Advertisement

ಸಂಘಟನೆಯಿಂದ ಸಮಾಜ ಅಭಿವೃದ್ಧಿ 

12:45 PM Dec 02, 2017 | Team Udayavani |

ಉಳ್ಳಾಲ: ಮಹಿಳಾ ಸಂಘಟನೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಗುರಿಕಾರ ವಿಠ್ಠಲ ಸುವರ್ಣ ಅಭಿಪ್ರಾಯಪಟ್ಟರು. ಉಳ್ಳಾಲ ಮಹಿಳಾ ಸೇವಾ ಸಂಘದ ‘ಸ್ನೇಹ ಸಂಭ್ರಮ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Advertisement

ಸೀತಮ್ಮ ಗೋಪಾಲಕೃಷ್ಣ ಸುವರ್ಣ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಮೊಗವೀರ ಹಿ.ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಗಂಧಿ ಪುತ್ರನ್‌ ಮತ್ತು ದ.ಕ. ಜಿಲ್ಲಾ ಮಟ್ಟದ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ ಪಡೆದ ಭಾರತ್‌ ಪ್ರೌಢಶಾಲೆಯ ಸಹಶಿಕ್ಷಕಿ ವಿನಯಾ ಇವರನ್ನು ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್‌ ಕುಮಾರ್‌, ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಮಧ್ಯಸ್ಥರಾದ ಗಂಗಾಧರ ಸುವರ್ಣ, ಅರ್ಚಕರಾದ ಸುಭಾಸ್‌ ಅಮೀನ್‌, ಉಳ್ಳಾಲ ಮೊಗವೀರ ಪಟ್ಣದ ಜೀವ ರಕ್ಷಕ ಈಜುಗಾರರ ಸಂಘದ ಅಧ್ಯಕ್ಷ ಮೋಹನ್‌ ಪುತ್ರನ್‌, ಮಾರುತಿ ಯುವಕ ಮಂಡಲದ ಅಧ್ಯಕ್ಷ ಕಿರಣ್‌ ಕುಮಾರ್‌, ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ಯಶವಂತ ಅಮೀನ್‌, ಮೊಗವೀರ ಧರ್ಮರಕ್ಷಣ ವೇದಿಕೆ ಅಧ್ಯಕ್ಷ ಮನೋಜ್‌ ಸಾಲ್ಯಾನ್‌, ಉಳ್ಳಾಲ ಪುರಸಭೆಯ ಕೌನ್ಸಿಲರ್‌ ಮೀನಾಕ್ಷಿ ಬಂಗೇರ ಮತ್ತು ನಿವೃತ್ತ ಶಿಕ್ಷಕ ಎಂ.ವಾಸುದೇವ ರಾವ್‌ ಉಪಸ್ಥಿತರಿದ್ದರು.

ಉಳ್ಳಾಲ ಮಹಿಳಾ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಮಯಂತಿ ಸ್ವಾಗತಿಸಿದರು. ಮಾಜಿ ಗೌರವಾಧ್ಯಕ್ಷೆ ಜಾನಕಿ ಪುತ್ರನ್‌ ಪ್ರಸ್ತಾವನೆಗೈದರು. ಸದಸ್ಯೆ ಪುಷ್ಪಾ ಮೋಹನ್‌ ವಂದಿಸಿದರು. ಪ್ರಮೀಳಾ ಟೀಚರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next