Advertisement

ಕಲೆಯಲ್ಲಿ ಅಡಗಿದೆ ಸಮಾಜ ಜಾಗೃತಿಗೊಳಿಸುವ ಶಕ್ತಿ: ಆಶಾಪುರ

06:07 PM Nov 29, 2021 | Shwetha M |

ವಿಜಯಪುರ: ಕಲೆಯಲ್ಲಿ ಅದ್ಭುತವಾದ ಶಕ್ತಿ ಅಡಗಿದೆ. ಕಲೆ ಜಾಗೃತಿ ಮೂಡಿಸುವ ಸಾಧನವೂ ಹೌದು. ಕಲಾವಿದ ಇಡಿ ನಾಡು ಹಾಗೂ ದೇಶವನ್ನು ಹೆಮ್ಮೆ ಪಡಿಸುವಂತಹ ಕಾರ್ಯ ಮಾಡುತ್ತಾನೆ ಎಂದು ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈರಪ್ಪ ಆಶಾಪುರ ಅಭಿಪ್ರಾಯಪಟ್ಟರು.

Advertisement

ನಗರದಲ್ಲಿರುವ ಪ್ರವಾಸೋದ್ಯಮ ಇಲಾಖೆ ಆರ್ಟ್‌ ಗ್ಯಾಲರಿಯಲ್ಲಿ ವಿವಿಧ ಕಲಾವಿದರ ವಿವಿಧ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುವ ಕಾರ್ಯ ನಡೆಯಬೇಕು. ವಿಜಯಪುರ ಕಲಾವಿದರು ಸುಂದರ ಕಲಾಕೃತಿಗಳ ಮೂಲಕ ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದ್ದಾರೆ ಎಂದು ಬಣ್ಣಿಸಿದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯ ರಮೇಶ ಚವ್ಹಾಣ ಮಾತನಾಡಿ, ಪ್ರಸ್ತುತ ರಚನೆಯಾಗಿರುವ ಕಲಾಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಶಾಶ್ವತವಾದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಪಿ.ಎಸ್‌. ಕಡೇಮನಿ, ವಿ.ವಿ. ಹಿರೇಮಠ, ಬಿ.ಎಸ್‌. ಪಾಟೀಲ, ಮಂಜುನಾಥ ಮಾನೆ, ಡಾ| ಶಶಿಕಲಾ ಹೂಗಾರ, ರಮೇಶ ಚವ್ಹಾಣ, ಎ.ಎಸ್‌. ಕಾಖಂಡಕಿ, ಶ್ರೀಕಾಂತ ರಜಪೂತ, ರುದ್ರಗೌಡ ಇಂಡಿ, ಮಹಾದೇವಿ ಕೊಪ್ಪದ, ಲಿಂಗರಾಜ ಕಾಚಾಪುರ, ಮುಸ್ತಾಕ್‌ ತಿಕೋಟಾ, ಕುಶ ವಾಲೀಕಾರ, ರವಿ ನಾಯಕ, ಅಯಾಜ್‌ ಪಟೇಲ್‌, ವಿಶ್ವನಾಥ ಹಂಡಿ, ಯಾಮಿನಿ ಶಹಾ, ಗಜಾನನ ಕಾಳೆ ಅವರ ಕಲಾಕೃತಿಗಳು ಪ್ರದರ್ಶನಗೊಂಡವು. ಹಿರಿಯ ಕಲಾವಿದ ವಿದ್ಯಾಧರ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಸ್‌ .ಟಿ. ಕೆಂಭಾವಿ, ಶಿಲ್ಪಕಲಾ ಅಕಾಡೆಮಿಯ ಸದಸ್ಯ ಎಂ.ಕೆ. ಪತ್ತಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next