Advertisement
ಈ ಮೊದಲು ಕೆ.ವಿ.ಕೆ.ಯಲ್ಲಿ ಪ್ರಯೋ ಗಾಲಯ ಮಾತ್ರವಲ್ಲದೆ ಸಂಚಾರಿ ಪ್ರಯೋಗಾ ಲಯವೂ ಇತ್ತು. 2018ರಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರೈತರ ಮನೆಬಾಗಿಲಿಗೆ ಹೋಗಿ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡುವ ಸಂಚಾರಿ ಪ್ರಯೋಗಾಲಯ ವಾಹನಕ್ಕೆ ಚಾಲನೆ ನೀಡಲಾಗಿತ್ತು.
Related Articles
ಹಳೇ ವಾಹನವನ್ನು ಲ್ಯಾಬ್ ಆಗಿ ಪರಿವರ್ತಿಸಲಾಗಿತ್ತು. ನಿರಂತರ ಓಡಾಟದಿಂದ ವಾಹನ ಹಾಳಾಗಿದ್ದು, ದುರಸ್ತಿ ಮಾಡಿಸಲು ಅನುದಾನದ ಕೊರತೆಯಾಗಿತ್ತು. ವಾಹನದ ಪರ್ಮಿಟ್ ಅವಧಿಯೂ ಮುಗಿದಿತ್ತು. ಆರ್‌ಟಿಒ ಬಳಿ ಪರೀಕ್ಷೆಗೊಳಪಡಿಸಿ ಮತ್ತೆ ಸಂಚಾರ ಯೋಗ್ಯವಾಗಿಸಲು ಹೆಚ್ಚಿನ ಮೊತ್ತದ ಅಗತ್ಯ ಇತ್ತು. ಆದರೆ ಸೂಕ್ತ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ವಾಹನವನ್ನು ಹರಾಜು ಹಾಕಲಾಗಿದೆ. ಇನ್ನೊಂದೆಡೆ ಪ್ರಯೋ
ಗಾಲಯ ಸಹಾಯಕರ ನೇಮಕಾತಿಯೂ ನಡೆದಿರಲಿಲ್ಲ. ಶಾರ್ಟ್ ಸರ್ಕ್ಯೂಟ್ ನಿಂದ ಯಂತ್ರೋಪಕರಣ ಗಳು ಹಾಳಾಗಿದ್ದು, ದುರಸ್ತಿಗಾಗಿ ಮತ್ತೆ ಅನುದಾನಕ್ಕೆ ಕಾಯುವಂತಾಗಿದೆ ಎನ್ನುತ್ತಾರೆ ಕೇಂದ್ರದ ವಿಜ್ಞಾನಿ.
Advertisement
ರೈತರಿಗೆ ಸಲಹೆ ಮಾತ್ರಇಲ್ಲಿ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಮಣ್ಣಿನ ಮಾದರಿಗಳನ್ನು ರೈತರು ನೇರವಾಗಿ
ತಂದು ಪರೀಕ್ಷೆ ಮಾಡಿಸಿ ತೆಗೆದು ಕೊಂಡು ವರದಿ ತೆಗೆದುಕೊಂಡು ಹೋಗುತ್ತಿದ್ದರು. ಸದ್ಯ ಖಾಸಗಿ ಅಥವಾ ಕೃಷಿ ಇಲಾಖೆಯ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಬೇಕಾ ಗಿದೆ. ರೈತರು ಪರೀಕ್ಷೆ ಮಾಡಿಸಿದ ವರದಿಗಳನ್ನು ಕೆ.ವಿ.ಕೆ.ಯ ವಿಜ್ಞಾನಿಗಳು ಪರಿಶೀಲಿಸಿ ಸೂಕ್ತ ಸಲಹೆ, ಸೂಚನೆ ಮಾತ್ರ ನೀಡುತ್ತಿದ್ದಾರೆ. ಗ್ರಾ.ಪಂ.ಗಳಲ್ಲಿಆರಂಭವಾಗಿಲ್ಲ ಲ್ಯಾಬ್
ರಾಜ್ಯದ ಪ್ರತೀ ಗ್ರಾ.ಪಂ.ಗಳಲ್ಲಿ ಮಣ್ಣು ಪರೀಕ್ಷೆ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಅದು ಪ್ರಸ್ತಾವನೆಯ ಹಂತದಲ್ಲೇ ಇದೆ. ಜಿಲ್ಲೆಯಲ್ಲಿ ಮೂರು ಖಾಸಗಿ ಮತ್ತು ಒಂದು ಇಲಾಖಾ ಪ್ರಯೋಗಾಲಯದಲ್ಲಿ ಮಣ್ಣು ಪರೀಕ್ಷೆ ನಡೆಯುತ್ತಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಸೀತಾ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಸದ್ಯ ಮಣ್ಣು ತಪಾಸಣೆಗೆ ವ್ಯವಸ್ಥೆ ಇಲ್ಲ. ಪ್ರಯೋಗಾಲಯ ಶಾರ್ಟ್ ಸರ್ಕ್ನೂಟ್‌ನಿಂದ ಹಾನಿಗೀಡಾಗಿದೆ. ಮೊಬೈಲ್ ವಾಹನದಲ್ಲಿ ಪ್ರಯೋಗ ಸಲಕರಣೆಗಳಿಗೆ ಹಾನಿ ಹೆಚ್ಚು. ಇದರಿಂದ ಪ್ರಯೋಗ ಮಾಡಲು ಕಷ್ಟವಾಗುತ್ತಿತ್ತು.
-ಡಾ| ಮಲ್ಲಿಕಾರ್ಜುನ ಎಲ್.
ಕೆ.ವಿ.ಕೆ. ವಿಜ್ಞಾನಿ (ಮಣ್ಣು ವಿಜ್ಞಾನ) -ಭರತ್ ಶೆಟ್ಟಿಗಾರ್