Advertisement

ಉತ್ತಮ ಆಡಳಿತ ನೀಡಲು ಕಾಂಗ್ರೆಸ್‌ ವಿಫ‌ಲ

07:10 AM Apr 30, 2018 | Team Udayavani |

ಬೆಂಗಳೂರು: ಐದು ವರ್ಷಗಳಲ್ಲಿ ಜನಸ್ನೇಹಿ ಆಡಳಿತ ನೀಡದ ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ವೈಫ‌ಲ್ಯ ಮುಚ್ಚಿಕೊಳ್ಳಲು ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿತು. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರಿ ಯಂತ್ರ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಹಳಿ ತಪ್ಪಿತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಎಚ್‌ಎಸ್‌ಆರ್‌ ಲೇಔಟ್‌ನ ಸಿಟಿಜನ್ಸ್‌ ಕೌನ್ಸಿಲ್‌ ಸಂಘಟನೆ ಭಾನುವಾರ ಹಮ್ಮಿಕೊಂಡಿದ್ದ ಸಂವಾದಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಆಶಯಕ್ಕೆ ತಕ್ಕಂತೆ ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್‌ ವಿಫ‌ಲವಾಗಿದೆ. ಹಾಗಾಗಿ ದಿನದ 24 ಗಂಟೆ ಮಾದರಿ ಆಡಳಿತಕ್ಕಾಗಿ ಬಿಜೆಪಿ ಸರ್ಕಾರವನ್ನು ಮರಳಿ ತರಬೇಕಿದೆ ಎಂದು ತಿಳಿಸಿದರು.

ಸರ್ಕಾರವು ಜನರ ಸಲಹೆಗಳನ್ನು ಪಡೆಯಬೇಕು. ಒಳ್ಳೆಯ ಸಲಹೆಗಳನ್ನು ಪರಿಗಣಿಸಬೇಕು. ಜನರು ಸಹ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರವನ್ನು ಎಚ್ಚರಿಸುತ್ತಿರಬೇಕು. ಇಲ್ಲದಿದ್ದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನದನಿ ಕ್ರಮೇಣ ಕ್ಷೀಣಿಸಲಾರಂಭಿಸುತ್ತದೆ ಎಂದು ಹೇಳಿದರು.

ರಕ್ಷಣಾ ಇಲಾಖೆಯಲ್ಲಿ ಯುಧ್ದೋಪಕರಣ, ಇತರೆ ಸಾಮಗ್ರಿ ಖರೀದಿ ಪ್ರಕ್ರಿಯೆ ನಿರಂತರವಾಗಿ ನಡೆದಿರುತ್ತದೆ. ಪಂಚ ವಾರ್ಷಿಕ ಯೋಜನೆ ಮಾದರಿಯಲ್ಲಿ ಅಗತ್ಯ ಸಾಮಗ್ರಿಗಳನ್ನು ಆಗಾಗೆÂ ಖರೀದಿಸಲಾಗುತ್ತದೆ. ಚೀನಾ ಗಡಿಯಲ್ಲಿ ಭಾರತೀಯ ಯೋಧರಿಗೆ ಉಪಕರಣಗಳ ಕೊರತೆ ಇದೆ ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದರು.

ಯುದ್ದ ವಿಮಾನಗಳಲ್ಲಿ ಮಹಿಳಾ ಪೈಪಟ್‌ ನಿಯೋಜನೆ ಪ್ರಕ್ರಿಯೆ ನಡೆದಿದೆ. ಸೇನೆಗೆ ಅಗತ್ಯವಿರುವ ಉಪಕರಣಗಳ ಪೂರೈಕೆಗೆ ನವೋದ್ಯೋಗ ಸಂಸ್ಥೆಗಳು ಪ್ರಸ್ತಾವ ಸಲ್ಲಿಸಬಹುದು. ಸೈನಿಕರ ಪಿಂಚಣಿ ವಿಚಾರದಲ್ಲಿ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದರು.ಇದೇ ಸಂದರ್ಭದಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರನ್ನು ಸಚಿವರು ಗೌರವಿಸಿದರು. ಶಾಸಕ ಎಂ.ಸತೀಶ್‌ರೆಡ್ಡಿ ಉಪಸ್ಥಿತರಿದ್ದರು.

Advertisement

ವಾಯುಪಡೆಗೆ ಅಗತ್ಯವಿರುವ ರಾಫೆಲ್‌ ಯುದ್ದ ವಿಮಾನಗಳ ಖರೀದಿ ನಿಯಮಾನುಸಾರ ನಡೆದಿದ್ದು, ಯಾವುದೇ ಲೋಪವಾಗಿಲ್ಲ. ಕೆಲವರಿಗೆ ಯುದ್ದ ವಿಮಾನ ಖರೀದಿ ವೆಚ್ಚದ ಬಗ್ಗೆ ಕುತೂಹಲವಿರುವುದರಿಂದ ಅಕ್ರಮ ನಡೆದಿದೆ ಎಂಬುದಾಗಿ ಆರೋಪ ಹೊರಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next