Advertisement
ಟ್ವಿಟರ್‌ನಲ್ಲೂ ವಿಶ್ವವ್ಯಾಪಿ ಟ್ರೆಂಡ್ ಆಗಿದ್ದು, ಚೀನ ಮೂಲದ ಮಾನವ ಹಕ್ಕುಗಳ ಹೋರಾಟರಾರ್ತಿಯೊಬ್ಬರು ಬೀಜಿಂಗ್‌ಗೆ ಸೇನಾ ವಾಹನಗಳು ತೆರಳುತ್ತಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಾಕಿ ಇದೇ ಸಂಶಯ ವ್ಯಕ್ತಪಡಿಸಿದ್ದಾರೆ.
Related Articles
Advertisement
ವಿಮಾನಗಳ ಸಂಚಾರ ರದ್ದುಕ್ಸಿ ವಿರುದ್ಧದ ದಂಗೆಗೆ ಪೂರಕವೆಂಬಂತೆ, ಬೀಜಿಂಗ್‌ನಿಂದ ದೇಶದೊಳಗೆ ಮತ್ತು ವಿದೇಶಿ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಈ ವಿಚಾರ ವಿಮಾನಯಾನ ಟ್ರಾಫಿಕ್‌ಗೆ ಸಂಬಂಧಿಸಿದ ವೆಬ್‌ಸೈಟ್‌ಗಳಲ್ಲಿ ದೃಢಪಟ್ಟಿದೆ. ಆದರೆ ಯಾವ ಕಾರಣಕ್ಕಾಗಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂಬುದನ್ನು ಯಾರೂ ಹೇಳಿಲ್ಲ. ದಂಗೆಯ ಕಾರಣದಿಂದಲೇ ಬೀಜಿಂಗ್ ನಗರವನ್ನು ಸ್ತಬ್ಧಗೊಳಿಸಿ, ವಿಮಾನ ಸಂಚಾರ ಸ್ಥಗಿತ ಮಾಡಲಾಗಿದೆ ಎಂಬ ಕುರಿತಂತೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. ಬೀಜಿಂಗ್ ಅನ್ನು ಸೇನೆ ತನ್ನ ವಶಕ್ಕೆ ತೆಗೆದುಕೊಂಡಿದೆ ಎನ್ನಲಾಗಿದೆ. ಸುಬ್ರಮಣಿಯನ್ ಸ್ವಾಮಿ ಟ್ವೀಟ್
ಅತ್ತ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ಚೀನ ಬೆಳವಣಿಗೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ವದಂತಿಗಳ ಪ್ರಕಾರ, ಕ್ಸಿ ಜಿನ್‌ಪಿಂಗ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಚೀನಾದ ಕಮ್ಯೂನಿಸ್ಟ್ ನಾಯಕರು, ಕ್ಸಿ ಜಿನ್‌ಪಿಂಗ್ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದಾರೆ ಎಂದು ಟ್ವೀಟಿಸಿದ್ದಾರೆ. ಏನಿರಬಹುದು ಕಾರಣ?
ಇತ್ತೀಚೆಗಷ್ಟೇ ಚೀನದ ಕಮ್ಯೂನಿಸ್ಟ್ ಪಕ್ಷವು ಭ್ರಷ್ಟಾಚಾರ ವಿರುದ್ಧ ದೊಡ್ಡ ಆಂದೋಲನವನ್ನೇ ಶುರು ಮಾಡಿದೆ. ಇದರಲ್ಲಿ ಕ್ಸಿ ಜಿನ್‌ಪಿಂಗ್ ವಿರುದ್ಧವಿದ್ದ ಪಕ್ಷದ ಕೆಲವು ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ಅವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಲಾಗಿದೆ. ಇದರಿಂದ ಕೆರಳಿರುವ ಮಾಜಿ ಅಧ್ಯಕ್ಷರೊಬ್ಬರು ಇಡೀ ದಂಗೆಯ ಹಿಂದೆ ಇದ್ದಾರೆ ಎಂದು ಹೇಳಲಾಗಿದೆ.