Advertisement

ಮನೆಯಲ್ಲೇ ದುರಂತ ಅಂತ್ಯ ಕಂಡ 22 ವರ್ಷದ ಸೋಶಿಯಲ್‌ ಮೀಡಿಯಾ ಪ್ರಭಾವಿ ಯುವತಿ

10:14 AM Dec 28, 2022 | Team Udayavani |

ಛತ್ತೀಸ್ ಗಡ:‌ 22 ವರ್ಷದ ಸಾಮಾಜಿಕ ಜಾಲತಾಣ ಪ್ರಭಾವಿ (Social media influencer) ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ಛತ್ತೀಸ್ ಗಡದ ಚಕ್ರಧರ್ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ಇದನ್ನೂ ಓದಿ:ಜಮ್ಮು ಕಾಶ್ಮೀರ: ಉಗ್ರರ ಗುಂಡಿನ ಚಕಮಕಿ; ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಯೂಟ್ಯೂಬ್‌, ಫೇಸ್‌ ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ ನಲ್ಲಿ ತನ್ನ ರೀಲ್ಸ್‌ ಹಾಗೂ ಶಾರ್ಟ್ಸ್‌ ವಿಡಿಯೋಗಳಿಂದ ಅಪಾರ ಹಿಂಬಾಲಕರನ್ನು ಹೊಂದಿದ್ದ ಲೀನಾ ನಾಗವಂಶಿ ಕೊನೆಯ ಬಾರಿ ಕ್ರಿಸ್‌ ಮಸ್‌ ಹಬ್ಬದ ಪೋಸ್ಟ್‌ ಹಾಕಿದ್ದರು.  ಆ ಬಳಿಕ ತಮ್ಮ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾರೆ.

ಈ ಸಂಬಂಧ ಪೊಲೀಸರು ದೂರು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ರೀತಿ ನಿರ್ಧಾರ ತೆಗೆದುಕೊಳ್ಳುವುದರ ಹಿಂದೆ ಯಾವ ಕಾರಣವಿರಬಹುದು ಎಂದು ಪೊಲೀಸರು ಪ್ರಕರಣದ ಜಾಡನ್ನು ಪತ್ತೆ ಹಚ್ಚುತ್ತಿದ್ದಾರೆ.

ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಲೀನಾ ಇನ್ಸ್ಟಾಗ್ರಾಮ್‌ ನಲ್ಲಿ 10 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸನ್ನು ಹೊಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next