Advertisement
ಒಬ್ಬ ಗಣ್ಯ ವ್ಯಕ್ತಿ ನಿಧನರಾದಾಗ ಅವರು ಮಾಡಿದ ಸಾಧನೆ ನಮ್ಮ ಕಣ್ಣ ಮುಂದಿರುತ್ತದೆ. ಆ ಸಾಧನೆಯ ಮೂಲಕ ಅವರ ನೆನಪು ನೂರಾರು ವರ್ಷಗಳವರೆಗೆ ಇರುತ್ತದೆ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ಸಾವನ್ನಪ್ಪಿದಾಗ ಆತನ ಫೋಟೋಗಳೇ ನಮಗೆ ನೆನಪಿನ ಬುತ್ತಿ. ಹೆಚ್ಚೆಂದರೆ ಪತ್ರಗಳು, ಸಹಿ ಅಥವಾ ಇತರ ಸಣ್ಣ ಪುಟ್ಟ ಸಂಗತಿಗಳು ನೆನಪಿನ ಮೂಟೆ ಬಿಚ್ಚಬಹುದು. ಡಿಜಿಟಲ್ ಯುಗ ಬಂದಮೇಲೆ ಇವೆಲ್ಲವೂ ಬದಲಾಗಿವೆ. ನಾವು ಕೇವಲ ಭೌತಿಕ ಅಸ್ತಿತ್ವವನ್ನಷ್ಟೇ ಬಿಟ್ಟು ಹೊರಟು ಹೋಗುವುದಿಲ್ಲ. ನಮ್ಮ ಅತ್ಮದಂಥಾ ಡೇಟಾವನ್ನೂ ಬಿಟ್ಟೇ ಹೋಗುತ್ತೇವೆ. ಡಿಜಿಟಲ್ ಯುಗದಲ್ಲಿ ನಮ್ಮ ಅಸ್ತಿತ್ವವೇ ಸಂಕೀರ್ಣವಾಗಿದೆ. ನಮ್ಮ ನೆನಪನ್ನು ಸಂಬಂಧಿಕರು, ಆತ್ಮೀಯರು ಮನಸಿನಲ್ಲಿಟ್ಟುಕೊಂಡ ಹಾಗೆಯೇ ನಾವು ಬಿಟ್ಟು ಹೋದ ಡಿಜಿಟಲ್ ಖಾತೆಗಳು ಅಲ್ಲೆಲ್ಲೋ ಸರ್ವರುಗಳಲ್ಲಿ ಸುಮ್ಮನೆ ಮಲಗಿರುತ್ತದೆ. ಹಾಗಾದರೆ. ನಾವು ಸಾಯುವವರೆಗೆ ಸೃಷ್ಟಿಸುವ ಡೇಟಾ ಇದೆಯಲ್ಲ ಅದನ್ನು ಎಲ್ಲಿ ಸಮಾಧಿ ಮಾಡುವುದು? ಇದು ಸದ್ಯದ ದೊಡ್ಡ ಪ್ರಶ್ನೆ!
