Advertisement

ಸಂಸ್ಕಾರದಿಂದ ಸಮಾಜ ಪ್ರಗತಿ ಸಾಧ್ಯ

10:02 AM Jan 23, 2019 | Team Udayavani |

ರಾಯಚೂರು: ನಿಜಶರಣ ಅಂಬಿಗರ ಚೌಡಯ್ಯರ ವೈಚಾರಿಕತೆ ಅಳವಡಿಸಿಕೊಳ್ಳುವ ಮೂಲಕ ಸಮಾಜ ಬಾಂಧವರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು. ಅಂದಾಗಲೇ ಸಮಾಜದ ಏಳಿಗೆ ಸಾಧ್ಯವಾಗಲಿದೆ ಎಂದು ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಪರಮೇಶ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗಂಗಾಮತಸ್ಥ ಸಮಾಜದ ಸಹಯೋಗದಲ್ಲಿ ನಗರದ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿಜಶರಣ ಅಂಬಿಗರ ಚೌಡಯ್ಯನವರು ಸಾಕಷ್ಟು ವಚನಗಳನ್ನು ರಚಿಸಿ ಸಮಾಜವನ್ನು ಸುಧಾರಿಸಲು ಶ್ರಮಿಸಿದರು. ಚೌಡಯ್ಯನವರ ವೈಚಾರಿಕ ಚಿಂತನೆ ಇಂದಿಗೂ ಪ್ರಸ್ತುತ ಎಂದರು.

ಶಿಕ್ಷಕ ಗೋಪಾಲ ನಾಯಕ ವಿಶೇಷ ಉಪನ್ಯಾಸ ನೀಡಿ, ನಿಜಶರಣ ಅಂಬಿಗರ ಚೌಡಯ್ಯನವರು ಸ್ವಾರ್ಥಕ್ಕಾಗಿ ಬಾಳದೆ ಸಮಾಜಕ್ಕಾಗಿ ಬಾಳಿದರು. ಉತ್ತಮ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದರು. ಅವರ ವಿಚಾರಗಳಲ್ಲಿ ಸಮಾನತೆ ಸಂದೇಶ ಕಾಣಬಹುದು. ಅವರ ಅನೇಕ ವಚನಗಳಲ್ಲಿ ಕೇವಲ 350 ವಚನಗಳು ಮಾತ್ರ ಲಭ್ಯವಾಗಿವೆ ಎಂದರು.

ನಗರ ಶಾಸಕ ಡಾ| ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ವಿ. ನಾಯಕ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಜಿಲ್ಲಾ ಗಂಗಾಮತಸ್ಥ ಸಮಾಜ ಅಧ್ಯಕ್ಷ ಕೆ.ಶಾಂತಪ್ಪ, ಹಿರಿಯ ಮುಖಂಡ ಕೆ.ಶರಣಪ್ಪ, ಕಡಗೋಲ ಆಂಜನೇಯ, ಶರಣಪ್ಪ ಕಡಗೋಲ ಇತರರು ಇದ್ದರು.

Advertisement

ಅದ್ದೂರಿ ಮೆರವಣಿಗೆ: ಅಂಬಿಗರ ಚೌಡಯ್ಯ ಜಯಂತ್ಯುತ್ಸವ ನಿಮಿತ್ತ ನಗರದ ಅಂಬಿಗರ ಚೌಡಯ್ಯ ವೃತ್ತದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಭಾವಚಿತ್ರದ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಎಂಎಲ್ಸಿ ಎನ್‌.ಎಸ್‌.ಬೋಸರಾಜು ಚಾಲನೆ ನೀಡಿದರು. ನಗರಸಭೆಯಿಂದ ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಆದರೆ, ವೇದಿಕೆ ಕಾರ್ಯಕ್ರಮ ಶುರುವಾದ ಕೆಲ ಹೊತ್ತಿಗೆ ಸಿದ್ಧಗಂಗಾ ಶ್ರೀಗಳ ಶಿವೈಕ್ಯ ಸುದ್ದಿ ಬಂದ ಕಾರಣ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next