ದೇವನಹಳ್ಳಿ: ಬಹಿರ್ದೆಸೆ ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ಮನೆಗೊಂದು ಶೌಚಾಲಯ ನಿರ್ಮಿಸುವ ಯೋಜನೆ ಜಾರಿಗೊಳಿಸಿತ್ತು. ಇದೀಗ ಜಿಲ್ಲಾ ಪಂಚಾಯಿತಿ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಕೊಳಚೆ ನೀರು ಹರಿಯದಂತೆ ತಡೆಯಲು ಮನೆಗೊಂದು ಸೋಕ್‌ಪಿಟ್ (ಬಚ್ಚಲು ಗುಂಡಿ) ನಿರ್ಮಾಣ ಮಾಡುತ್ತಿದೆ.
ಗ್ರಾಮೀಣ ಜನರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟುಯೊಜನೆ ತರುತ್ತಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸೋಕ್‌ಪಿಟ್ ಮತ್ತು ಕಿಚನ್ ಗಾರ್ಡನ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಮನೆಯಲ್ಲಿ ಬಟ್ಟೆ ಒಗೆದ ನೀರು, ಪಾತ್ರೆ ಸಾಮಾನು ತೊಳೆದ ನೀರು, ಸ್ನಾನ ಮಾಡಿದ ನೀರು ಮತ್ತು ದನಕರು ತೊಳೆದ ನೀರು ರಸ್ತೆ ಮತ್ತು ಚರಂಡಿಗಳಿಗೆ ಹರಿದು ಹೋಗುವುದರಿಂದ ಪರಿಸರ ಮಾಲಿನ್ಯವಾಗಿ, ಸೊಳ್ಳೆಗಳ ಕಾಟ ಹೆಚ್ಚಿ ಮಲೇರಿಯಾಹರಡುವ ಸಾಧ್ಯತೆ ಇರುತ್ತದೆ. ಇಂತಹ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿ ನೈರ್ಮಲ್ಯ ಹೆಚ್ಚಿಸಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮನೆಗೆ ಸೋಕ್ ಪಿಟ್ ನಿರ್ಮಿಸಲಾಗುತ್ತಿದೆ.
ಉಚಿತ: ಫಲಾನುಭವಿಗಳಿಂದ ಹಣ ಪಡೆಯದೆಉಚಿತವಾಗಿ ನರೇಗಾ ಯೊಜನೆಯಡಿ ನಿರ್ಮಿಸಿಕೊಡಲಾಗುತ್ತಿದ್ದು, ಇದರ ಹಣವನ್ನು ಅವರಖಾತೆಗೆ ವರ್ಗಾಯಿಸಲಾಗುತ್ತದೆ. ಒಂದು ಸೋಕ್ ಪಿಟ್‌ಗೆಸುಮಾರು 14 ಸಾವಿರ ವೆಚ್ಚವಾಗುತ್ತದೆ. ಹೊಸಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು ಸೋಕ್‌ಪಿಟ್‌ಗಳು ನಿರ್ಮಾಣವಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ50 ಸೋಕ್‌ಪಿಟ್ ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಪಿಟ್ ನಿರ್ಮಿಸುವ ವೇಳೆ ಸಮೀಪದಲ್ಲಿ ಕುಡಿಯುವ ನೀರಿನ ನಲ್ಲಿ, ಬೋರ್‌ವೆಲ್‌ಗಳು ಇಲ್ಲದಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ಇದ್ದರೆ ಅವುಗಳಿಂದ 30 ರಿಂದ 40 ಅಡಿ ದೂರದಲ್ಲಿ ಪಿಟ್‌ಗಳನ್ನು ನಿರ್ಮಿಸಲಾಗುತ್ತದೆ.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಸೋಕ್‌ಪಿಟ್ ಅಭಿಯಾನಕೈಗೊಳ್ಳ ಲಾಗಿದ್ದು, ಸೋಕ್‌ಪಿಟ್ ನಿರ್ಮಾಣದಿಂದಸ್ವಚ್ಛತೆ ಮತ್ತು ಉತ್ತಮಆರೊಗ್ಯ ಕಾಪಾಡಿಕೊಳ್ಳಬಹುದು.
–ಎನ್.ಎಂ. ನಾಗರಾಜ್, ಜಿಪಂ ಸಿಇಒ
ಜಿಲ್ಲೆಯಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ 50ಬಚ್ಚಲು ಗುಂಡಿನಿರ್ಮಾಣಮಾಡಲುಆದ್ಯತೆ ನೀಡುವ ಮೂಲಕ ಸ್ವತ್ಛಪರಿಸರ ಮತ್ತು ನೈರ್ಮಲ್ಯ ಕಾಪಾಡಲು ಪ್ರಯತ್ನಿಸಲಾಗುತ್ತದೆ.
–ಕರಿಯಪ್ಪ, ಜಿಪಂ ಉಪಕಾರ್ಯದರ್ಶಿ
–ಎಸ್.ಮಹೇಶ್