Advertisement
ಆನ್ವರಿ ಗ್ರಾಮದ ದಾವಲಸಾಬ್ ಎಂ.ಡಿ. ಹುಸೇನ್ (45) (ಭಿಲ್ಲೆ ಸಂಖ್ಯೆ 1415) ಮೃತ ಕಾರ್ಮಿಕ. ಭೂಮಿಯ 1500 ಮೀಟರ್ ಅಳದಲ್ಲಿ ಮಣ್ಣು ಗಟ್ಟಿ ಇದೆಯೋ ಇಲ್ಲವೋ ಎಂಬ ಪರೀಕ್ಷೆಗೆ ತೆರಳಿದಾಗ ದುರ್ಘಟನೆ ಜರುಗಿದೆ. ಕೂಡಲೇ ಇತರೆ ಕಾರ್ಮಿಕರು ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಚಿನ್ನದ ಗಣಿ ಕಂಪನಿ ಪ್ರಧಾನ ವ್ಯವಸ್ಥಾಪಕರು ಹಾಗೂ ವಿವಿಧ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಮೃತ ಕಾರ್ಮಿಕನನ್ನು ಚಿನ್ನದ ಗಣಿ ಆಸ್ಪತ್ರೆಗೆ ಸಾಗಿಸಲಾಯಿತು.
Related Articles
Advertisement
ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಅಧ್ಯಕ್ಷ ವಾಲೇಬಾಬು, ಸೋಮಣ್ಣ ಪಾಟೀಲ, ಯಂಕೋಬ, ಅಂಜತ್ ಹುಸೇನ ಸೇರಿದಂತೆ ಕಾರ್ಮಿಕ ಮುಖಂಡರು ಪ್ರತಿಭಟನೆ ಸœಳದಲ್ಲಿ ಇದ್ದರು.
ಮಣ್ಣು ಕುಸಿಯಲು ಕಾರಣ: ಭೂಮಿಯ ಕೆಳಮೈಯಲ್ಲಿ ಬ್ಲಾಸ್ಟ್ ಮಾಡಿದ ನಂತರ ಸುರಂಗ ಬೀಳುತ್ತದೆ. ಈ ವೇಳೆ ಕೆಲ ಕಾರ್ಮಿಕರು ಸುರಂಗದೊಳಗೆ ತೆರಳಿ ಮಣ್ಣು ಗಟ್ಟಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ನಡೆಸುತ್ತಾರೆ. ಬಳಿಕ ಅಲ್ಲಿ ಬಿದ್ದ ಅದಿರು ತೆಗೆದು ಹಾಕಿ ಕೆಲಸ ಪ್ರಾರಂಭಿಸಬೇಕು. ಹೀಗೆ ಪರೀಕ್ಷೆಗೆ ಹೋದಾಗ ಐದು ಅಡಿ ಅಗಲ ಮತ್ತು ಉದ್ದದ ಮಣ್ಣು ಮಿಶ್ರಿತ ಕಲ್ಲು ದ್ದು ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಕೆ. ಲಿಂಗಸುಗೂರು ತಿಳಿಸಿದ್ದಾರೆ.
ಭೂ ಕೆಳಮೈ ಅಧಿಕಾರಿಗಳಿಂದ ಮಾಹಿತಿ ಪಡೆದು ಮೃತ ಕಾರ್ಮಿಕನ ಕುಟುಂಬಕ್ಕೆ ಉದ್ಯೋಗ ಹಾಗೂ ಪರಿಹಾರ ನೀಡಲಾಗುವುದು.•ಪ್ರಭಾಕರ ಸಂಗೂರಮಠ,ಪ್ರಧಾನ ವ್ಯವಸ್ಥಾಪಕ ಹಟ್ಟಿ ಚಿನ್ನದ ಗಣಿ