Advertisement

ಶಿಕ್ಷಣದಲ್ಲಿ ಸಾಮಾಜಿಕ ಮೌಲ್ಯ

11:28 PM Jul 23, 2019 | mahesh |

ಶಿಕ್ಷಣ ಎನ್ನುವುದು ಪ್ರತಿಯೊಬ್ಬರಿಗೂ ಮುಖ್ಯ. ಅದರ ಜತೆಯಲ್ಲಿ ಸಾಮಾಜಿಕ ಮೌಲ್ಯಗಳು ಕೂಡ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೌಲ್ಯಗಳು ಪ್ರಮುಖವಾಗಿ ನಮ್ಮನ್ನು ಬೆಳೆಸಲು ನೆರವಾಗುವುದಲ್ಲದೆ ನಮ್ಮ ಭವಿಷ್ಯವನ್ನು ಸ್ವತಃ ನಾವೇ ರಚಿಸಲು ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಅನೇಕ ರೀತಿಯ ಮೌಲ್ಯಗಳಿದ್ದು ನಿಮ್ಮ ಜೀವನ ಶೈಲಿಯನ್ನು ಅದನ್ನು ನಿರ್ಧರಿಸುತ್ತದೆ.

Advertisement

ಸಾಮಾಜಿಕ ಮೌಲ್ಯಗಳು
ಈ ಮೌಲ್ಯಗಳು ಸಮಾಜದಲ್ಲಿ ನಿಮ್ಮ ನಡವಳಿಕೆ ಹೇಗಿರುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ ಪರಿಸರ ಜಾಗೃತಿ, ವಿಜ್ಞಾನ, ಮತ್ತು ಸುಸ್ಥಿರತೆಯನ್ನು ಒಳಗೊಂಡಿರುತ್ತವೆ. ಸಮಾಜದಲ್ಲಿ ಬೇರೆಯವರೊಂದಿಗೆ ನಡೆದುಕೊಳ್ಳುವ ರೀತಿ, ನಿಮ್ಮ ಸಹಾಯ ಗುಣ ಹೀಗೆ ಅನೇಕ ಗುಣಗಳನ್ನು ಈ ಸಾಮಾಜಿಕ ಮೌಲ್ಯಗಳು ನಿರ್ಧರಿಸುತ್ತವೆ.

ಇವುಗಳು ಶಿಕ್ಷಣದ ಮೇಲೆ ಕೂಡ ಪ್ರಭಾವ ಬೀರುತ್ತದೆ. ಯಾವುದೇ ಒಬ್ಬ ಮನುಷ್ಯನಿಗೆ ಶಿಕ್ಷಣವಿದ್ದಾಗ ಆತ ತನ್ನ ಬುದ್ದಿಯನ್ನು ಉಪಯೋಗಿಸಿ ಯೋಚಿಸುತ್ತಾನೆ. ಇದರಿಂದ ಸಮಾಜದಲ್ಲಿ ಆಗು ಹೋಗುಗಳು ಏನು ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಒಬ್ಬ ಸಾಮಾನ್ಯ ನಾಗರಿಕ ಶಿಕ್ಷಣದಿಂದಲೇ ಪ್ರಜ್ಞಾವಂತ ನಾಗರಿಕನಾಗಲು ಸಾಧ್ಯ ಆದ್ದರಿಂದ ಯೋಚನಾ ಸಾಮರ್ಥ್ಯ ಹೆಚ್ಚುವಲ್ಲಿ ಶಿಕ್ಷಣ ಬಹು ಮುಖ್ಯ ಪಾತ್ರವಹಿಸುತ್ತದೆ.

ಯಾವುದು ಸರಿ, ಅಥವಾ ಯಾವುದು ತಪ್ಪು ಎಂದು ತಿಳಿಯುವುದು ಶಿಕ್ಷಣದಿಂದ, ಸಮಾಜದಲ್ಲಿ ಆಗು ಹೋಗುಗಳನ್ನು ಅರಿಯಲು ಶಿಕ್ಷಣದಿಂದ ಮಾತ್ರ ಸಾಧ್ಯ. ಸಮಾಜದಲ್ಲಿ ಒಂದು ಸುಸ್ಥಿರತೆಯನ್ನು ತರುವುದು ನಿಮ್ಮ ಶಿಕ್ಷಣ.

