Advertisement

ಬರ ನಿರ್ವಹಣೆಗೆ ಅಂತರ್ಜಲ ಸುಧಾರಣೆಯೇ ಪರಿಹಾರ: ಬೋಸರಾಜು

12:22 AM Sep 28, 2023 | Team Udayavani |

ಬೆಂಗಳೂರು: ಸರಕಾರಕ್ಕೆ ಅತಿವೃಷ್ಟಿ ಮತ್ತು ಅನಾವೃಷ್ಟಿ ಗಳೆರಡನ್ನೂ ನಿರ್ವಹಿಸುವುದು ಸವಾಲಿನ ಸಂಗತಿ. ಪ್ರಸ್ತುತ ಬರ ನೀಗಲು ಜಲ ಮೂಲಗಳ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಸುಧಾರಣೆಯೇ ಪರಿಹಾರ. ರಾಜ್ಯದ 40 ಸಾವಿರ ಜಲಮೂಲಗಳ ಸಂರಕ್ಷಣೆ ಹಾಗೂ ಪುನಃಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌. ಬೋಸರಾಜು ಅಭಿಪ್ರಾಯಪಟ್ಟರು.

Advertisement

“ಉದಯವಾಣಿ’ ಬೆಂಗಳೂರು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿವೃಷ್ಟಿ ಸಂದರ್ಭದಲ್ಲಿ ಪ್ರವಾಹ ಉಂಟಾಗಿ ನೀರು ವ್ಯರ್ಥವಾಗುವುದಲ್ಲದೆ, ರೈತರ ಬೆಳೆ ನಷ್ಟ, ಜನ-ಜಾನುವಾರುಗಳಿಗೆ ಸಂಕಷ್ಟ ಎದುರಾಗುತ್ತವೆ. ವ್ಯರ್ಥವಾಗುವ ನೀರನ್ನು ಹೇಗೆಲ್ಲ ಸದ್ಬಳಕೆ ಮಾಡಿ ಕೊಳ್ಳಬಹುದು ಎಂಬ ಆಲೋಚನೆ ಒಂದೆಡೆಯಿದ್ದರೆ, ಬರಗಾಲದಂತಹ ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಎಂಬ ಚಿಂತನೆಗಳೂ ಇನ್ನೊಂದೆಡೆ ಇವೆ. ಹೀಗಾಗಿ ಲಭ್ಯವಿರುವ ಜಲಮೂಲ ಗಳನ್ನು ಸಂರಕ್ಷಿಸಿದರೆ ಅಂತರ್ಜಲ ವೃದ್ಧಿಯಾಗಿ ಬರಗಾಲ ನಿರ್ವಹಣೆ ಸುಲಭವಾಗಲಿದೆ. ಈ ನಿಟ್ಟಿನಲ್ಲಿ ತಮ್ಮ ಸರಕಾರ ಕಾರ್ಯೋನ್ಮುಖವಾಗಿದೆ ಎಂದರು.

ಸದ್ಯಕ್ಕೆ ರಾಜ್ಯದ 195ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಈ ಸಂಖ್ಯೆ ಮತ್ತಷ್ಟು ಏರಿಕೆಯೂ ಆಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next