Advertisement
ಮಂಗಳೂರು ಕೇಂದ್ರವಾಗಿ ಕರಾ ವಳಿಯ ಈ ಯೋಜನೆಯಿಂದ ಮುಂಬಯಿ ಮಹಾನಗರಿಗೆ ಸುಮಾರು 780 ಕಿ.ಮೀ. ಹತ್ತಿರ ವಾಯಿತು. ಅಲ್ಲಿ ಉದ್ಯೋಗಿಗಳಾಗಿರುವ ಈ ಪ್ರದೇಶದ ಜನತೆಗೆ ಇದು ಸಂಪರ್ಕದ ವರದಾನ ವಾಯಿತು. ಜಾರ್ಜ್ ಅವರ ವ್ಯಕ್ತಿತ್ವವೇ ಹಾಗೆ. ಸಮಾಜವಾದಿ ಚಿಂತನೆಯೇ ಉಸಿರು. ಜನ ಸಾಮಾನ್ಯರ, ವಿಶೇಷವಾಗಿ ಕಾರ್ಮಿಕರ ಸಂಘಟನೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡವರು.
Related Articles
Advertisement
ಹುಟ್ಟೂರ ಅಭಿಮಾನ ಮಂಗಳೂರು ಸಹಿತ ಈ ಪ್ರದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದವರಾಗಿದ್ದರು ಜಾರ್ಜ್ ಫೆರ್ನಾಂಡಿಸ್.
ಮಂಗಳೂರಿನಲ್ಲಿ ನಡೆದ ಪ್ರಥಮ ವಿಶ್ವ ಬಂಟರ ಸಮ್ಮೇಳನದಲ್ಲಿ ರೈಲ್ವೇ ಸಚಿವರಾಗಿ (21-12-2002) ಭಾಗವಹಿಸಿದ್ದರು. ವಿವಿಧ ಸಂಸ್ಥೆ ಗಳಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ರಾಷ್ಟ್ರಪತಿಯಾಗಿದ್ದ ದಿ| ಎ.ಪಿ.ಜೆ. ಅಬ್ದುಲ್ ಕಲಾಂ ಜತೆ ಧರ್ಮಸ್ಥಳದ ಸಮಾರಂಭದಲ್ಲಿ ಭಾಗವಹಿಸಿದ್ದರು. ಜಾರ್ಜ್ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾಗ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಅನೇಕ ಕಾರ್ಯಕ್ರಮಗಳಲ್ಲಿ ನೆನಪಿಸಿಕೊಳ್ಳುತ್ತಿದ್ದರು. 1942 ಸೆ. 9ರಂದು ಬ್ರಿಟಿಷರ ವಿರುದ್ಧ ನಗರದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಆಗಿತ್ತು. ಕೋರ್ಟ್ ಗುಡ್ಡೆಯಿಂದ ಅವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು! ಸ್ವಾತಂತ್ರÂ ಹೋರಾಟಗಾರ ಡಾ| ಅಮ್ಮೆಂಬಳ ಬಾಳಪ್ಪರ ಸ್ನೇಹಿತರಾಗಿದ್ದ ಜಾರ್ಜ್ 2006ರ ಅಕ್ಟೋಬರ್ 2ರಂದು ಬಂಟ್ವಾಳದಲ್ಲಿ ಜರಗಿದ ಬಾಳಪ್ಪ- 85 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ, ತನ್ನ ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಕೂಡಾ ಆಗಮಿಸಿದ್ದರು. 2000ರ ಕರಾವಳಿ ಉತ್ಸವದ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಜಾರ್ಜ್, ಆಗ ಕೆನರಾ- 200 ಅಂಗವಾಗಿ ಸಿದ್ಧಪಡಿಸಲಾಗಿದ್ದ “ಪೊಲಿ’ ಸ್ಮರಣ ಸಂಚಿಕೆಯನ್ನು ಮಂಗಳಾ ಕ್ರೀಡಾಂಗಣದಲ್ಲಿ ಬಿಡು ಗಡೆಗೊಳಿಸಿದ್ದರು. (ಕಾರ್ಯಕ್ರಮ ನಿರೂಪಿಸಿದ್ದ ನನ್ನನ್ನು ಕರೆದು ಅವರು ಪೊಲಿ ಎಂದರೆ ಏನರ್ಥ ಎಂದು ಕೇಳಿದ್ದರು. ಬಳಿಕ, ತಮ್ಮ ಭಾಷಣದಲ್ಲಿ ಕೂಡಾ “ನಿರೂಪಕರು ತಿಳಿಸಿದಂತೆ’ ಎಂದು ಉಲ್ಲೇಖೀಸಿದ್ದರು. ಅಷ್ಟೊಂದು ಸರಳ. ನಿಗರ್ವಿ ಅವರು).
ಜಾರ್ಜ್ ಫೆರ್ನಾಂಡಿಸ್‌ಗೆ ಅವರೇ ಸಾಟಿ… ಸೈನ್ ಆರ್ ರಿಸೈನ್!
ಮೊರಾರ್ಜಿ ಸಂಪುಟದಲ್ಲಿ ಸಚಿವರಾಗಿದ್ದ ಜಾರ್ಜ್ ಮಂಗಳೂರಿನ ನೆಹರೂ ಮೈದಾನದಲ್ಲಿ ಹೇಳಿದ್ದ “ಸೈನ್ ಆರ್ ರಿಸೈನ್’ ಎಂಬುದು ಆ ಕಾಲಕ್ಕೆ ಪ್ರಸಿದ್ಧ ಉದ್ಘೋಷವಾಗಿತ್ತು. ಕೆಲವು ರಾಜ್ಯ ಸರಕಾರಗಳನ್ನು ವಿಸರ್ಜಿಸಲು ಕೇಂದ್ರ ಸೂಚಿಸಿದ್ದಾಗ ಆಗಿನ ಪ್ರಭಾರ ರಾಷ್ಟ್ರಪತಿ ನಿರಾಕರಿಸಿದ್ದರು. ಆಗ ಕೇಂದ್ರ ಪ್ರಭಾರಿಗೆ ಸೈನ್ ಆರ್ ರಿಸೈನ್ ಎಂದಿತ್ತು. ತತ್‌ಕ್ಷಣ ಆದೇಶಕ್ಕೆ ಅಂಕಿತ ಬಿತ್ತು ಎಂದಿದ್ದರು. – ಮನೋಹರ ಪ್ರಸಾದ್