‌ ಅಳವಡಿಸಬೇಕಿದ್ದು, ಇದು ದೊಡ್ಡ ಸವಾಲಾಗಿತ್ತು. ಇದಕ್ಕಾಗಿ ಬಹುದೊಡ್ಡ ಸ್ಟ್ರಕ್ಚರ್‌ ನಿರ್ಮಿಸಬೇಕಿತ್ತು. ಸ್ಟ್ರಕ್ಚರ್‌ ಗಾತ್ರ ಹೆಚ್ಚಿದಷ್ಟೂ ವಿಮಾನದ ಭಾರವನ್ನು ಕಡಿಮೆಗೊಳಿಸಬೇಕಿತ್ತು. ಈ ಎರಡೂ ಸವಾಲನ್ನು ನಿಭಾಯಿಸಲು ಸಾಧ್ಯವಿಲ್ಲವೆಂದು ವಿಮಾನಯಾನ ಕ್ಷೇತ್ರದ ದಿಗ್ಗಜರೆಲ್ಲರೂ ಪಿಕ್ಕಾರ್ಡ್‌ ಅವರ ಈ ವಿನೂತನ ವಿಚಾರದಿಂದ ದೂರ ಉಳಿದರು. ನನ್ನ ಈ ಕನಸಿಗೆ ನೀರೆರೆದು ಸಲಹಲು ಸ್ವಿಸ್‌ ಫೆಡರಲ್‌ ಇನ್‌ಸ್ಟಿ ಟ್ಯೂಟ್‌ ಆಫ್ ಟೆಕ್ನಾಲಜಿಯ ಸಲಹೆಗಾರರಾಗಿದ್ದ ಆಂದ್ರೆ ಬೋಷcರ್‌ ಬರ್ಗ್‌ ಅವರೇ ಸರಿಯೆಂದು ಅವರನ್ನು ಭೇಟಿಯಾದರು. ಇವರ ಸಹಕಾರದೊಂದಿಗೆ 2003ರಲ್ಲಿ ಪಿಕ್ಕಾರ್ಡ್‌ ಮತ್ತು ಆಂದ್ರೆ ಸೋಲಾರ್‌ ವಿಮಾನದ ನಿರ್ಮಾಣಕ್ಕಿಳಿದರು.

Advertisement

ಸೌರಶಕ್ತಿಯಿಂದ ಚಲಿಸಬಹುದಾದ ವಿಮಾನದ ನಿರ್ಮಾಣದ ಪ್ರಯೋಗಗಳು 13 ವರ್ಷಗಳ ಕಾಲ ನಡೆಯಿತು. ಸೋಲಾರ್‌ ಇಂಪಲ್ಸ್-1 ಮೊದಲ ಪ್ರಯೋಗವಾದರೂ ಸೋಲಾರ್‌ಇಂಪಲ್ಸ್-2 ಎರಡನೆಯ ಪ್ರಯೋಗವಾಗಿ ಯಶಸ್ವಿಯಾಗಿ ಮೂಡಿ ಬಂತು. ಇವರು ಜಗತ್ತಿನ ಪ್ರಮುಖ ವಿಮಾನಯಾನ ಅಭಿಯಂತರರು, ವಿಮಾನಯಾನ ಉದ್ಯಮಿಗಳನ್ನು ಬಂಡವಾಳಕ್ಕಾಗಿ ಹೂಡಿಕೆದಾರರನ್ನಾಗಿ ಜೋಡಿಸಿಕೊಳ್ಳುತ್ತಾರೆ. ಸೌರ ವಿಮಾನಕ್ಕೆ ಅಳವಡಿಸಲು ಅಗತ್ಯವಾಗಿ ಬೇಕಿರುವ ಪ್ರತಿಯೊಂದು ಬಿಡಿ ಭಾಗಗಳನ್ನು ಇವರೀರ್ವರು ಪ್ರತ್ಯೇಕವಾಗಿ ಪರಿಶೀಲಿಸಿಯೇ ಜೋಡಿಸುವ ಬದ್ಧತೆಯನ್ನು ತೋರಿದ್ದ ಕಠಿಣ ಪರಿಶ್ರಮದ ಫ‌ಲವೇ ಸೋಲಾರ್‌ ಇಂಪಲ್ಸ್-2 (ಖಐ-2) ವಿಮಾನ.

ಈ ವಿಮಾನದಲ್ಲಿ 135 ಮೈಕ್ರಾನ್‌ ಅಂದರೆ ಮನುಷ್ಯನ ತಲೆ ಕೂದಲಿಗಿಂತಲೂ ತೆಳ್ಳಗಿರುವ ಸುಮಾರು 17, 248 ಸೌರಕೋಶಗಳನ್ನು ಅಳವಡಿಸಲಾಗಿದೆ. ಈ ಸೌರಕೋಶಗಳು ವಿಮಾನದಲ್ಲಿರುವ 4 ಲಿಥಿಯಂ ಬ್ಯಾಟರಿಗಳನ್ನು ನಿರಂತರವಾಗಿ ಛಾರ್ಜ್‌ ಮಾಡುತ್ತವೆ. ಒಬ್ಬ ಪೈಲಟ್‌ ಕೂರಬಲ್ಲ ಕಾಕ್‌ಪಿಟ್‌ ಇರುವ ವಿಮಾನದಲ್ಲಿ ಸೌರಕೋಶಗಳನ್ನು ಸೂರ್ಯನಿಗೆ ಅಭಿಮುಖವಾಗಿ ರೆಕ್ಕೆಗಳ ಮೇಲ್ಭಾಗ ಹಾಗೂ ಬಾಲದಲ್ಲಿ ಅಳವಡಿಸಲಾಗಿದೆ. ಬೃಹತ್‌ ಪ್ರಮಾಣದ ಸೌರಕೋಶಗಳನ್ನು ಅಳವಡಿಸಿರುವ ಕಾರಣದಿಂದಾಗಿ ಈ ವಿಮಾನದ ರೆಕ್ಕೆಗಳು 236 ಅಡಿ ಉದ್ದವಿದ್ದು, ಬೋಯಿಂಗ್‌-747 ವಿಮಾನಗಳ ರೆಕ್ಕೆಗಳಿಗಿಂತಲೂ ಅಗಲವಾಗಿದೆ. ಸೋಲಾರ್‌ ಇಂಪಲ್ಸ್ ವಿಮಾನದ ಒಟ್ಟು ತೂಕ ಕೇವಲ 2.3 ಟನ್‌. ಇದು ಸಾಮಾನ್ಯ ಕಾರಿನ ತೂಕಕ್ಕೆ ಸಮಾನ. ಸೂರ್ಯನ ಬೆಳಕಿರುವ ಹಗಲಲ್ಲಿ ಈ ವಿಮಾನವು ಸುಮಾರು 30,000 ಅಡಿ ಎತ್ತರದಲ್ಲಿ ಹಾರಾಟ ನಡೆಸಿದೆ. ರಾತ್ರಿ ಸೂರ್ಯನ ಬೆಳಕಿಲ್ಲದಿರುವುದರಿಂದ ವಿಮಾನದಲ್ಲಿ ಶಕ್ತಿಯ ಬಳಕೆಯನ್ನು ಕಡಿಮೆ ಮಾಡಲು ಕೇವಲ 5,000 ಅಡಿ ಎತ್ತರದಲ್ಲಿ ಹಾರಾಟ ನಡೆಸಿತ್ತು.

ಸಂತೋಷ್‌ ಕುಮಾರ್‌ ಪೆರ್ಮಡ

Advertisement

Udayavani is now on Telegram. Click here to join our channel and stay updated with the latest news.

Next