ಆನಂದಪುರ: ಮಳೆ ನಿಂತರೂ ಮಳೆ ಹನಿ ನಿಲ್ಲದು ಎಂಬತೆ ಕಳೆದ ಎರಡು ದಿನಗಳಿಂದ ಮಳೆಯ ಪ್ರಮಾಣ ಇಳಿಮುಖವಾಗಿದ್ದರು ಸಣ್ಣಪುಟ್ಟ ಘಟನೆಗಳು ಸಂಭವಿಸುತ್ತಿವೆ.
ಸ್ಥಳೀಯ ಗ್ರಾಮ ಪಂಚಾಯತಿಯ ಮುಂಬಾಳು ಗ್ರಾಮದಲ್ಲಿ ಕಿರು ಸೇತುವೆ ಗುರುವಾರ ಮಧ್ಯಾಹ್ನ ಕುಸಿದಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
ಪಟ್ಟಣಕ್ಕೆ ಸಂಪರ್ಕ ಸೇತುವೆಯಾಗಿದ್ದ ಮುಂಬಾಳು ಗ್ರಾಮದ ನಾಗರಾಜ್ ಗೌಡ್ರು ಮನೆಯ ಸಮೀಪವಿರುವಂತಹ ಕಿರು ಸೇತುವೆಯ ಅರ್ಧ ಭಾಗಕ್ಕೂ ಅಧಿಕ ಕುಸಿತಗೊಂಡಿದ್ದು ಉಳಿದ ಅರ್ಧ ಭಾಗ ಕುದಿಯುವ ಹಂತದಲ್ಲಿದೆ.
ಗ್ರಾಮಸ್ಥರು ಯಾರು ಸಂಚರಿಸಿದಂತೆ ಗ್ರಾಮಾಡಳಿತ ಸೂಚಿಸಿದೆ. ಈ ಭಾಗದಲ್ಲಿ 10ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಗ್ರಾಮಕ್ಕೆ ಸಂಪರ್ಕ ವಾಗುವಂತಹ ಕಿರು ಸೇತುವೆ ಇದಾಗಿದೆ. ಗ್ರಾಮಸ್ಥರು, ವಿದ್ಯಾರ್ಥಿಗಳು, ವಾಹನ ಸಂಚಾರಕ್ಕೆ ಸಂಚರಿಸುವಂತಹ ಕಿರು ಸೇತುವೆ ಉಳಿದಿರುವ ಅರ್ಧ ಕಿರು ಸೇತುವೆ ಕುಸಿಯುವ ಹಂತದಲ್ಲಿದೆ. ಸಂಜೆಯಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು ಮಳೆ ಮುಂದುವರೆದರೆ ಉಳಿದಿರುವ ಅರ್ಧ ಸೇತುವೆಯ ಕುಸಿದು ಹೋದರೆ ಗ್ರಾಮಸ್ಥರ ಈ ಭಾಗದ ಸಂಪರ್ಕವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಕಾಲುವೆಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿರುವುದರಿಂದ. ಕಾಲುವೆಯ ಎರಡು ಭಾಗಗಳಲ್ಲೂ ಮಣ್ಣು ಕುಸಿತ ಕೊಳ್ಳುತ್ತಿದೆ. ವಿಷಯ ತಿಳಿದ ಗ್ರಾಮ ಪಂಚಾಯತ್ ಅಧ್ಯಕ್ಷರ ಮೋಹನ್ ಕುಮಾರ್, ಸದಸ್ಯ ಕೆ ಗುರುರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜ ನಾಯಕ್ ಸ್ಥಳಕ್ಕೆ ಭೇಟಿ ನೀಡಿದರು.