Advertisement

ಸೂರ್ಯಗ್ರಹಣ: ಉಡುಪಿ ಜಿಲ್ಲೆಯ ವಿವಿಧೆಡೆ ಜಪಾನುಷ್ಠಾನ

10:38 PM Jun 21, 2020 | Sriram |

ಉಡುಪಿ: ಈ ವರ್ಷದ ಮೊದಲ ಸೂರ್ಯಗ್ರಹಣ ರವಿವಾರ ಸಂಭವಿಸಿದ್ದು, ಶ್ರೀಕೃಷ್ಣಮಠ ಸಹಿತ ವಿವಿಧ ಮಠಗಳು, ದೇವಸ್ಥಾನಗಳಲ್ಲಿ ವೈದಿಕರು ವಿಶೇಷ ಪಾರಾಯಣ, ಅನುಷ್ಠಾನಗಳನ್ನು ನಡೆಸಿದರು.

Advertisement

ಶ್ರೀಕೃಷ್ಣಮಠದಲ್ಲಿ ಸ್ವಾಮೀಜಿಯವರು ಬೆಳಗ್ಗಿನ ನೈರ್ಮಾಲ್ಯ ವಿಸರ್ಜನೆ, ಉಷಃಕಾಲ ಪೂಜೆ, ಗೋಪೂಜೆಗಳನ್ನು ಗ್ರಹಣ ಆರಂಭವಾಗುವ ಮುನ್ನ ನಡೆಸಿದರು.

ಉಳಿದ ಪೂಜೆ, ಮಹಾಪೂಜೆಯನ್ನು ಗ್ರಹಣ ಮೋಕ್ಷದ ಬಳಿಕ ನೆರವೇರಿಸ ಲಾಯಿತು. ಗ್ರಹಣದ ಮಧ್ಯಭಾಗದಲ್ಲಿ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಯವರು ಆರತಿ ಬೆಳಗಿದರು.

ಗ್ರಹಣ ಪೂರ್ತಿ ಅವಧಿ ಕೃಷ್ಣಾಪುರ ಶ್ರೀ, ಪಲಿಮಾರು ಹಿರಿಯ, ಕಿರಿಯ ಶ್ರೀ, ಕಾಣಿಯೂರು ಶ್ರೀ ಮತ್ತು ಸೋದೆ ಶ್ರೀಗಳು ಶ್ರೀಕೃಷ್ಣ ಮಠದಲ್ಲಿ ಜಪ ತರ್ಪಣಗಳನ್ನು ನಡೆಸಿದರು. ಅದಮಾರು ಹಿರಿಯ ಶ್ರೀಗಳು ಪಾಜಕ ಸಮೀಪದ ಬಾಣತೀರ್ಥದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಪುತ್ತಿಗೆ ಶ್ರೀಗಳು ಪುತ್ತಿಗೆ ಮೂಲಮಠದಲ್ಲಿ, ಪೇಜಾವರ ಶ್ರೀಗಳು ನೀಲಾವರ ಗೋಶಾಲೆಯಲ್ಲಿ, ಸುಬ್ರಹ್ಮಣ್ಯ ಶ್ರೀಗಳು ಸುಬ್ರಹ್ಮಣ್ಯದ ಅಗ್ರಹಾರ ವೃಂದಾವನ ಸನ್ನಿಧಿಯಲ್ಲಿ, ಭಂಡಾರಕೇರಿ ಶ್ರೀಗಳು ಬೆಂಗಳೂರಿನ ಮಠದಲ್ಲಿ, ಸುರತ್ಕಲ್‌ ಚಿತ್ರಾಪುರ ಶ್ರೀಗಳು ಚಿತ್ರಾಪುರ ಮಠದಲ್ಲಿ ಜಪ ತರ್ಪಣಾದಿಗಳನ್ನು ನಡೆಸಿದರು.

ವೈದಿಕರು ಮಧ್ವಸರೋವರದ ತಟಾಕ, ಶ್ರೀಕೃಷ್ಣಮಠದ ಚಂದ್ರಶಾಲೆ, ಸೂರ್ಯ ಶಾಲೆಯಲ್ಲಿ ಅನುಷ್ಠಾನ ನಡೆಸಿದರು. ಸ್ವಾಮೀಜಿಯವರು ಏಕಾದಶಿ ರೀತಿ ನಿರ್ಜಲ ಉಪವಾಸ ನಡೆಸಿದರು.

Advertisement

ಶ್ರೀ ಅನಂತೇಶ್ವರ, ಚಂದ್ರಮೌಳೀಶ್ವರ ಸಹಿತ ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆ ಬೇಗನೆ ಪೂಜೆ ನಡೆಸಲಾಯಿತು. ಗ್ರಹಣ ಕಾಲದಲ್ಲಿ ಭಕ್ತರು ದೀಪಗಳಿಗೆ ಎಣ್ಣೆ ಹಾಕಿದರು.

