Advertisement

“ಕಲಾನ್ವೇಷಣೆಯಿಂದ ಸಮಾಜ ಪರಿವರ್ತನೆ ಸಾಧ್ಯ’

06:11 PM Jan 07, 2020 | Suhan S |

ಮುಂಬಯಿ, ಜ. 6: ಮುಂಬಯಿ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬರುವುದೆಂದರೆ ದೊಡª ಮಾತು. ನಮಗೆ ಬಾರದಿದ್ದರೂ ಬೇಸರವಿಲ್ಲ. ಆದರೆ ನನ್ನ ಮಿತ್ರರೋರ್ವರಿಗೆ ಬಂದಿರುವುದು ಸಂತೋಷವಾಗಿದೆ. ಕಲೆ ಪ್ರದರ್ಶನಕ್ಕೆ ಪ್ರಶಂಸೆ, ಪ್ರಶಸ್ತಿ ಮುಖ್ಯವಲ್ಲ, ಕಲಾವಿದನ ಸಂತುಷ್ಟತನವೇ ಪ್ರಧಾನವಾದದ್ದು. ಬರೇ ಮಾರಾಟಕ್ಕಾಗಿ ಚಿತ್ರಕಲಾವಿದನಾಗುವುದು ಸರಿಯಲ್ಲ. ಕಲಾವೃತ್ತಿ, ಪ್ರವೃತ್ತಿಯಿಂದ ಪರರ ಜೀವನಕ್ಕೆ ಆದರ್ಶರಾಗಬೇಕು. ಆ ಮೂಲಕ ಕಲಾ ಉಳಿವಿಗೆ ಕಲಾವಿದನು ಶ್ರಮಿಸಬೇಕು. ಕಲಾವಿದನಿಂದ ಸೃಜನಶೀಲಾ ಕಲೆ ತೃಪ್ತಿದಾಯಕವಾಗಿದೆ. ಕಲಾವಿದನು ಬಣ್ಣ ನಿರ್ಮಾಣ ಮಾಡಿ ಕಲಾ ಪ್ರದರ್ಶನ ಮಾಡಿದಾಗಲೇ ಕಲೆ ಜೀವನದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಕಲಾಧರ್ಮ ಉಳಿಸುವಿಕೆಯೇ ಕಲಾವಿದನ ಧರ್ಮವಾದಾಗಲೇ ಕಲೆಯಲ್ಲಿ ಸಮಾಜ ಪರಿವರ್ತನೆ ಸಾಧ್ಯವಾಗುತ್ತದೆ ಎಂದು ಚಿತ್ರಕಲಾ ಪುರಸ್ಕೃತ, ಅಂತಾರಾಷ್ಟ್ರೀಯ ಪ್ರಸಿದ್ಧಿಯ ಹಿರಿಯ ಕಲಾವಿದ ದೇವದಾಸ ಶೆಟ್ಟಿ ತಿಳಿಸಿದರು.

Advertisement

ಜ. 4 ರಂದು ಸಾಂತಾಕ್ರೂಜ್‌ ಪೂರ್ವದ ವಿದ್ಯಾನಗರಿಯ ಡಬ್ಲೂÂಆರ್‌ಐಸಿ ಸಭಾಗೃಹದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡದ ವಿಭಾಗ ಆಯೋಜಿಸಿದ್ದ ಕೃತಿಗಳ ಬಿಡುಗಡೆ, ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ಪ್ರಜಾವಾಣಿ ದೈನಿಕ ಮೈಸೂರು ಆವೃತ್ತಿಯ ಉಪ ಸಂಪಾದಕ ಗಣೇಶ್‌ ಅಮೀನಗಡ ಅವರ “ವನ್ಯ ವರ್ಣ’ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಚಿತ್ರ ಕಲಾವಿದ, ಮುಂಬಯಿ ಕನ್ನಡಿಗ, ಜಯವಂತ ಮುನ್ನೊಳ್ಳಿ ಕಲಾ ಬದುಕಿನ ನೋಟ) ಕೃತಿಯನ್ನು ದೇವದಾಸ ಶೆಟ್ಟಿ ಮತ್ತು ಸಹನಾ ಕಾಂತಬೈಲು ಇವರ “ಆನೆ ಸಾಕಲು ಹೊರಟವಳು’ ಕೃತಿಯನ್ನು ಜಯಂತ ಮುನ್ನೊಳ್ಳಿ ಬಿಡುಗಡೆಗೊಳಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಮತ್ತು ಕನ್ನಡ ವಿಭಾಗದ ಸಹ ಸಂಶೋಧಕಿ ಡಾ| ಉಮಾ ರಾವ್‌ ಕ್ರಮವಾಗಿ ಕೃತಿ ಪರಿಚಯಗೈದರು.

