ಮಾಸ್ತಿ: ಕೆರೆ ಒತ್ತುವರಿ, ಅಕ್ರಮ ಮಣ್ಣು ಮಾಫಿಯಾತಡೆಯಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದವತಿಯಿಂದ ಮಾಸ್ತಿ ನಾಡ ಕಚೇರಿ ಉಪತಹಶೀಲ್ದಾರ್‌ಅವರ ಮೂಲಕ ಸರ್ಕಾರಕ್ಕೆ ಮನವಿಸಲ್ಲಿಸಲಾಯಿತು.ರೈತ ಸಂಘದ ರಾಜ್ಯ ಉಪಾಧ್ಯಕ್ಷಕೆ.ನಾರಾಯಣಗೌಡ ಮಾತನಾಡಿ, ಪೂರ್ವಿಕರುಕಟ್ಟಿ ಬೆಳೆಸಿದ ಕೆರೆಗಳು ಮನುಷ್ಯನ ದುರಾಸೆಗೆ ದಿನೇದಿನೆ ನಶಿಸಿಹೋಗುತ್ತಿವೆ. ಮಾಲೂರುತಾಲೂಕಿನಾದ್ಯಂತ ನೂರಾರು ಕೆರೆಗಳು ಕಣ್ಣುಮುಂದೆಯೇ ಒತ್ತುವರಿ ಮಾಡಿಕೊಂಡು ಲೇಔಟ್‌ಗಳನ್ನು ಬೆಂಗಳೂರು ಮೂಲದ ದಂಧೆ ಕೋರರುಅಭಿವೃದ್ಧಿಪಡಿಸಿಕೊಳ್ಳುತ್ತಿದ್ದರೂ ಕೆರೆಗಳಿಗೆ ಸೂಕ್ತವಾದದಾಖಲೆಗಳನ್ನು ಕಂದಾಯ ಇಲಾಖೆ ಸರ್ವೇಅಧಿಕಾರಿಗಳು ಸೃಷ್ಟಿಸಿಕೊಟ್ಟರೆ, ನೋಂದಣಿ ಇಲಾಖೆಅಧಿಕಾರಿಗಳು ಕಣ್ಣು ಮುಚ್ಚಿ ನೋಂದಣಿ ಮಾಡುತ್ತಿದ್ದಾರೆ.
ಹಣ ನೀಡಿದರೆ ಯಾವುದೇ ಕಡತ ಪರಿಶೀಲನೆಮಾಡದೆ ಕೆರೆಯಾಗಲಿ, ಗುಂಡು ತೋಪಾಗಲಿ,ರಾಜಕಾಲುವೆಯಾಗಲಿ ಸರ್ಕಾರಿ ಆಸ್ತಿಗಳಿಗೆ ಭೂಪರಿವರ್ತನೆ ಮಾಡಿಕೊಡುತ್ತಿದ್ದಾರೆಂದು ದೂರಿದರು.
ಅಧಿಕಾರಿಗಳು ನಾಪತ್ತೆ: ಒಂದು ಕಡೆ ಕೆರೆ ಒತ್ತುವರಿಮತ್ತೂಂದು ಕಡೆ ರಾಜಾರೋಷವಾಗಿ ಇಟ್ಟಿಗೆಕಾರ್ಖಾನೆ ನೆಪದಲ್ಲಿ ಕೆಲವು ದಂಧೆಕೋರರುಸಂಬಂಧಪಟ್ಟ ಇಲಾಖೆಗಳ ಪರವಾನಗಿ ಪಡೆಯದೆರಾತ್ರಿ ವೇಳೆ ಮಣ್ಣು ತೆಗೆದು ಹಣಕ್ಕೆ ಹೊರರಾಜ್ಯಗಳಾದ ತಮಿಳುನಾಡು, ಕೇರಳಕ್ಕೆ ಸಾಗಾಣಿಕೆಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ.
ಇನ್ನುಕೆರೆಯನ್ನು ಉಳಿಸಬೇಕಾದ ಕಂದಾಯ, ಸಣ್ಣನೀರಾವರಿ ಇಲಾಖೆ ಅಧಿಕಾರಿಗಳುನಾಪತ್ತೆಯಾಗಿದ್ದಾರೆಂದು ದೂರಿದರು.ವಿಶೇಷ ತಂಡ ರಚಿಸಿ: ಸಣ್ಣ ಸಣ್ಣ ಟ್ರಾಕ್ಟರ್‌ಗಳಮೇಲೆ ತಮ್ಮ ಪ್ರತಾಪ ತೋರಿಸುವ ಗಣಿ ಮತ್ತುಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಣ್ಣು ಮಾಫಿಯಾ ಕಾಣಿಸುತ್ತಿಲ್ಲವೇ. ತಹಶೀಲ್ದಾರ್‌ರುತಾಲೂಕಿನಾದ್ಯಂತ ಕೆರೆ ಒತ್ತುವರಿ ಮತ್ತು ಅಕ್ರಮದಂಧೆ ಕೋರರ ವಿರುದ್ಧ ಗೂಂಡಾ ಕಾಯ್ದೆಯಲ್ಲಿಕೇಸು ದಾಖಲಿಸಲು ವಿಶೇಷವಾದ ತಂಡ ರಚನೆಮಾಡಬೇಕೆಂದು ಒತ್ತಾಯಿಸಿದರು.
ಹಿರಿಯ ಅಧಿಕಾರಿಗಳ ಗಮನಕ್ಕೆ ತರುವೆ: ಮನವಿಸ್ವೀಕರಿಸಿ ಮಾತನಾಡಿದ ಮಾಸ್ತಿ ನಾಡಕಚೇರಿಕಂದಾಯ ಅಧಿಕಾರಿ ರವಿ, ಮಾಫಿಯಾ ತಡೆಯಲುಹೋದರೆ ನಮ್ಮ ಮೇಲೆಯೇ ದೌರ್ಜನ್ಯ, ಗೂಂಡಾಗಿರಿಮಾಡುತ್ತಾರೆ. ಹಿರಿಯ ಅಧಿಕಾರಿಗಳ ಮೂಲಕತಹಶೀಲ್ದಾರ್ ಅವರ ಗಮನಕ್ಕೆ ತಂದು ಮಾಫಿಯಾಗೆಕಡಿವಾಣ ಹಾಕುವ ಭರವಸೆ ನೀಡಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿಮಂಜುನಾಥ್, ತಾಲೂಕು ಅಧ್ಯಕ್ಷ ಮಾಸ್ತಿವೆಂಕಟೇಶ್, ತಾಲೂಕು ಉಪಾಧ್ಯಕ್ಷ ಯಲ್ಲಪ್ಪ,ಪ್ರಧಾನ ಕಾರ್ಯದರ್ಶಿ ಹರೀಶ್, ಕೋಲಾರತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್,ಮಾಸ್ತಿ ನಾಗರಾಜ್, ಸತೀಶ್, ನಾರಾಯಣಪ್ಪ,ಮುರುಗೇಶ್, ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ರೂಪೇಶ್, ಕುಡಿಯನೂರು ರಾಮೇಗೌಡ,ಆಂಜಿ, ವೆಂಕಟೇಶ್ ಮತ್ತಿತರರಿದ್ದರು.