ನವದೆಹಲಿ: ಪಿಎಸ್ ಎಲ್ ವಿ-ಸಿ37 ಉಪಗ್ರಹ ವಾಹಕದ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬುಧವಾರ ಬೆಳಗ್ಗೆ ಏಕಕಾಲಕ್ಕೆ 104 ಉಪಗ್ರಹಗಳನ್ನು ನಭೋ ಮಂಡಲಕ್ಕೆ ಯಶಸ್ವಿಯಾಗಿ ಉಡಾಯಿಸಿದ್ದಕ್ಕೆ ಜಾಗತಿಕ ಮಟ್ಟದಲ್ಲಿ ಭಾರತೀಯ ವಿಜ್ಞಾನಿಗಳ ಸಾಧನೆಗೆ ಅಭಿನಂದನೆಗಳ ಮಹಾಪೂರ ಹರಿದಿದೆ. ಮತ್ತೊಂದೆಡೆ ಭಾರತದ ಸಾಧನೆ ಬಣ್ಣಿಸಿ, ನೆರೆಯ ಪಾಕಿಸ್ತಾನಕ್ಕೆ ಹಾಗೂ ಅಮೀರ್ ಖಾನ್, ಶಾರುಖ್ ಖಾನ್, ಕೇಜ್ರಿವಾಲ್, ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿರುವ ವ್ಯಂಗ್ಯದ ಟ್ವೀಟ್ ಗಳು ಟ್ರೋಲ್ ಆಗುತ್ತಿದ್ದು, ಕೆಲವು ತುಣುಕು ಇಲ್ಲಿದೆ…
ಕಂಗ್ರಾಟ್ಸ್ ಇಸ್ರೋ…104 ಉಪಗ್ರಹ ಏಕಕಾಲಕ್ಕೆ ಉಡಾಯಿಸಿ ಇತಿಹಾಸ ನಿರ್ಮಿಸಿದ್ದೀರಿ..ನೇರ ಪ್ರಸಾರ ನೋಡಿ ಖುಷಿ ಪಡಿ…ಯಾಕೆಂದರೆ ಇಲ್ಲಿ ರವಿಶಾಸ್ತ್ರಿಯ ಕಮೆಂಟರಿ ಇಲ್ಲ!
ಪಾಪ…ಪಾಕಿಸ್ತಾನದ ಜನರು ಬಾಹ್ಯಾಕಾಶದಲ್ಲೇ ಇಸ್ರೋ ಉಡಾಯಿಸಿದ 104 ಉಪಗ್ರಹಗಳನ್ನು ವೀಕ್ಷಿಸಲಿ!
ಇಸ್ರೋ ಏಕಕಾಲಕ್ಕೆ 104 ಉಪಗ್ರಹ ಉಡಾಯಿಸಿ ಇತಿಹಾಸ ನಿರ್ಮಿಸಿದ ನಂತರ, ಪಾಕಿಸ್ತಾನ ಏಕಕಾಲಕ್ಕೆ ಕಾಶ್ಮೀರದೊಳಕ್ಕೆ 105 ಉಗ್ರರನ್ನು ಕಳುಹಿಸಿ ದಾಖಲೆ ಮಾಡುತ್ತೆ!
ಇಸ್ರೋದ ವಿಶ್ವ ದಾಖಲೆ ಬಗ್ಗೆ ಸಾಕ್ಷ್ಯ ನೀಡುವಂತೆ ಕೇಳಲು ಕೇಜ್ರಿವಾಲ್ ಅವರು ಕಾಯುತ್ತಿದ್ದಾರೆ!
ತಮ್ಮ ದೇಶಗಳ ಉಪಗ್ರಹಗಳನ್ನು ಉಡಾಯಿಸುವಂತೆ ವಿವಿಧ ದೇಶಗಳು ಇಸ್ರೋದ ಹೊರಭಾಗದಲ್ಲಿ ಸಾಲುಗಟ್ಟಿ ನಿಂತಿದ್ದಾರಂತೆ!