Advertisement

ಪ್ರವಾಸಿ ತಾಣಗಳ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳಿಗೆ ಮೊರೆ !

02:28 AM Feb 12, 2020 | mahesh |

ಉಡುಪಿ: ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚಾಗುತ್ತಿರುವ ವ್ಯಾಮೋಹ ಕಂಡು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಇದೀಗ ಉಡುಪಿಯ ಪ್ರವಾಸಿ ತಾಣಗಳ ಪ್ರಚಾರಕ್ಕಾಗಿ ಯೂಟ್ಯೂಬ್‌, ಟ್ವಿಟರ್‌, ಇನ್‌ಸ್ಟಾಗ್ರಾಂನ ಮೊರೆ ಹೋಗಿದೆ. ಇಲಾಖೆಯ ಹೆಸರಿನಲ್ಲಿ ಈಗಾಗಲೇ “ಬ್ಲೆಸ್ಡ್ ಬೈ ನೇಚರ್‌’ ಎನ್ನುವ ಟ್ಯಾಗ್‌ ಲೈನ್‌ ಹೊಂದಿರುವ ಫೇಸ್‌ಬುಕ್‌ ಪೇಜ್‌ ತೆರೆಯಲಾಗಿದ್ದು, 17 ಸಾವಿರಕ್ಕೂ ಅ ಧಿಕ ಮಂದಿ ಲೈಕ್‌ ಮಾಡಿದ್ದಾರೆ. ಇದೀಗ ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಚಾನೆಲ್‌, ಟ್ವೀಟರ್‌, ಪಿಂಟರೆಸ್ಟ್‌ ಜಾಲತಾಣದಲ್ಲಿ ಖಾತೆ ತೆರೆಯಲಾಗಿದೆ.

Advertisement

ಪ್ರಾಥಮಿಕ ಮಾಹಿತಿ ಇರಲಿದೆ
2019ರ ನವೆಂಬರ್‌ನಿಂದ ಇಲಾಖೆ ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ, ಫೋಟೋಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ. ವಾರಕ್ಕೆ ಎರಡರಂತೆ ತಿಂಗಳಿಗೆ 8 ಪ್ರವಾಸಿ ತಾಣಗಳ ಪ್ರಾಥಮಿಕ ಮಾಹಿತಿ, ಆಕರ್ಷಕ ಫೋಟೋ ಹಾಗೂ ವಿಡಿಯೋ ಅಪ್‌ಲೋಡ್‌ ಮಾಡುತ್ತಿದ್ದಾರೆ. ಅಲ್ಲದೇ ಆ ಪ್ರವಾಸಿ ತಾಣಗಳ ರೂಟ್‌ ಮ್ಯಾಪ್‌ ವಿವರಗಳ ಮಾಹಿತಿಯನ್ನು ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ನೀಡಲಾಗಿದೆ.

ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ದೇವಸ್ಥಾನಗಳು, ಚರ್ಚ್‌, ಬಸದಿಗಳು, ಬೀಚ್‌, ನದಿ, ಜಲಪಾತಗಳು, ಮ್ಯೂಸಿಯಂಗಳು ಸೇರಿವೆ. ಮಲ್ಪೆ, ಒತ್ತಿನೆಣೆ, ಕೋಡಿ, ತ್ರಾಸಿ ಬೀಚ್‌ಗಳು, ಸೈಂಟ್‌ ಮೇರೀಸ್‌ ದ್ವೀಪ, ಕೃಷ್ಣ ಮಠ, ಮಂದಾರ್ತಿ, ಆನೆಗುಡ್ಡೆ, ಗುಡ್ಡಟ್ಟು, ಮೆಕ್ಕೆಕಟ್ಟು, ಕಲ್ಲು ಗಣಪತಿ, ಅಂಬಲಪಾಡಿ, ಕಮಲಶಿಲೆ, ಕೋಟೇಶ್ವರ, ಹಟ್ಟಿಯಂಗಡಿ, ಕಾರ್ಕಳ ಅನಂತಶಯನ, ಶಂಕರ ನಾರಾಯಣ,