ಸಾಮಾಜಿಕ ಮೌಲ್ಯಗಳು ಹುಟ್ಟುವುದು ಪ್ರಾಥಮಿಕ ಶಿಕ್ಷಣದಿಂದಲೇ ಹಾಗಾಗಿ ಶಿಕ್ಷಣ ವ್ಯವಸ್ಥೆ ಯಾವುದು ಕೆಟ್ಟದ್ದು ಮತ್ತು ಯಾವುದು ಒಳ್ಳೆಯದನ್ನು ಎಂಬುದನ್ನು ಕಲಿಸಿಕೊಡುತ್ತದೆ. ಬೇರೆಯವರು ಹೇಳಿದ ಮಾತಿಗಿಂತ ನೀವು ಅರಿತು ನಡೆಯವುದು ನಿಮ್ಮನ್ನು ಮುನ್ನಡೆಯಲು ಸಹಾಯ ಮಾಡುತ್ತದೆ.

Advertisement

ಶಿಕ್ಷಣವಿಲ್ಲದವರಿಗೆ ಸಾಮಾಜಿಕ ಮೌಲ್ಯಗಳಿಲ್ಲವೆಂದಲ್ಲ ಆದರೆ, ತಪ್ಪು ಒಪ್ಪುಗಳನ್ನು ಮುಂದಿಟ್ಟು ಸಮರ್ಥಿಸುವಾಗ ಶಿಕ್ಷಣದ ಅಗತ್ಯತೆ ಇರುತ್ತದೆ. ಸಮಾಜದಲ್ಲಿ ಆದದ್ದು ತಪ್ಪು ಎಂದು ಗುರುತಿಸಲು ನಮಗೆ ಶಿಕ್ಷಣದ ಆವಶ್ಯಕತೆಯಿರುತ್ತದೆ. ಆಗ ಮಾತ್ರ ನಮ್ಮ ಸಮಾಜವನ್ನು ನಾವು ಪ್ರಗತಿಯ ದಾರಿಯಲ್ಲಿ ಕರೆದೊಯ್ಯಲು ಸಾಧ್ಯ. ಕಾಲೇಜು ಹೋಗುವಾಗಲೇ ಮೌಲ್ಯಗಳೆಂದರೇನು? ಎಂಬುದನ್ನು ಅರಿಯಬೇಕು ಇದು ಮುಂದೆ ಭವಿಷ್ಯದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ.

ವೈಯಕ್ತಿಕ ಮೌಲ್ಯಗಳು
ವೈಯಕ್ತಿಕ ಮೌಲ್ಯಗಳು ಯಾವಾಗಲೂ ನೀವು ಅನುಸರಿಸುವ ತಣ್ತೀ ಗಳು, ನಿಮ್ಮ ಸ್ವಹಿತಾಸಕ್ತಿ ಮತ್ತು ಅಗತ್ಯದ ಮೇಲೆ ಅವಲಂಬಿತವಾಗಿರುತ್ತದೆ. ವೈಯಕ್ತಿಕ ಮೌಲ್ಯಗಳಲ್ಲಿ ಉತ್ಸಾಹ, ಸೃಜನಶೀಲತೆ, ನಮೃತೆ ಮತ್ತು ವೈಯಕ್ತಿಕ ನೆರವೇರಿಕೆಗಳನ್ನು ಒಳಗೊಂಡಿರುತ್ತದೆ.

ಸಂಬಂಧದ ಮೌಲ್ಯ

ಸಂಬಂಧದ ಮೌಲ್ಯಗಳು ನಿಮ್ಮ ಜೀವನದಲ್ಲಿ ಇತರ ಜನರೊಂದಿಗೆ ನೀವು ಹೇಗೆ ಸಂಬಂಧಗಳನ್ನು ಹೊಂದಿದ್ದೀರಿ ಎಂಬುದನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ಕಾಲೇಜು ಜೀವನದಲ್ಲಿ ನಿಮ್ಮ ಸ್ನೇಹಿತರು, ಕುಟುಂಬ ಅಥವಾ ನಿಮ್ಮ ಸುತ್ತಮುತ್ತಿನವರೊಂದಿಗೆ ನಿಮ್ಮ ಭಾಂಧವ್ಯ ಹೇಗಿರುತ್ತದೆ ಎಂಬುದನ್ನು ಒಳಗೊಂಡಿದೆ.

-ಜೀವ

Advertisement

Udayavani is now on Telegram. Click here to join our channel and stay updated with the latest news.

Next