Advertisement

ನಿಸಾರ್‌ ಕಾವ್ಯದಲ್ಲಿ ಸಾಮಾಜಿಕ ಸಮನ್ವಯದ ಸೂತ್ರ

07:30 AM Jul 27, 2017 | |

ಕುಂದಾಪುರ: ಸಾಮಾಜಿಕ ಬದುಕಿನ ಸಮನ್ವಯತೆಯ ಸೂತ್ರವನ್ನು ತಮ್ಮ ಕಾವ್ಯದ ಮೂಲಕ ಸಾಧಿಸಿ ತೋರಿಸಿದವರು ಕವಿ ನಿಸಾರ್‌ ಅಹಮ್ಮದ್‌ ಅವರು. ಜೀವನದಲ್ಲಿ ಕಾಣುವ ಒಳಿತು-ಕೆಡುಕುಗಳನ್ನು ತಮ್ಮದೇ ಆದ ಕಾವ್ಯಭಾಷೆಯ ಮೂಲಕ  ಮಾಂತ್ರಿಕ ಶಕ್ತಿಯುಳ್ಳ ಸುಂದರ ಪದಪುಂಜಗಳ ಮೂಲಕ, ಪ್ರಾಸಯುಕ್ತ¤ ಪದವಿನ್ಯಾಸದ ಮೂಲಕ, ಹೊಸ ಹೊಸ ಪದಗಳನ್ನು ಜೋಡಿಸಿ ಕನ್ನಡ ಸಾಹಿತ್ಯಕ್ಕೆ ಕೊಡುವ ಮೂಲಕ ಒದಗಿಸಿ ಕೊಟ್ಟವರು ಎಂದು ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಉಪನ್ಯಾಸಕಿ ಹಾಗೂ ಲೇಖಕಿ ಡಾ| ಪಾರ್ವತಿ ಜಿ. ಐತಾಳ ಹೇಳಿದರು.

Advertisement

ಅವರು ಹೆ„ದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದಲಿ ನಡೆದ ನಿಸಾರ್‌ ಅಹಮದ್‌-ಬದುಕು ಬರಹದ ಕುರಿತು ನಡೆದ ಒಂದು ದಿನದ ವಿಚಾರ ಸಂಕಿರಣದಲ್ಲಿ  ನಿಸಾರ್‌ ಕಾವ್ಯದಲಿ ವ್ಯಕ್ತವಾಗುವ ಜೀವನ ದರ್ಶನ ಎಂಬ ವಿಷಯದ ಕುರಿತು ಮಾತನಾಡಿದರು.

ಸಾಹಿತಿ ಡಾ| ಸಂಧ್ಯಾ ರೆಡ್ಡಿ ಮತ್ತು ಭೈರಮಂಗಲ ರಾಮೇಗೌಡರು ಉಪಸ್ಥಿತ ರಿದ್ದು, ನಿಸಾರ್‌ ಕಾವ್ಯದ  ವಿಭಿನ್ನ ಮುಖಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಕನ್ನಡದ ಹಿರಿಯ ಕವಿ ಪ್ರೊ| ಕೆ.ವಿ.ತಿರುಮಲೇಶ್‌ ಗೋಷ್ಠಿಯ ಅಧ್ಯಕ್ಷ ಸ್ಥಾನದಿಂದ ನಿಸಾರ್‌ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಉಪನ್ಯಾಸ ನೀಡಿದವರಿಗೆ ಸಂಘಟನೆಯ ಪದಾಧಿಕಾರಿಗಳು ಒಟ್ಟುಸೇರಿ ಶಾಲು ಫಲಕಗಳನ್ನು ನೀಡಿ ಸಮ್ಮಾನಿಸಿದರು.ಕರ್ನಾಟಕ ಸಾಹಿತ್ಯ ಮಂದಿರದ ಅಧ್ಯಕ್ಷ ವಿಟuಲ್‌ ಜೋಯ ಅವರು ವಂದಿಸಿದರು.

ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಅವನ ಬದುಕು ಒಳಗೊಳ್ಳುವ  ನೂರಾರು ಸನ್ನಿವೇಶಗಳನ್ನು ನೆಪವಾಗಿಸಿಕೊಂಡು ಅಲ್ಲಿ ಕಾಣುವ ಸೌಖ್ಯ ಸೌಂದರ್ಯಗಳಿಗೆ, ಲೋಪದೋಷಗಳಿಗೆ ಪ್ರತಿಮೆ ರೂಪಕಗಳ ಮೂಲಕ ಸಮಾಂತರಗಳನ್ನು ಸೃಷ್ಠಿಸಿ ಜೀವನದ ಸಮಗ್ರ ದರ್ಶನವನ್ನು ನಿಸಾರರು ತಮ್ಮ ಕವಿತೆಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ  ನೇಯ್ದು ಕೊಟ್ಟಿದ್ದಾರೆ. ಪ್ರೀತಿ-ವಂಚನೆ, ಸ್ನೇಹ-ಅಸೂಯೆ, ಪ್ರಾಮಾಣಿಕತೆ-ಬೂಟಾಟಿಕೆ, ಶೋಷಣೆ-ಪ್ರೊÅàತ್ಸಾಹ, ನ್ಯಾಯ- ಅನ್ಯಾಯಗಳ ದ್ವಂದ್ವಗಳು ಅವರ ಕವಿತೆಗಳಲ್ಲಿ ಸದಾ ಅನುರಣಿಸುತ್ತದೆ.ನವೋದಯ ಮತ್ತು ನವ್ಯ ಶೈಲಿಗಳಲ್ಲಿ ಕಾವ್ಯ ನಿರ್ಮಿತಿ ನಡೆಸಿದ ನಿಸಾರರು ತಮ್ಮ ಸುತ್ತಲ ಜಗತ್ತನ್ನು ಬಗೆದು ಶೋಧಿಸಿ, ಒಂದು ಬೃಹತ್‌ ಕಾವ್ಯ ಲೋಕವನ್ನು ಸೃಷ್ಟಿಸಿದ್ದಾರೆ. ಅವರ ಕಾವ್ಯದಲ್ಲಿ ವ್ಯಕ್ತವಾಗುವ ಜೀವನ ದರ್ಶನದ ಹರಹು ಬಹಳ ದೊಡ್ಡದು. 

– ಡಾ| ಪಾರ್ವತಿ ಜಿ. ಐತಾಳ
 

Advertisement
Advertisement

Udayavani is now on Telegram. Click here to join our channel and stay updated with the latest news.

Next