Advertisement
ನಗರದ ಕರ್ನಾಟಕ ಕಾಲೇಜು ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾತೃಭೂಮಿ ಸೇವಾ ಪ್ರತಿಷ್ಠಾನದಿಂದ ನಡೆದ “ಹದಿಹರೆಯಕ್ಕೆ ಸಾಹಿತ್ಯ ಸುಧೆ’ ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆ ಜೀವಿ ಕಲ್ಯಾಣ ಸಾ ಧಿಸುವಂತೆ ಪ್ರೇರೇಪಿಸುವ ಸಾಹಿತ್ಯ ಹೊರಬರಬೇಕು ಎಂದು ಸಲಹೆ ನೀಡಿದರು.
Related Articles
Advertisement
ಕವನ ವಾಚನ: ಕಣ್ಣಿನ ಮಹತ್ವ, ತಂದೆ-ತಾಯಿಗಳ ಕಾಳಜಿ, ನಿಸರ್ಗ, ಅಧ್ಯಯನ ವಿಷಯಗಳನ್ನೊಳಗೊಂಡ ಕವಿತೆಗಳನ್ನು ವಿದ್ಯಾರ್ಥಿಗಳಾದ ಪ್ರಾರ್ಥನಾ, ರೀಟಾ, ಭವಾನಿ, ನಿಖೀತಾ ಮತ್ತು ಶಿಭಾ ಇತರರು ವಾಚನ ಮಾಡಿದರು. ಈ ವೇಳೆ ಡಾ| ಡಿ.ಬಿ ಕಂಬಾರ, ಡಾ| ಸುನಿತಾ ಕೂಡ್ಲಿಕರ್, ಡಾ| ಎಂ.ಡಿ ಯೋಗೀಶ, ಡಾ| ಮಾದಯ್ಯ ಸ್ವಾಮಿ, ಪ್ರೊ| ಲಕೀÒ$¾ ಕುಂಬಾರ ಇತರರಿದ್ದರು. ಕಾಲೇಜು ಪ್ರಾಚಾರ್ಯ ಡಾ| ಜಗನ್ನಾಥ ಹೆಬ್ಟಾಳೆ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಗುರುನಾಥ ರಾಜಗೀರಾ ಪ್ರಾಸ್ತಾವಿಕ ಮಾತನಾಡಿದರು. ಸಚಿನ್ ವಿಶ್ವಕರ್ಮ ನಿರೂಪಿಸಿದರು. ಡಾ| ವಿವೇಕಾನಂದ ಸಜ್ಜನ್ ವಂದಿಸಿದರು.
ಶರಣರ ತತ್ವದಿಂದ ಅನ್ಯಾಯ ತಡೆ: ಡಾ|ಅವಧೂತರು ಬೀದರ: ಆಧುನಿಕ ಬದುಕಿನಲ್ಲಿ ಮನುಷ್ಯ ಅಕ್ಕ ಮಹಾದೇವಿ ಹಾಗೂ ಇತರ ಶಿವಶರಣರ ತತ್ವ ಅಳವಡಿಸಿಕೊಂಡು ಅವರ ಸಾಹಿತ್ಯ ಅಧ್ಯಯನ ಮಾಡಬೇಕಿದೆ. ಶಿವಶರಣೆಯರನ್ನು ಅಧ್ಯಯನ ಮಾಡುವ ಮೂಲಕ ಆಧುನಿಕ ವ್ಯವಸ್ಥೆಯಲ್ಲಿನ ಅನ್ಯಾಯ, ಅತ್ಯಾಚಾರ, ಅನಾಚಾರ ತಡೆಯಬಹುದು ಎಂದು ನೆರೆಯ ತೆಲಂಗಾಣದ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿ ಪತಿ ಡಾ| ಬಸವಲಿಂಗ ಅವಧೂತರು ಹೇಳಿದರು.