ಉಡುಪಿ
ಅನಂತೇಶ್ವರ, ಚಂದ್ರ ಮೌಳೀಶ್ವರ ದೇವಸ್ಥಾನಗಳು, ಆನೆಕೆರೆ ಕೆರೆಬಸದಿ, ನಲ್ಲೂರು, ವರಂಗ ಕೆರೆಬಸದಿ, ನೇಮಿನಾಥ ಬಸದಿಗಳು, ಬೆಳ್ಕಲ್‌ ತೀರ್ಥ, ಜೋಮ್ಲು, ಮಣಿಪಾಲ ಅರ್ಬಿ, ಕೂಡ್ಲು ಜಲಪಾತಗಳು, ಸೌರ್ಪಣಿಕಾ ನದಿ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ, ಕೊಲ್ಲೂರು ಆನೆಝರಿ ಬಟರ್‌ಫ್ಲೈ ಪಾರ್ಕ್‌, ಸೀತಾನದಿ ನ್ಯಾಚುರ್‌ ಕ್ಯಾಂಪ್‌, ಮಣಿಪಾಲ ಎಂಡ್‌ ಪಾಯಿಂಟ್‌, ಮಣಿಪಾಲ ಮಣ್ಣುಪಳ್ಳ, ಬಾಕೂìರು, ಮಣಿಪಾಲ ಹಸ್ತಶಿಲ್ಪ, ಕೋಟ ಶಿವರಾಮ ಕಾರಂತ ಥೀಮ್‌ ಪಾರ್ಕ್‌, ಕಾರ್ಕಳದ ಕೋಟಿ ಚೆನ್ನಯ ಥೀಮ್‌ ಪಾರ್ಕ್‌, ಸಾಲಿಗ್ರಾಮ ಡಿವೈನ್‌ ಪಾರ್ಕ್‌, ಉಡುಪಿ ನಾಣ್ಯ ಸಂಗ್ರಹಾಲಯ, ಮಣಿಪಾಲದ ಅನಾಟಮಿ ಮ್ಯೂಸಿಯಂ, ಉದ್ಯಾವರ ಚರ್ಚ್‌, ಅತ್ತೂರು ಬಸಿಲಿಕಾ ಸೇರಿದಂತೆ ಇತರ ಪ್ರವಾಸಿ ತಾಣಗಳು ಪ್ರಮುಖ ಸ್ಥಾನ ಪಡೆದಿವೆ.

ಪ್ರವಾಸಿ ತಾಣಗಳ ಗುರುತು
ಈಗಾಗಲೇ ಇಲಾಖೆಯಿಂದ ಜಿಲ್ಲೆಯಲ್ಲಿನ ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿ ಇತಿಹಾಸ, ಸಂಸ್ಕೃತಿ, ಪರಂಪರೆಯ ಆಧಾರದಲ್ಲಿ ಉತ್ತೇಜನ ನೀಡಲಾಗುತ್ತಿದೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿರುವ ಜಿಲ್ಲೆಯಲ್ಲಿ 40ಕ್ಕೂ ಅಧಿಕ ಪ್ರವಾಸಿ ಸ್ಥಳಗಳನ್ನು ಗುರುತಿಸಲಾಗಿದೆ.

Advertisement

ಸ್ಥಳೀಯರು, ಜನಪ್ರತಿನಿಧಿಗಳು, ಪ್ರವಾಸಿಗರು, ಅಧಿಕಾರಿಗಳು ನೀಡಿರುವ ಪ್ರವಾಸಿ ತಾಣಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅದರ ಅನ್ವಯ ಹೊಸದಾಗಿ 40ಕ್ಕೂ ಅಧಿಕ ಜಾಗ ಗುರುತಿಸಲಾಗಿದೆ. ಹೊಸದಾಗಿ ಯೂ ಟ್ಯೂಬ್‌ ಚಾನೆಲ್‌, ಟ್ವಿಟರ್‌, ಪಿಂಟರೆಸ್ಟ್‌ನಲ್ಲಿ ಪ್ರವಾಸಿ ತಾಣದ ಕುರಿತು ವಿಶೇಷವಾಗಿ ಪ್ರಚಾರ ನೀಡಲಾಗುತ್ತಿದೆ.
– ಚಂದ್ರಶೇಖರ ನಾಯ್ಕ, ಪ್ರಭಾರ ಸಹಾಯಕ ನಿರ್ದೇಶಕರು, ಜಿಲ್ಲಾ ಪ್ರವಾಸೋದ್ಯಮ ಇಲಾಖೆ. ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next