Advertisement

ಸಮಾಜಕ್ಕೆ ಒಳ ಮೀಸಲಾತಿ ಅಗತ್ಯವಿದೆ: ವೈ.ಎಸ್‌.ವಿ. ದತ್ತ

11:47 PM Aug 02, 2019 | Team Udayavani |

ಉಡುಪಿ: ಇಂದು ಅನೇಕರು ಮೀಸಲಾತಿಯಿಂದ ಅಧಿಕಾರ, ಶೈಕ್ಷಣಿಕ ಸೇರಿದಂತೆ ವಿವಿಧ ಸವಲತ್ತು ಪಡೆದುಕೊಂಡು ಬಲಿಷ್ಠವಾಗಿ ಬೆಳೆದ ಮೇಲೆ ಅವರ ಮಕ್ಕಳೂ ಸಹ ಮೀಸಲಾತಿ ಪಡೆಯುತ್ತಿದ್ದಾರೆ. ಅದನ್ನು ತಪ್ಪಿಸಲು ಮೀಸಲಾತಿಯೊಳಗೆ ಒಳ ಮೀಸಲಾತಿಯನ್ನು ಮಾಡಬೇಕು ಎಂದು ಮಾಜಿ ಶಾಸಕ ವೈ.ಎಸ್‌.ವಿ. ದತ್ತ ತಿಳಿಸಿದ್ದಾರೆ.

Advertisement

ಅಜ್ಜರಕಾಡು ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮತ್ತೆ ಕಲ್ಯಾಣ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಇಂದು ಜಾತಿ ಮೀಸಲಾತಿ ಅಗತ್ಯವೇ ಎನ್ನುವ ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರಿಸಿದರು.

ಬಸವಣ್ಣ ಅವರು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ್ದಾರೆ. ಅವರಿಂದ ಪ್ರೇರಿತರಾಗಿ ಮೀಸಲಾತಿ ಜಾರಿಗೆ ತರಲಾಗಿದೆ. ಶೋಷಣೆಗೆ ಒಳಗಾದವರು ಅಭಿವೃದ್ಧಿ ಹೊಂದಬೇಕಾದರೆ ಅವರಿಗೆ ಮೀಸಲಾತಿ ಅಗತ್ಯವಿದೆ. ಸಮಾನತೆಯ ಸಮಾಜ ನಿರ್ಮಾಣವಾದರೆ ಮೀಸಲಾತಿ ಬೇಕಾಗಿಲ್ಲ. ಆದರೆ ಇಂದು ಆನೇಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೀಸಲಾತಿ ಬೇಕಾಗಿದೆ ಎಂದರು.

21ನೇ ಶತಮಾನದಲ್ಲಿ ವಚನಗಳ ಮೂಲಕ ಕ್ರಾಂತಿ ಮೂಲಕ ಸಾಧ್ಯವೆ?
ವಚನಗಳಿಗೆ ಸಮಾಜವನ್ನು ಬದಲಾಯಿಸುವ ಶಕ್ತಿಯಿದೆ. 12ನೇ ಶತಮಾನದಲ್ಲಿ ಶರಣರು ಕಾಯಕ ವ್ಯಕ್ತಿಗಳಿಗೆ ನಿಜಾವಾದ ಜ್ಞಾನವನ್ನು ಹಂಚಿದರು. ಸುಜ್ಞಾನಿಗಳಾಗಿದ್ದರೆ ಜಾತಿಯೆಂಬ ಭೂತಕ್ಕೆ ಅಂಟಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮನುಕುಲದ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉತ್ತರಿಸಿದರು.

ಯಾವ ದೇವರನ್ನು ನಾವು ನಂಬಬೇಕು? ಆತ್ಮಸಾಕ್ಷಿ ದೇವರನ್ನು…
ಇಂದು ದೇವರ ಹೆಸರಿನಲ್ಲಿ ಪೂಜಾರಿಗಳು, ಪುರೋಹಿತರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅಂತಹ ದೇವರಗಳ ಕೊಡವೇ ನಮಗೆ ಬೇಡ. ದೇವರುಗಳ ಅಭರಣ ದರೋಡೆಯಾದಾಗ ದೇವರು ಕಳ್ಳರಿಗೆ ಶಿಕ್ಷೆ ನೀಡಿದ ನಿದರ್ಶನವಿಲ್ಲ. ತನ್ನ ಆಭರಣಗಳನ್ನು ಹುಡುಕಿಕೊಳ್ಳದ ಸ್ಥಾವರ ದೇವರು ಎಲ್ಲಾದರೂ ವರ ಹಾಗೂ ಶಾಪ ಕೊಡಲು ಸಾಧ್ಯವೇ?. ಪೂಜಾರಿ ಹಾಗೂ ಪುರೋಹಿತರು ವರ ಹಾಗೂ ಶಾಪದ ಪಾಪವನ್ನು ಜನರ ತಲೆಯಲ್ಲಿ ತುಂಬಿ ತಮ್ಮ ಬೇಳೆ ಬೆಳೆಸಿಕೊಳ್ಳುತ್ತಿದ್ದಾರೆ.
ಆದರಿಂದ ಅಂತಹ ದೇವರು ನಂಬಬೇಡಿ. ಮೊದಲು ನಿಮ್ಮ ಆತ್ಮಸಾಕ್ಷಿಯನ್ನು ನಂಬಿ ಎಂದು ಸ್ವಾಮೀಜಿ ಉತ್ತರಿಸಿದರು.

Advertisement

ವಿದ್ಯಾರ್ಥಿಗಳು ಯಾಕೆ ಮತ್ತೆ ಕಲ್ಯಾಣ ಆಯ್ಕೆ ಮಾಡಬೇಕು?
“ಮತ್ತೆ ಕಲ್ಯಾಣ’ ಮೂಲಕ ಮನಸ್ಸು ಪರಿಪಕ್ವವಾಗಲು ಸಾಧ್ಯ. ಇದಕ್ಕೆ ಪೂರಕವಾಗಿ ವಚನ ಧರ್ಮ ನೆರವು ನೀಡುತ್ತಿದೆ. ಇಲ್ಲಿ ಶುದ್ಧ ಮಾನವೀಯ ಆಂತಕರಣವನ್ನು ಅರಳಿಸುವ ತತ್ವಗಳಿವೆ. ಈ ನಿಟ್ಟಿನಲ್ಲಿ ವಚನಗಳ ಮೂಲಕ ಇವತ್ತಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನವಾಗಬೇಕಿದೆ. ಇಲ್ಲಿ ಯಾವುದೇ ಧರ್ಮದ ಪ್ರಚಾರವಿಲ್ಲ ಎಂದು ಸ್ವಾಮೀಜಿ ತಿಳಿಸಿದರು.

ರಾಜಕಾರಣಿಗಳನ್ನು ತಿರಸ್ಕರಿಸಿ
ನಾವೆಲ್ಲ ಮೊದಲು ಮನುಷ್ಯ ಜಾತಿ ಎನ್ನುವುದನ್ನು ಅರಿತಕೊಂಡಾಗ ಮಾತ್ರ ಜಾತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ. ಇಂದು ರಾಜಕೀಯದಲ್ಲಿ ಜಾತಿಯನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಇಂತಹ ಭ್ರಷ್ಟ ರಾಜಕಾರಣಿಗಳನ್ನು ತಿರಸ್ಕರಿಸಿ ಒಳ್ಳೆಯ ರಾಜಕಾರಣಿಗಳನ್ನು ಆಯ್ಕೆ ಮಾಡಿ ಎಂದು ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next