ನಾನು ಶೈಕ್ಷಣಿಕ ಚೌಕಟ್ಟಿಗೆ ಒಳಪಟ್ಟವನಲ್ಲ. ಆದರೆ ಎಲ್ಲಾ ಪತ್ರಕರ್ತರಲ್ಲಿ ಬಹುತರಹ ವಿಚಾರಗಳು ಹೊಳೆದಂತೆ ನನ್ನಲ್ಲೂ ಹೊಳೆದು ವನ್ಯಜೀವಿ ಚಿತ್ರ ಕಲಾವಿದನೋರ್ವರ ಕೃತಿ ರಚಿಸಿದೆ. ಇಂದು ಪತ್ರಿಕೆಗಳಲ್ಲಿ ಸಾಹಿತ್ಯಕ ವಿಷಯಗಳಿಗೆ ಜಾಗ ಕಡಿಮೆ ಆಗುತ್ತಿದ್ದರೂ ಹೊರನಾಡಿನ ಮುಂಬಯಿನಲ್ಲಿ ಕನ್ನಡದ ಕೈಕಂರ್ಯಗಳು ಶ್ರೀಮಂತಿಕೆಯಿಂದ ನಡೆಯುತ್ತಿರುವುದೇ ನಮ್ಮ ಅಭಿಮಾನ. ಮುಂಬಯಿವಾಸಿ ಕನ್ನಡಿಗರು ತಾವೂ ಬೆಳೆದು ಮತ್ತೂಬ್ಬರನ್ನೂ ಬೆಳೆಸುವ ಗುಣವುಳ್ಳವರು.

ಆದ್ದರಿಂದ ಇಲ್ಲಿ ಕಲೆ, ಸಾಹಿತ್ಯದ ಬೆಳವಣಿಗೆಗೆ ಅವಕಾಶಗಳಿವೆ. ತಪ್ಪುಗಳ ಹುಡುಕಾಟ ಪತ್ರಕರ್ತರ ಅಭ್ಯಾಸಬಲವಾಗಿದ್ದರೂ ಸಾಂದರ್ಭಿಕವಾಗಿ ಹೊಂದಾಣಿಕೆಯ ಮನೋಭಾವ ಅಗತ್ಯವಾಗಿರ ಬೇಕು ಎಂದು ಗಣೇಶ್‌ ಅಮೀನಗಡ ತಿಳಿಸಿದರು. ಸಹನಾ ಕಾಂತಬೈಲು ಮಾತನಾಡಿ ನನ್ನ ಮೊದಲ ಕೃತಿಯೇ ಮುಂಬಯಿ ಕನ್ನಡ ವಿಭಾಗದಲ್ಲಿ ಬಿಡುಗಡೆ ಆಗುವುದು ನನ್ನ ಬಾಗ್ಯವೇ ಸರಿ ಎಂದರು.

ಸಾಹಿತ್ಯದ ಮೂಲಕವೂ ಜಗತ್ತಿನ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಬಹುದು ಮತ್ತು ಜಗತ್ತನ್ನು ಸಾಹಿತ್ಯದ ಮೂಲಕ ತಿಳಿಯಬಹುದು ಅನ್ನುವುದನ್ನು ಇಲ್ಲಿ ತೋರ್ಪಡಿಸಿದ್ದೇವೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ. ಎನ್‌. ಉಪಾಧ್ಯ ನುಡಿದರು. ಹಿರಿಯ ಪತ್ರಕರ್ತ, ಸಾಹಿತಿ ರತ್ನಾಕರ್‌ ಆರ್‌. ಶೆಟ್ಟಿ, ಮಹೇಶ್ವರ್‌ ಕಾಂತಬೈಲು, ಪ್ರತಿಷ್ಠಿತ ಚಿತ್ರಕಲಾವಿದ ಜಯ್‌ ಸಿ. ಸಾಲ್ಯಾನ್‌, ಸಣ್ಣಯ್ಯ ದೇವಾಡಿಗ, ಡಾ| ಸತೀಶ್‌ ಮುನ್ನೊಳ್ಳಿ, ಡಾ| ಸಂಗೀತಾ ಮುನ್ನೊಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಲಾ ಭಾಗವತ್‌, ಪಾರ್ವತಿಪೂಜಾರಿ, ಶಶಿಕಲಾ ಹೆಗಡೆ ಪ್ರಾರ್ಥನೆಗೈದರು. ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು, ಸುಶೀಲಾ ದೇವಾಡಿಗ ವಂದಿಸಿದರು.

Advertisement

 

-ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.