Related Articles
Advertisement
ಈಗಂತೂ ರಿಲಯನ್ಸ್ ಜಿಯೋ ಬಂದ ಮೇಲೆ ಎಲ್ಲರಿಗೂ ದಿನಕ್ಕೆ ಒಂದರಿಂದ ಒಂದೂವರೆ ಜಿಬಿ ಡೇಟಾ ಸಿಗುತ್ತದೆ. ಈ ಡೇಟಾದಲ್ಲಿ ದಿನಕ್ಕೆ 800 ಎಂಬಿಯನ್ನು ಯೂಟ್ಯೂಬ್ ವೀಡಿಯೋ ನೋಡಿ, ಫೇಸ್‌ಬುಕ್ ಸೊðàಲ್ ಮಾಡಿ ಕಳೆಯುತ್ತೇವೆ ಎಂದುಕೊಳ್ಳೋಣ. ದಿನಕ್ಕೆ 200 ಎಂಬಿ ಡೇಟಾವನ್ನಾದರೂ ಸೃಷ್ಟಿಸಿ ನಾವು ನಮ್ಮ ಡ್ರೈವ್‌ಗೆ ಇಳಿಸಿರುತ್ತೇವೆ. ಅದು ಗೂಗಲ್ ಡ್ರೈವ್ ಆಗಿರಬಹುದು, ಮೈಕ್ರೋಸಾಫ್ಟ್ನ ಒನ್‌ಡ್ರೈವ್ ಆಗಿರಬಹುದು. ಅದೂ ಇಲ್ಲವೆಂದರೆ ಸ್ವಲ್ಪ ಹಳೆಯ ಶೈಲಿಯಲ್ಲಾದರೆ ಒಂದು ಹಾರ್ಡ್ ಡಿಸ್ಕ್ನಲ್ಲಿ ತುಂಬಿಡಬಹುದು. ಅಂದರೆ ಒಬ್ಬ ವ್ಯಕ್ತಿ ಸರಾಸರಿ 30 ವರ್ಷ ಡೇಟಾ ಬಳಸಿದರೆ ಕನಿಷ್ಠ 2 ಟಿಬಿ ಡೇಟಾವನ್ನು ಸೃಷ್ಟಿಸಿರುತ್ತಾನೆ. ಮುಂದೊಂದಿಷ್ಟು ವರ್ಷಗಳಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ ಆ ವ್ಯಕ್ತಿ ಸೃಷ್ಟಿಸಿದ ಎಲ್ಲ ಡೇಟಾವನ್ನು ಹಾರ್ಡ್‌ಡಿಸ್ಕ್ ನಲ್ಲಿ ತುಂಬಿದರೆ, ವ್ಯಕ್ತಿಯ ಸಮಾಧಿಗೆ ಬೇಕಿರುವ ಜಾಗಕ್ಕಿಂತಲೂ ದೊಡ್ಡ ಜಾಗ ಆ ಹಾರ್ಡ್‌ಡಿಸ್ಕ್ಗಳಿಗೆ ಬೇಕಾಗಬಹುದು! ಇಷ್ಟೆಲ್ಲ ಡೇಟಾವನ್ನು ಏನು ಮಾಡುವುದು ಎಂಬುದೇ ದೊಡ್ಡ ಪ್ರಶ್ನೆ.
ಫೇಸ್‌ಬುಕ್‌ನಲ್ಲಿ ಮೆಮೊರಿಯಲೈಸ್ ಮಾಡುವುದಕ್ಕಾಗಿ ಒಬ್ಬ ವ್ಯಕ್ತಿಯನ್ನು ನಾಮಿನೇಟ್ ಮಾಡುವ ಅವಕಾಶ ಇರುತ್ತದೆ. ಅಂದರೆ ಇದೊಂಥರಾ ಪವರ್ ಆಫ್ ಅಟಾರ್ನಿ ಕೊಟ್ಟ ಹಾಗೆ ಅಥವಾ ವಿಲ್ ಬರೆದಿಟ್ಟ ಹಾಗೆ. ನಾನು ಮೃತನಾದ ಅನಂತರ ಈ ವ್ಯಕ್ತಿ ನನ್ನ ಖಾತೆಯನ್ನು ನಿರ್ವಹಿಸಬಹುದು ಎಂಬುದನ್ನು ಈ ಮೂಲಕ ನಾವು ಹೇಳಿರುತ್ತೇವೆ. ಟ್ಯಾಗ್ ಮಾಡುವುದು, ಫ್ರೆಂಡ್ ರಿಕ್ವೆಸ್ಟ್ ಗಳನ್ನು ಅಕ್ಸೆಪ್ಟ್ ಮಾಡುವುದು ಅಥವಾ ಡಿಲೀಟ್ ಮಾಡುವುದು ಅಥವಾ ಪ್ರೊಫೈಲ್ ಪಿಕ್ಚರ್ ಅಪ್‌ಡೇಟ್ ಮಾಡುವುದೆಲ್ಲ ಈ ಪವರ್ ಆಫ್ ಅಟಾರ್ನಿ ಪಡೆದ ವ್ಯಕ್ತಿಗೆ ಸಾಧ್ಯವಿರುತ್ತದೆ. ಹಾಗೆ ವ್ಯಕ್ತಿಯನ್ನು ನೇಮಿಸಿಲ್ಲ ಎಂದಾದರೂ ಫೇಸ್‌ಬುಕ್‌ಗೆ ವ್ಯಕ್ತಿ ನಿಧನರಾಗಿ¨ªಾರೆ ಎಂದು ದಾಖಲೆ ನೀಡಿದರೆ ಆ ವ್ಯಕ್ತಿಯ ಖಾತೆಯನ್ನು ಮೆಮೊರಿಯಲೈಸ್ ಮಾಡಲಾಗುತ್ತದೆ. ಒಂದು ವೇಳೆ ವ್ಯಕ್ತಿಯ ಫೇಸ್‌ಬುಕ್ ಖಾತೆಯನ್ನು ಮೆಮೊರಿಯಲೈಸ್ ಎಂದಾಗಿಸಿದರೆ ಆ ಖಾತೆಯಲ್ಲಿ ವ್ಯಕ್ತಿಯ ಹೆಸರಿನ ಹಿಂಬದಿ ರಿಮೆಂಬರಿಂಗ್ ಎಂದು ಕಾಣಿಸುತ್ತದೆ.