ಭಾಲ್ಕಿ ತಾಲೂಕಿನ ಮರೂರ ಗ್ರಾಮದಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ತಂದೆ-ತಾಯಿ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹೀಗಾಗಿ ವೃದ್ಧಾಪ್ಯದಲ್ಲಿ ಮಕ್ಕಳು ಅವರಿಗೆ ಆಸರೆಯಾಗಬೇಕು. ತಂದೆ-ತಾಯಿಗಳನ್ನೂ ಅನಾಥರನ್ನಾಗಿ ಮಾಡಬೇಡಿ ಎಂದ ಅವರು, ಮಕ್ಕಳಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಸಂಸ್ಕಾರ ಕೊಡಿ ಎಂದು ಸಲಹೆ ನೀಡಿದರು. ಓಂ ನಮಃ ಶಿವಾಯ ಎಂಬ ನಾಮದ ಬೀಜವ ನಾಲಿಗೆ ತುದಿಯಲ್ಲಿ ಬಿತ್ತಿರಯ್ಯ ಹಾಡು ಹಾಡಿದರು. ಕಾರ್ಯಕ್ರಮ ಮೊದಲಿಗೆ ಅಕ್ಕಮಹಾದೇವಿ ತೊಟ್ಟಿಲು ಮತ್ತು ಶ್ರೀ ಮಲ್ಲಿಕಾರ್ಜುನ ಲಿಂಗಕ್ಕೆ ಪೂಜ್ಯರು ಪೂಜೆ ಮಾಡಿದರು. ಮೆರವಣಿಗೆ: ಸಮಾರಂಭಕ್ಕೂ ಮೊದಲು ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು. ಕುಂಭ-ಕಳಶ ಹೊತ್ತ ಮಹಿಳೆಯರು, ಅವಧೂತರ ಹಾಡುಗಳ ಮೇಲೆ ಯುವಕರ ಕುಣಿತ ಆಕರ್ಷಣೆಯಾಗಿದ್ದವು.
ಈ ವೇಳೆ ಗ್ರಾಮದ ಮುಖಂಡರಾದ ಆನಂದ ಗಂಗೂ, ವಿಜಯಕುಮಾರ, ಸಂಗಶೆಟ್ಟಿ ಮಜಿಗೆ, ಅನಂತರಾಯ ಚಿಮಕೊಡೆ, ಶಿವಕಾಂತ ಮಜಿಗೆ ಇತರರಿದ್ದರು. ಬೀದರ: ಗಡಿ ಭಾಗದಲ್ಲಿ ಅನುದಾನ ಕೇಂದ್ರಿತ ಕಾರ್ಯಕ್ರಮಗಳಿಗಿಂತ ರಚನಾತ್ಮಕ ಕಾರ್ಯಕ್ರಮ ಮಾಡುವ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ ಹೇಳಿದರು. ನಗರದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗಡಿ ಭಾಗದಲ್ಲಿ ಕನ್ನಡ ಶಾಲೆಗಳ ಸುಧಾರಣೆ, ಕನ್ನಡ ಶಿಕ್ಷಕರ ನೇಮಕಾತಿ, ಕನ್ನಡ ರಂಗ ಪ್ರಯೋಗ ಸೇರಿದಂತೆ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಭಾಷಾ ಬಾಂಧವ್ಯ ಬೆಳೆಸಬೇಕು. ಸೌಹಾರ್ದಯುತವಾದ ಸಾಂಸ್ಕೃತಿಕ ವಾತಾವರಣ ನಿರ್ಮಿಸಬೇಕಾದ ಅಗತ್ಯವಿದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಬೀದರನಲ್ಲಿ ಉದಯೋನ್ಮುಖ ಬರಹಗಾರರ ಸಂಖ್ಯೆ ಹೆಚ್ಚಾಗಿದ್ದು, ಕಾವ್ಯ, ಕಥಾ ಕಮ್ಮಟ ಆಯೋಜಿಸುವ ಅಗತ್ಯವಿದೆ. ಇದಕ್ಕೆ ಕಸಾಪ ಎಲ್ಲ ರೀತಿಯ ನೆರವು ನೀಡಲಿದೆ ಎಂದರು.
ಈ ವೇಳೆ ಗೌರವ ಕಾರ್ಯದರ್ಶಿ ಡಾ| ಬಸವರಾಜ ಬಲ್ಲೂರ, ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಬಾಬು ದಾನಿ, ಮಹಾರುದ್ರಪ್ಪ ಆಣದುರೆ, ಪ್ರಕಾಶ ಲಗಶೆಟ್ಟಿ, ಪ್ರೊ| ಎಸ್.ಬಿ. ಸಜ್ಜನಶೆಟ್ಟಿ, ಗುರುನಾಥ ರಾಜಗೀರಾ, ಗುಂಡಪ್ಪ ಹುಡಗೆ, ಸಿದ್ದಾರೆಡ್ಡಿ ನಾಗೋರಾ, ಕಲ್ಯಾಣರಾವ್ ಚಳಕಾಪುರೆ, ವಿದ್ಯಾವತಿ ಬಲ್ಲೂರ, ಶಿವಪುತ್ರ ಪಟಪಳ್ಳಿ, ಜಗನ್ನಾಥ ಕಮಲಾಪುರೆ, ಭೀಮಣ್ಣ ಸೋರಳ್ಳಿ ಇತರರಿದ್ದರು.