Advertisement

ಶಿಕ್ಷಣದಿಂದ ಸಮಾಜ ಪ್ರಗತಿ

04:24 PM Jan 22, 2018 | Team Udayavani |

ರಾಯಚೂರು: ಶೈಕ್ಷಣಿಕ ಪ್ರಗತಿ ಹೊಂದಿದಾಗ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ
ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಜಿ.ನಾಗರಾಜ ಹೇಳಿದರು.

Advertisement

ನಗರದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಪದ್ಮಶಾಲಿ ಸಮಾಜದಿಂದ ಹಮ್ಮಿಕೊಂಡ ಶ್ರೀ ಮಾರ್ಕಂಡೇಶ್ವರ
ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪದ್ಮಸಾಲಿ ಸಮಾಜ ಜನಸಂಖ್ಯೆಯಲ್ಲಿ
ಚಿಕ್ಕದಾಗಿದ್ದು, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದೆ. ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಸಮಾಜದ
ಏಳಿಗೆಗೆ ಮುಂದಾಗಬೇಕು. ಅಂಥ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡುತ್ತಿರುವುದು ಮಾದರಿ ಎಂದರು.

ಸೋಮವಾರಪೇಟೆ ಮಠದ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೇಕಾರ ಸಮಾಜದ ದೇವರ ದಾಸಿಮಯ್ಯ ಮೊದಲ ವಚನಕಾರರಾಗಿದ್ದು, ಅವರ ವಚನಗಳಲ್ಲಿ ಅಡಗಿರುವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳ ಪ್ರತಿಭೆ ಗುರುತಿಸಿ ಸಮಾಜ ಗೌರವಿಸುತ್ತಿರುವುದು ಸಾಧನೆಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗಿದೆ ಎಂದರು.

ನಗರಸಭೆ ಸದಸ್ಯ ಎ.ಮಾರೆಪ್ಪ ಮಾತನಾಡಿದರು. ಸಮಾಜದ ಅಧ್ಯಕ್ಷ ಪಿ.ಗೋವಿಂದರಾಜುಲು, ಖಜಾಂಚಿ
ಪಿ.ನಾಗೇಶ, ಗೌರವಾಧ್ಯಕ್ಷ ಚಿನ್ನಿ ಪಾಂಡುರಂಗ, ಉಪಾಧ್ಯಕ್ಷ ಹೊನ್ನಾಲ ವೆಂಕಟೇಶ, ಸಮಾಜದ ಯಾದಗಿರಿ ಜಿಲ್ಲಾ ಮಾಜಿ ಅಧ್ಯಕ್ಷ ಕರ್ಲಿ ವಿಶ್ವನಾಥ, ಜಿಲ್ಲಾ ನೇಕಾರ ಸಮುದಾಯದ ತಾಲೂಕು ಅಧ್ಯಕ್ಷ ಕರ್ಲಿ ಈರಣ್ಣ, ಯುವಕ ಸಂಘದ
ಗೌರವಾಧ್ಯಕ್ಷ ಕೊಡಗಂಟಿ ಶರಣಬಸವ, ಅಧ್ಯಕ್ಷ ಚಿನ್ನಿ ಮುನಿಚಂದ್ರ, ಕಾರ್ಯದರ್ಶಿ ಪ್ರಭು ಕರ್ಲಿ, ಸಮಾಜದ
ಮಹಿಳಾ ಮಂಡಳಿ ಅಧ್ಯಕ್ಷೆ ಗಡ್ಡಂ ಕಲಾವತಿ, ಕಾರ್ಯದರ್ಶಿ ಗದ್ದೆ ರಾಧಾ, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಮಂಡಳಿ ಹಿಂದುಳಿದ ವರ್ಗಗಳ ಅಧ್ಯಕ್ಷೆ ಸರೋಜಿನಿ ಧಾರವಾಡಕರ್‌, ಸುರೇಶ ಧಾರವಾಡಕರ್‌, ಭಂಡಾರಿ ವೆಂಕಟೇಶ ಸೇರಿ ಸಮಾಜದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು. ಸಂಗೀತ ಶಿಕ್ಷಕ ರಾಘವೇಂದ್ರ ನೇತೃತ್ವದಲ್ಲಿ ಕರ್ಲಿ ಮಯೂರ ಹಾಗೂ ಕೊಡಗಂಟಿ ನರಸಿಂಹ ಮೂರ್ತಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪತ್ರಕರ್ತ ಈರಣ್ಣ ಕರ್ಲಿ ನಿರೂಪಿಸಿದರು.

ಮಾರ್ಕಂಡೇಶ್ವರ ಜಯಂತಿ ಪ್ರಯುಕ್ತ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಜರುಗಿದವು.
ಹೋಮ ಹವನ, ರುದ್ರಾಭಿಷೇಕ ಮತ್ತು ಶ್ರೀ ಮಾರ್ಕಂಡೇಶ್ವರ ಮತ್ತು ರಾಜರಾಜೇಶ್ವರಿ ದೇವಸ್ಥಾನಕ್ಕೆ ಕಳಸರೋಹಣ
ಮಾಡಲಾಯಿತು. ಆಂಜನೇಯ ದೇವಸ್ಥಾನದಿಂದ ಬಿಆರ್‌ಬಿ ವೃತ್ತದ ಮೂಲಕ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next