ಉಡುಪಿ, ಕುಂದಾಪುರ: ಜನಸಂಚಾರ ವಿರಳ
ಉಡುಪಿ/ಕುಂದಾಪುರ: ಗ್ರಹಣ ಕಾಲದಲ್ಲಿ ಉಡುಪಿ ಮತ್ತು ಕುಂದಾಪುರ ದಲ್ಲಿ ಜನಸಂಚಾರ ವಿರಳವಾಗಿತ್ತು. ಆಯ್ದ ಕೆಲವು ಕಡೆಗಳಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಎರಡೂ ನಗರಗಳಲ್ಲಿ ಹೆಚ್ಚಿನ ಅಂಗಡಿ ಗಳು ಮುಚ್ಚಿದ್ದವು. ಉಡುಪಿಯಲ್ಲಿ ಸಿಟಿ ಬಸ್‌ಗಳ ಸಂಚಾರವೂ ಇರಲಿಲ್ಲ. ಎಕ್ಸ್‌ಪ್ರೆಸ್‌ ಹಾಗೂ ಸರಕಾರಿ ಬಸ್‌ ತಂಗುದಾಣಗಳಲ್ಲಿಯೂ ಜನ ಸಂಚಾರ ಕಡಿಮೆಯಿತ್ತು. ಕುಂದಾಪುರದ ನಗರ ಭಾಗದಲ್ಲಿ ಬೆಳಗ್ಗೆ ಒಂದೆರಡು ಬಸ್‌ಗಳು ಸಂಚಾರ ನಡೆಸಿದ್ದವು. ಗ್ರಾಮೀಣ ಪ್ರದೇಶದಲ್ಲಿ ಬಸ್‌ ಸೇವೆ ಇರಲಿಲ್ಲ.

ಬೈಂದೂರು, ಗಂಗೊಳ್ಳಿ, ಸಿದ್ದಾಪುರ, ಕೋಟೇಶ್ವರ, ಕೊಲ್ಲೂರು, ತೆಕ್ಕಟ್ಟೆ, ಶಂಕರನಾರಾಯಣ, ಹಾಲಾಡಿ, ಗೋಳಿ ಯಂಗಡಿ, ಉಪ್ಪುಂದ, ಹೆಮ್ಮಾಡಿ ಸಹಿತ ಎಲ್ಲ ಕಡೆಗಳಲ್ಲಿ ಬಹುತೇಕ ಇದೇ ಸ್ಥಿತಿಯಿತ್ತು.

ಪೂಜೆ, ಸಮುದ್ರ ಸ್ನಾನಗ್ರಹಣ ಮೋಕ್ಷದ ಅನಂತರ ಅನೇಕ ಮಂದಿ ತಮ್ಮೂರಿನ ದೇವಸ್ಥಾನ ಗಳಿಗೆ ಹೋಗಿ ಪೂಜೆ ಸಲ್ಲಿಸಿದರು.

ಕುಂದೇಶ್ವರ, ಕೋಟೇಶ್ವರ, ಮಾರಣ ಕಟ್ಟೆ ಬ್ರಹ್ಮಲಿಂಗೇಶ್ವರ, ಬಸೂÅರು ಮಹಾ ಲಿಂಗೇಶ್ವರ, ಪಂಚ ಶಂಕರನಾರಾ ಯಣ ಸಹಿತ ಹೆಚ್ಚಿನ ದೇಗುಲಗಳಲ್ಲಿ ಪೂಜೆ ಸಲ್ಲಿಸಿದರು.

ಬೈಂದೂರಿನ ಸೋಮೇಶ್ವರದಲ್ಲಿ ಸಮುದ್ರ ಸ್ನಾನ ಮಾಡಿ, ಸೋಮೇ ಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇ ರಿಸಿದರು.

ಬಸ್ರೂರು: ಜನಸಂಚಾರವಿಲ್ಲ
ಬಸ್ರೂರು: ಬಳ್ಕೂರು,ಬಸ್ರೂರು, ಕೋಣಿ, ಆನಗಳ್ಳಿ, ಕಂದಾವರ, ಕಂಡೂÉರು, ಗುಲ್ವಾಡಿ ಮುಂತಾದೆಡೆ ರವಿವಾರ ಬೆಳಗ್ಗೆಯಿಂದಲೇ ಗ್ರಹಣ ಪ್ರಯುಕ್ತ ಯಾವುದೇ ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗ‌ಳು ಬಾಗಿಲು ತೆರೆಯಲಿಲ್ಲ.

ಜನ ಸಂಚಾರ, ವಾಹನ ಸಂಚಾರವು ವಿರಳವಿತ್ತು. ಗ್ರಹಣ ಕಾಲದ ಅನಂತರ ಕೆಲವು ಅಂಗಡಿಗಳು ಬಾಗಿಲು ತೆರೆದವು. ರಾಜ್ಯ ಹೆದ್ದಾರಿಯಲ್ಲಿ ಕೆಲವು ಖಾಸಗಿ ವಾಹನಗಳನ್ನು ಬಿಟ್ಟು ಬೇರಾವುದೇ ವಾಹನ ಸಂಚರಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next