ಇದು ಫೇಸ್‌ಬುಕ್‌ನ ಕಥೆಯಾದರೆ ಬೇರೆ ಬೇರೆ ಸೋಷಿಯಲ್ ಮೀಡಿಯಾ ಸೈಟ್‌ಗಳು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತವೆ. ಫೇಸ್‌ಬುಕ್‌ನದ್ದೇ ಮಾಲೀಕತ್ವದ ಇನ್‌ಸ್ಟಾಗ್ರಾಮ್ ಕೂಡ ಮೆಮೊರಿಯಲೈಸ್ ಎಂಬ ವಿಧಾನಕ್ಕೆ ಅಂಟಿಕೊಂಡಿದೆ. ಆದರೆ ಟ್ವಿಟರ್‌ನಲ್ಲಿ ಈ ವ್ಯವಸ್ಥೆಯಿಲ್ಲ. ಅಲ್ಲಿ ಅಳಿಸುವುದೊಂದೇ ಇರುವ ವಿಧಾನ. ಅದಕ್ಕೊಂದು ಅರ್ಜಿ ಹಾಕಿದರೆ ಸಾಕು. ಅನಾಮತ್ತಾಗಿ ವ್ಯಕ್ತಿಯ ಖಾತೆಯನ್ನು ಕಸದಬುಟ್ಟಿಗೆ ಎಸೆಯುತ್ತದೆ.
ಗೂಗಲ್ ಕೂಡ ಅಷ್ಟೇ. ಅಲ್ಲಿ ಖಾತೆಯನ್ನು ಕ್ಲೋಸ್ ಮಾಡುವುದೊಂದೇ ಇರುವ ವಿಧಾನ. ಯಾಕೆಂದರೆ ಬೇರೆಲ್ಲ ಸೋಷಿಯಲ್ ಮೀಡಿಯಾಗಿಂತ ಗೂಗಲ್ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಡೇಟಾ ಸಂಗ್ರಹಿಸಿರುತ್ತದೆ. ಖಾತೆ ತೆರೆದ ದಿನದಿಂದ ವ್ಯಕ್ತಿ ಸಾವನ್ನಪ್ಪುವ ದಿನದವರೆಗಿನ ಡೇಟಾ ಅದರಲ್ಲಿರುತ್ತದೆ. ಒಂದು ಮೇಲ್‌ನÇÉೇ ಸುಮಾರು 15 ಜಿಬಿ ಡೇಟಾ ಬಳಸಿಕೊಳ್ಳುವ ಅವಕಾಶ ಇರುತ್ತದೆ. ಇನ್ನು ಗೂಗಲ್ ಮ್ಯಾಪ್, ಕ್ರೋಮ್ ಬ್ರೌಸರ್‌ನ ಡೇಟಾವನ್ನೆಲ್ಲ ಲೆಕ್ಕ ಹಾಕಿದರೆ ಒಂದು ಟಿಬಿಯೇ ಆದೀತು. ಇದನ್ನೆಲ್ಲ ಕ್ಲೋಸ್ ಮಾಡುವುದೊಂದೇ ಗೂಗಲ್ ಒದಗಿಸುವ ಅವಕಾಶ. ಕ್ಲೋಸ್ ಮಾಡುವ ಮುನ್ನ ಗೂಗಲ್ ಪೇಯಲ್ಲಿ ಕಾಸಿದ್ದರೆ ಹಿಂಪಡೆದುಕೊಳ್ಳಬಹುದು. ಡೇಟಾ ಇದ್ದರೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದಕ್ಕೊಂದು ಅರ್ಜಿಯನ್ನು ಕೊಟ್ಟರೆ ಸಾಕು. ಯಾಕೆಂದರೆ ನಾವು ಸತ್ತ ಮೇಲೆ ನಮ್ಮ ಡೇಟಾ ಇಟ್ಟುಕೊಂಡು ಗೂಗಲ್ ಏನೂ ಮಾಡಲು ಸಾಧ್ಯವಿಲ್ಲ. ಗೂಗಲ್‌ಗೆ ನಮ್ಮ ಡೇಟಾ ಎಂಬುದು ಮಾರಾಟದ ಸಾಮಗ್ರಿಯಾಗಿರುವುದರಿಂದ, ನಾವು ಸತ್ತಮೇಲೆ ಗೂಗಲ್‌ಗೆ ಅದು ನಿಷ್ಪ್ರಯೋಜಕ.
