Advertisement
ಶನಿವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕುಟುಂಬದ ರೀತಿಯಲ್ಲಿ ಕೆಲಸ ನಿರ್ವಹಿಸಿ ಈ ಚುನಾವಣೆಯನ್ನು ಎದುರಿಸಿದ್ದೆವು. ಚುನಾವಣೆಯ ದಿನ ನಾನು ಪ್ರತೀ ವಿಧಾನಸಭಾ ಕ್ಷೇತ್ರಗಳ ಕೆಲವು ಬೂತ್‌ಗಳಿಗೆ ಭೇಟಿ ನೀಡಿದ್ದೆ. ಇಡೀ ಚುನಾವಣ ಪ್ರಕ್ರಿಯೆಯಲ್ಲಿ ತುಳುನಾಡು ಗೆದ್ದಿದೆ. ಚುನಾವಣೆ ಸಮಯದಲ್ಲಿ ಅಭಿವೃದ್ಧಿ, ಕ್ಷೇತ್ರದ ಸಮಸ್ಯೆಗಳು ಮುನ್ನೆಲೆಗೆ ಬರಬೇಕು, ಆದರೆ ವಿರೋಧ ಪಕ್ಷವು ಕೇವಲ ಅಪಪ್ರಚಾರದಲ್ಲಿ ತೊಡಗಿತ್ತು. ಇದು ಅವರ ಹತಾಶೆ ಮನೋಭಾವ ವ್ಯಕ್ತಪಡಿಸುತ್ತದೆ ಎಂದರು.
ಇದು ಕೇವಲ ಆರಂಭವಷ್ಟೆ. ವಾರದ ವಿಶ್ರಾಂತಿಯ ಬಳಿಕ ಪ್ರತೀ ಬ್ಲಾಕ್ ಮಟ್ಟದಲ್ಲಿ ಸಭೆ ನಡೆಸುವ ಮೂಲಕ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇವೆ. ಬಿಜೆಪಿಯ ಕೆಲವೊಂದು ಕಾರ್ಯಕರ್ತರು ಕಾಂಗ್ರೆಸ್ ಸೇರಲು ಬಯಸುತ್ತಿದ್ದಾರೆ. ಸಾಮರಸ್ಯ ಪುನರ್‌ಸ್ಥಾಪನೆ ಮೂಲಕ ಕಾಂಗ್ರೆಸ್‌ನ ಗತವೈಭವ ಮತ್ತೆ ಮರುಕಳಿಸಲಿದೆ ಎಂದು ಪದ್ಮರಾಜ್ ಹೇಳಿದರು.
Related Articles
ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಅವರಿಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಹರಿಸಿದ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು ಜನಾರ್ದನ ಪೂಜಾರಿ ಅವರೊಡನೆ ನಾನು ಅನೇಕ ವರ್ಷಗಳಿಂದ ಇದ್ದೇನೆ. ಎಂದಿಗೂ ಅವರನ್ನು ರಾಜಕೀಯ ಲಾಭ, ಸ್ವಾರ್ಥಕ್ಕೋಸ್ಕರ ದುರುಪಯೋಗ ಪಡಿಸಿಕೊಂಡಿಲ್ಲ. ಹಿರಿಯರಾದ ಅವರಲ್ಲಿ ಆಶೀರ್ವಾದ ಕೇಳಿದಾಗ ಶುಭ ಹಾರೈಸುವುದು ನಮ್ಮ ಸಂಸ್ಕೃತಿ. ಅದನ್ನು ಅವರು ಮಾಡಿದ್ದಾರೆ ಎಂದರು.
Advertisement
ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಸುಭೋದಯ ಆಳ್ವ, ಮೊಹಮ್ಮದ್ ಇದ್ದರು.