Advertisement

ಅಕ್ಷರ ಜ್ಞಾನದಿಂದ ಶೋಷಣೆಮುಕ್ತ ಸಮಾಜ

08:40 AM Sep 06, 2017 | Harsha Rao |

ಮಂಗಳೂರು: ಪ್ರತಿಯೊಬ್ಬರೂ ಅಕ್ಷರ ಜ್ಞಾನಿಗಳಾದರೆ ಮಾತ್ರ ಶೋಷಣೆಮುಕ್ತ ಸಮಾಜ ನಿರ್ಮಾಣ ಸಾಧ್ಯ. ದ.ಕ. ಜಿಲ್ಲೆಯು ಶೈಕ್ಷಣಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೂ, ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಾಮಾಜಿಕ ಸಾಮರಸ್ಯದ ಬೋಧನೆಯನ್ನು ಮಾಡ ಬೇಕಿದೆ. ಶಿಕ್ಷಣವು ನಮಗೆ ಸ್ವಾಭಿಮಾನದ ಬದುಕನ್ನೂ ನೀಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. 

Advertisement

ಅವರು ಮಂಗಳವಾರ ನಗರದ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನವನ್ನು ಉದ್ಘಾಟಿಸಿದರು. 
ಇತರ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಸಮಾಜ ದಲ್ಲಿ ಮಹತ್ತರ ಸ್ಥಾನವನ್ನು ಗಳಿಸಿದೆ. ಹೀಗಾಗಿ ಶಿಕ್ಷಕರ ಮೇಲೆ ಸಮಾಜ ಕಟ್ಟುವ ಜವಾಬ್ದಾರಿ ಇದೆ. ಶಿಕ್ಷಕರು ತಪ್ಪು ಮಾಡಿದಾಗ ಅದಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ. ಹೀಗಾಗಿ ಶಿಕ್ಷಕರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ಹೇಳಿದರು. 

ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಜ್ಯ ಸರಕಾರ ಧನಾತ್ಮಕ ಚಿಂತನೆ ನಡೆಸಿದ್ದು, 6ನೇ ವೇತನ ಆಯೋಗವನ್ನು ಶೀಘ್ರದಲ್ಲಿ ಜಾರಿ ಮಾಡಲಾಗುತ್ತದೆ. ಸ್ವಾಸ್ಥ  ಸಮಾಜ ನಿರ್ಮಾಣದಲ್ಲಿ  ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. 

ಶಾಸಕ ಜೆ.ಆರ್‌. ಲೋಬೊ ಅಧ್ಯಕ್ಷತೆ ವಹಿ ಸಿದ್ದರು. ಪ್ರಾಥಮಿಕ ವಿಭಾಗದ ಶಿಕ್ಷಕರಾದ ನಾರಾಯಣ ಪೂಜಾರಿ, ಶಾರದಾ ಜಿ, ಶಂಕರ, ಉದಯಕುಮಾರಿ, ಶೀನ ನಾಯ್ಕ, ನಿಂಗರಾಜು, ಯಶೋಧಾ, ಪ್ರೌಢಶಾಲಾ ವಿಭಾಗದ ಶಿಕ್ಷಕರಾದ ಶೇಕ್‌ ಆದಂ ಸಾಹೇಬ್‌, ವಿಶ್ವನಾಥ ಗೌಡ ಕೆ, ಜಾನ್‌ಚಂದ್ರನ್‌, ವಿನಯ ಕುಮಾರಿ, ಮಹಾದೇವ, ಸತೀಶ್‌ ಭಟ್‌, ದಯಾನಂದ ಎನ್‌.ಕೆ. ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಕಳೆದ ಸಾಲಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಾದ ವಸಂತಿ ಹಾಗೂ ಸಂಜೀವ ಅವರನ್ನು ಗೌರವಿಸ ಲಾಯಿತು. ಕಾರ್ಯಕ್ರಮದಲ್ಲಿ ಸ್ವತ್ಛತಾ ವರ್ಷಾಚರಣೆಯ ಪ್ರಾರಂಭೋತ್ಸವ ಹಾಗೂ ಕಿರುಚಿತ್ರಗಳನ್ನು ಬಿಡುಗಡೆ ಗೊಳಿಸ ಲಾಯಿತು. ಗುರು ಚೇತನ ಕಾರ್ಯಕ್ರಮದ ಲಾಂಛನ, ತರಬೇತಿ ಸಾಹಿತ್ಯವನ್ನು ಅನಾ ವರಣಗೊಳಿಸಲಾಯಿತು. 

Advertisement

ಪುತ್ತೂರು ಸರಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲ ಅವರು ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್‌ ಕವಿತಾ ಸನಿಲ್‌, ಮಂಗಳೂರು ತಾ.ಪಂ.ಅಧ್ಯಕ್ಷ ಮಹಮ್ಮದ್‌ ಮೋನು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ಕುಮಾರ ಕಲ್ಕೂರ, ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಸಹ ನಿರ್ದೇಶಕ ದಿವಾಕರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ.ಎಲ್‌, ತಾ.ಪಂ.ಇಓ ಜಿ. ಸದಾನಂದ ಮೊದಲಾದವರು ಉಪಸ್ಥಿತರಿದ್ದರು. 

ಜಿ.ಪಂ.ಸಿಇಒ ಡಾ| ಎಂ.ಆರ್‌. ರವಿ ಅವರು ಸ್ವತ್ಛತಾ ವರ್ಷಾಚರಣೆ ಹಾಗೂ ಡಯಟ್‌ ಪ್ರಾಂಶುಪಾಲ ಸಿಪ್ರಿಯನ್‌ ಮೊಂತೆರೋ ಅವರು ಗುರುಚೇತನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಡಿಡಿಪಿಐ ವೈ.ಶಿವರಾಮಯ್ಯ ಸ್ವಾಗತಿಸಿದರು. 

ಮಾರ್ಚ್‌ 22 ಚಲನಚಿತ್ರ: ಸಚಿವ ರೈ ಶ್ಲಾಘನೆ
ನೀರಿನ ಕುರಿತು ಜನರ ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯದ ಕುರಿತು ನಿರ್ಮಾಣಗೊಂಡಿರುವ ಕನ್ನಡ ಚಲನಚಿತ್ರ ಮಾರ್ಚ್‌ 22ರ ಕುರಿತು ಸಚಿವ ರೈ ಅವರು ಶ್ಲಾಘನೆ ವ್ಯಕ್ತ ಪಡಿ ಸಿದರು. ನಾನು ಸಿನೆಮಾ ನೋಡದವ ಕೂಡ ಅದನ್ನು ನೋಡಿದ್ದೇನೆ. ಉತ್ತಮ ಸಂದೇಶವಿರುವ ಈ ಚಿತ್ರವನ್ನು ಶಿಕ್ಷಕರ ಜತೆಗೆ ವಿದ್ಯಾರ್ಥಿಗಳು ನೋಡಬೇಕು ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next