ಡಿಜಿಟಲ್‌ನಲ್ಲಿ ನಮಗೆ ಭೌತಿಕ ಅಸ್ತಿತ್ವವಿಲ್ಲ. ಹಾಗಂತ ಅದು ಆತ್ಮವೂ ಅಲ್ಲ! ಆದರೆ ಡಿಜಿಟಲ್ ರೂಪದಲ್ಲಿ ಆತ್ಮವನ್ನು ಕಾದಿಡುವ ಪ್ರಯತ್ನವೂ ನಡೆದಿದೆ ಎಂದರೆ ನೀವು ನಂಬಲೇ ಬೇಕು. ಕೆಲವು ವರ್ಷಗಳ ಹಿಂದೆ ನೆಟ್‌ಫ್ಲಿಕ್ಸ್ ಎಂಬ ಸ್ಟ್ರೀಮಿಂಗ್ ವೆಬ್‌ಸೈಟ್‌ನಲ್ಲಿ ಬ್ಲಾಕ್ ಮಿರರ್ ಎಂಬ ಸರಣಿ ಪ್ರಕಟವಾಗಿತ್ತು. ಇದರಲ್ಲೊಂದು ಬೀ ರೈಟ್ ಬ್ಯಾಕ್ ಎಂಬ ಎಪಿಸೋಡ್ ಇದೆ. ತನ್ನ ಸಂಗಾತಿ ಸಾವನ್ನಪ್ಪಿದ ನಂತರ ಆತನನ್ನು ಡಿಜಿಟಲ್ ರೂಪದಲ್ಲಿ ಕಾದಿರಿಸುವ ಕಲ್ಪನೆಯ ಕಥೆ ಅದರಲ್ಲಿತ್ತು. ಅಂದರೆ ಒಂದು ಮೊಬೈಲ್ ನಂಥ ಸಾಧನದಲ್ಲಿ ಆಕೆಯ ಸಂಗಾತಿಯ ಧ್ವನಿಯನ್ನು ಮರುಸೃಷ್ಟಿಸಲಾಗಿದೆ. ಆತ ಮಾತನಾಡುತ್ತಾನೆ. ಸಂಗಾತಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ದುಃಖಕ್ಕೆ ಸಾಂತ್ವನ ಹೇಳುತ್ತಾನೆ, ಖುಷಿಗೆ ಜೊತೆಯಾಗುತ್ತಾನೆ. ಸಂಗಾತಿಯೊಬ್ಬ ಜೊತೆಗಿದ್ದಂಥದ್ದೇ ಭಾವ! ಇದೇ ಕಲ್ಪನೆಯ ಬೀಟಾ ಆವೃತ್ತಿಯ ರೀತಿ ಎಟರ್ನಿ ಡಾಟ್ ಮಿ ಎಂಬ ವೆಬ್‌ಸೈಟ್ ಒಂದು 2014ರಲ್ಲಿ ಜನ್ಮ ತಾಳಿದೆ. ಇಲ್ಲಿ ವ್ಯಕ್ತಿಯ ಆತ್ಮ ಡಿಜಿಟಲ್ ರೂಪದಲ್ಲಿರುತ್ತದೆ! ಇದನ್ನು ಆತ್ಮ ಎನ್ನಬೇಕೋ ಅಥವಾ ಅಸ್ತಿತ್ವ ಎನ್ನಬೇಕೋ ಅದು ಆಮೇಲಿನ ಮಾತು. ಇಲ್ಲಿ ನಮ್ಮ ಸಂಬಂಧಿಕರ, ತಂದೆ, ತಾಯಿಗಳ ನೆನಪನ್ನು