ನರಗುಂದ: ಧರ್ಮದ ಒಳಿತಿಗಾಗಿ ಮತ್ತು ಭಕ್ತರ ಶ್ರೇಯೋಭಿವೃದ್ಧಿಗಾಗಿ ಮಠ ಮಂದಿರಗಳು ನಿರ್ಮಾಣಗೊಂಡಿವೆ. ಅಂತಹ ಧಾರ್ಮಿಕ ಕೇಂದ್ರಗಳನ್ನು ಶ್ರದ್ಧಾ ಭಕ್ತಿಯಿಂದ ಕಾಣುವ ಜೊತೆಗೆ ಧಾರ್ಮಿಕ ಹಾಗೂ ಒಳ್ಳೆಯ ಕೆಲಸ ಕಾರ್ಯಗಳಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿದೆ ಎಂದು ನಂಜನಗೂಡು ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧ್ರೇಂಧ್ರತೀರ್ಥ ಶ್ರೀಪಾದಂಗಳವರು ಅಭಿಪ್ರಾಯಪಟ್ಟರು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಧರ್ಮ ದಿಕ್ಸೂಚಿ ಇದ್ದ ಹಾಗೆ. ಇದರಿಂದ ಧಾರ್ಮಿಕ-ಸಾಂಸ್ಕೃತಿಕವಾಗಿ ಕಾಯಾ ವಾಚಾ ಮನಸಾ ವಿಚಾರಗಳಿಂದ ಧರ್ಮವನ್ನು ಧರ್ಮದಂತೆ ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು. ಕೊಣ್ಣೂರ ವಿರಕ್ತಮಠದ ಡಾ| ಶಿವಕುಮಾರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಧರ್ಮ ಉಳಿವಿಗಾಗಿ ಎಲ್ಲ ವರ್ಗದ ಜನರು ಹಗಲಿರುಳು ಕೆಲಸ ಮಾಡಬೇಕು ಎಂದರು.
ಕೊಣ್ಣೂರ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ನರಸಾಪುರ ಹಿರೇಮಠದ ಮರಳಸಿದ್ಧಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಬೆಳ್ಳೇರಿಯ ಸಚ್ಚಿದಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಜಿಪಂ ಸದಸ್ಯ ರಾಜುಗೌಡ ಕೆಂಚನಗೌಡ್ರ, ಉಮೇಶಗೌಡ ಪಾಟೀಲ, ಬಾಬು ಹಿರೇಹೊಳಿ ಇದ್ದರು.
Advertisement
ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಮುಖ್ಯ ಪ್ರಾಣದೇವರ ಮತ್ತು ರಾಘವೇಂದ್ರ ಸ್ವಾಮಿಗಳವರ ಮೂಲ ಮೃತಿಕಾ ಬಂದಾವನ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಧರ್ಮಸಬೆ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.