Advertisement
ಇದು, ರಾಜ್ಯ ಸರ್ಕಾರ ಪ್ರಕಟಿಸಿರುವ ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ(ವರ್ಗೀಕರಣ, ನೋಂದಣಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಾನ್ಯತೆ, ನಿಯಂತ್ರಣ, ಪಠ್ಯವಸ್ತು ನಿಗದಿಪಡಿಸುವಿಕೆ) ತಿದ್ದುಪಡಿ ನಿಯಮಗಳ 2017 ಕರಡು ಪ್ರತಿಯಲ್ಲಿ ಉಲ್ಲೇಖೀಸಿರುವ ಪ್ರಮುಖ ಅಂಶಗಳು.
Related Articles
Advertisement
ನೋಂದಣಿ ನಿಯಮ:ಪೂರ್ವ ಪ್ರಾಥಮಿಕಕ್ಕೆ ಬಿಬಿಎಂಪಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ 2 ಸಾವಿರ ಚದರ ಅಡಿ, ಇತರೆ ಪ್ರದೇಶದಲ್ಲಿ 4 ಸಾವಿರ ಚದರ ಅಡಿ ಭೂಮಿ ಇರಬೇಕು. ಪ್ರಾಥಮಿಕ ಬಿಬಿಎಂಪಿ, ನಗರಸಭೆ ವ್ಯಾಪ್ತಿಯಲ್ಲಿ 1500 ಚದರ ಅಡಿ, ಇತರೆ ಪ್ರದೇಶದಲ್ಲಿ 3 ಸಾವಿರ ಚದರ ಅಡಿ ಭೂಮಿ ಇರಬೇಕು. ಪ್ರೌಢಶಾಲೆ ಬಿಬಿಎಂಪಿ, ನಗರಸಭೆ ವ್ಯಾಪ್ತಿಯಲ್ಲಿ 1 ಸಾವಿರ ಚದರ ಅಡಿ, ಇತರೆ ಪ್ರದೇಶದಲ್ಲಿ 2 ಸಾವಿರ ಚದರ ಅಡಿ ಭೂಮಿ ಇರಬೇಕು. ನೋಂದಣಿ ಶುಲ್ಕ ಮತ್ತು ಪ್ರಕ್ರಿಯೆ ಶುಲ್ಕ ಕ್ರಮವಾಗಿ 25 ಮತ್ತು 10 ಸಾವಿರದಿಂದ ಪ್ರಾರಂಭವಾಗಿ ತರಗತಿಗಳ ಆಧಾರದ ಮೆಲೆ 1 ಲಕ್ಷ ಹಾಗೂ 20 ಸಾವಿರ ರೂ.ನಿಗದಿ ಪಡಿಸಿದೆ. ಶೌಚಾಲಯ ತಾರತಮ್ಯ!
ಶಾಲೆಗಳ ಮೂಲಸೌಕರ್ಯದಡಿ ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಇರಬೇಕು ಎಂಬ ಅಂಶ ಇದೆ. ಬಾಲಕರ ಶೌಚಾಲಯ ಕಡ್ಡಾಯ ಎಂದು ನಮೂದಿಸಿ ಬಾಲಕಿಯರ ಶೌಚಾಲಯ ಅಗತ್ಯಕ್ಕೆ ಅನುಸಾರವಾಗಿ ನಿರ್ಮಿಸಿ ಎಂದಿದ್ದಾರೆ. ವಿದ್ಯಾರ್ಥಿಗಳಿಗೆ ಶೌಚಾಲಯ ಮತ್ತು ಕುಡಿಯುವ ನೀರು ಕಡ್ಡಾಯ, ಅದರಲ್ಲಿ ತಾರತಮ್ಯ ಸರಿಯಲ್ಲ. ಇದು ಹಾಸ್ಯಾಸ್ಪದ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಟೀಕಿಸಿವೆ. ಶಾಲೆಗಳಿಗೆ ಪ್ರತ್ಯೇಕವಾಗಿ ಮಾನ್ಯತೆ ಪಡೆಯುವ ಪದ್ಧತಿ ರದ್ದು ಮಾಡಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗಿದೆ. ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ನಿಗದಿ ಪಡಿಸಿದ್ದ ಮಾನದಂಡ ಅವೈಜ್ಞಾನಿಕವಾಗಿದೆ. ಶಾಲೆಗಳಲ್ಲಿ ಶೌಚಾಲಯ ಕಡ್ಡಾಯವಾಗಿರಲೇ ಬೇಕು. ಜ.13ರಂದು ನಡೆಯುವ ರಾಜ್ಯ ಮಟ್ಟದ ಸಮಾವೇಶದಲ್ಲಿ ಈ ಕುರಿತು ಚರ್ಚಿಸಲಿದ್ದೇವೆ.
– ಡಿ.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಕ್ಯಾಮ್ಸ್