ಕಾದಿರಿಸಬಹುದು. ಆದರೆ ಬೀ ರೈಟ್ ಬ್ಯಾಕ್‌ನಲ್ಲಿರುವಂತೆ ವ್ಯಕ್ತಿಯ ಪ್ರತಿಕೃತಿಯನ್ನು ಎಟರ್ನಿ ಮಿ ಸೃಷ್ಟಿಸುವುದಿಲ್ಲ. ಬದಲಿಗೆ ಅದೊಂದು ನೆನಪಿನ ಪುಟದ ರೀತಿ ಅಸ್ತಿತ್ವದಲ್ಲಿರುತ್ತದೆ.
ಇದರಾಚೆಗೆ ಇನ್ನೂ ಒಂದು ವಿಧದ ಪ್ರಯತ್ನಗಳು ನಮ್ಮ ಡಿಜಿಟಲ್ ಅಸ್ತಿತ್ವವನ್ನು ಕಾದಿರಿಸಿಕೊಳ್ಳುವ ನಿಟ್ಟಿನಲ್ಲಿ ನಡೆದಿವೆ. ಅವು ನಮ್ಮ ಡಿಜಿಟಲ್ ಪಳೆಯುಳಿಕೆಗಳನ್ನೇ ಸಂಗ್ರಹಿಸಿ ನಮ್ಮ ಪ್ರತಿಕೃತಿಯನ್ನು ಸೃಷ್ಟಿಸುವುದು! ಅಂದರೆ ರೋಬೋಗಳು, ಚಾಟ್‌ಬೋಟ್‌ಗಳನ್ನು ಹಲವರು ಈಗಾಗಲೇ ತಯಾರಿಸಿದ್ದಾರೆ. 2007ರಲ್ಲಿ ಮಾಟಿನ್ ರೋಥ್‌ಬಾಲ್ಟ್ ಬಿನಾ 48 ಎಂಬ ರೋಬೋ ತಯಾರಿಸಿದ್ದು, ಇದು ಅವರ ಪತ್ನಿಯನ್ನೇ ಹೋಲುತ್ತದೆ. ಪತ್ನಿಯ ಧ್ವನಿ, ಬುದ್ಧಿಮತ್ತೆ ಹಾಗೂ ನೆನಪುಗಳನ್ನೆಲ್ಲ ರೋಬೋದಲ್ಲಿ ತುಂಬಿಸಿದ್ದಾರೆ. ಇದೊಂದು ವರ್ಚುವಲ್ ರಿಯಾಲಿಟಿಯನ್ನು ಅಳವಡಿಸಿಕೊಂಡ ರೋಬೋ! ಯುಜೀನಿಯಾ ಕುಯ್ಡಾ ಎಂಬ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಪರಿಣಿತೆ ಉದ್ಯಮಿ ಕೂಡ ತನ್ನ ಗೆಳೆಯ ರೋಮನ್ ಮಜುರೆಂಕೋ ನೆನಪಿಗೆ ಬೋಟ್ ಒಂದನ್ನು ನಿರ್ಮಿಸಿ¨ªಾಳೆ. ಇವೆಲ್ಲವೂ ತಂತ್ರಜ್ಞಾನವನ್ನು ಬಳಸಿ ವ್ಯಕ್ತಿಯ ಡಿಜಿಟಲ್ ತದ್ರೂಪಿಯನ್ನು ಸೃಷ್ಟಿಸುವ ಪ್ರಯತ್ನಗಳಷ್ಟೇ.
– ಕೃಷ್ಣ ಭಟ್