Advertisement

ಮೇ ತಿಂಗಳಲ್ಲಿ  ಸೋಲಾರ್‌ ಸಾಲ ಮೇಳ: ಐವನ್‌ 

02:08 PM Apr 28, 2017 | Team Udayavani |

ಮಂಗಳೂರು: ಸೌರ ವಿದ್ಯುತ್‌ ಬಳಕೆ ಕುರಿತಂತೆ ಅಭಿಯಾನವನ್ನು ನಡೆಸುತ್ತಿರುವ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಅವರು ದಕ್ಷಿಣ ಕನ್ನಡವನ್ನು ಸೋಲಾರ್‌ಯುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಲ್ಲಿ ವಿವಿಧ ಬ್ಯಾಂಕುಗಳು, ಮೆಸ್ಕಾಂ ಮತ್ತು ಸೌರ ವಿದ್ಯುತ್‌ ಉಪಕರಣ ಉತ್ಪಾದಕರು/ ಪೂರೈಕೆದಾರರನ್ನು ಸೇರಿಸಿಕೊಂಡು ಸೋಲಾರ್‌ ಸಾಲ ಮೇಳವನ್ನು ನಡೆಸಲು ತೀರ್ಮಾನಿಸಿದ್ದಾರೆ. 

Advertisement

ಸೌರ ವಿದ್ಯುತ್‌ಗೆ ಜಿಲ್ಲೆಯಲ್ಲಿ ಬ್ಯಾಂಕುಗಳು ಒದಗಿಸುತ್ತಿರುವ ಸಾಲ ಮತ್ತು ಇತರ ಪ್ರೋತ್ಸಾಹಕ ಕ್ರಮಗಳ ಕುರಿತು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಮತ್ತು ಮೆಸ್ಕಾಂ ಅಧಿಕಾರಿಗಳ ಜತೆ ಗುರುವಾರ ತನ್ನ ಕಚೇರಿಯಲ್ಲಿ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಎಲ್ಲ  ಬ್ಯಾಂಕುಗಳು ಸಾಲ ನೀಡಲು ಒಪ್ಪಿಕೊಂಡಿವೆ ಎಂದು ಐವನ್‌ ಡಿ’ಸೋಜಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

1 ವರ್ಷದಲ್ಲಿ ಜಿಲ್ಲೆಯಲ್ಲಿ 286 ಮನೆ/ ಕಟ್ಟಡಗಳಿಗೆ ಸೋಲಾರ್‌ ಅಳವಡಿಸ ಲಾಗಿದ್ದು, ಈ ಮನೆ/ ಕಟ್ಟಡಗಳ ಮಾಲಕರ ಸಭೆಯನ್ನು ಕರೆದು ಅವರನ್ನು ಗ್ರೀನ್‌ ಸರ್ಟಿಫಿಕೇಟ್‌ ನೀಡಿ ಗೌರವಿಸಲು ಹಾಗೂ ಅವರ ಸಮಸ್ಯೆಗಳಿದ್ದರೆ ಅವು
ಗಳನ್ನು ಆಲಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next