Advertisement

ಶೈಕ್ಷಣಿಕವಾಗಿ ಮುಂದೆ ಬರುವುದೇ ಸಾಮಾಜಿಕ ಮುನ್ನಡೆ : ನಳಿನ್‌

07:00 AM Jul 31, 2017 | Team Udayavani |

ಬಂಟ್ವಾಳ : ಶೈಕ್ಷಣಿಕವಾಗಿ ಮುಂದೆ ಬರುವುದೇ ಸಾಮಾಜಿಕ ಮುನ್ನಡೆಯಾಗಿದೆ. ಇಂದು ಜಗತ್ತನ್ನು ತನ್ನೆಡೆಗೆ ಸೆಳೆದಿರುವ ಪ್ರಧಾನಿ ನರೇಂದ್ರ ಮೋದಿ, ಸುಶೀಲ್‌ ಮೋದಿಯವರು ಗಾಣಿಗ ಸಮಾಜದ ಕೊಡುಗೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಅವರು ಜು. 30ರಂದು ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಆಶ್ರಯದಲ್ಲಿ ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ  ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.

ಸಂಸದರು ಇದೇ ಸಂದರ್ಭ ನಿವೃತ್ತ ಯೋಧ ಅಣ್ಣಿ ಸಪಲ್ಯ, ಚಿತ್ರ ಕಲಾವಿದೆ ಶಬರಿ ಗಾಣಿಗ, ಈಜುಪಟು ಶ್ರೀಲಕ್ಷಿ$¾à ವಿಟ್ಲ ಅವರನ್ನು ಸಮ್ಮಾನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ  ಮುಖ್ಯ ಅತಿಥಿಯಾಗಿ ಮಾತನಾಡಿ ಸಂಪತ್ತು ಕೂಡಿಡುವುದು, ಚಿನ್ನವನ್ನು ಖರೀದಿಸುವುದು ಜೀವನದಲ್ಲಿ ಮುಖ್ಯವಲ್ಲ. ನಿಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದು ಮುಖ್ಯ. ಅವರನ್ನು ಸಮಾಜದ ಶಕ್ತಿಯಾಗಿಸುವುದು ಮುಖ್ಯ ಎಂದವರು ತಿಳಿಸಿದರು.

ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ರಘು ಸಪಲ್ಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ನಾವು ಸಂಘದಿಂದ ಏನು ಪಡೆದಿದ್ದೇವೆ ಎಂಬುದಕ್ಕಿಂತ ನಾವು ಸಮಾಜಕ್ಕೆ ಏನನ್ನು ಕೊಟ್ಟಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಈ ದೃಷ್ಟಿಯಲ್ಲಿ ಶೈಕ್ಷಣಿಕವಾಗಿ ಯುವ ಸಮಾಜವನ್ನು ಮುಂದೆ ತರುವ ಉದ್ದೇಶದಿಂದ ನಾವು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಸಮಾಜಮುಖೀ ಸೇವೆಯನ್ನು ನಮ್ಮ ಮಟ್ಟದಲ್ಲಿ ನಿರ್ವಹಿಸಿದ್ದೇವೆ.

Advertisement

ನಿಮ್ಮ ಸಹಾಯ ಸಹಕಾರದಲ್ಲಿ ಸಾಧನೆಗಳು ಆಗಿವೆೆ. ಮುಂದೆಯೂ ಸಮಾಜ ಬಾಂಧವರ ಸಹಕಾರ ಅವಶ್ಯ ಎಂದರು.
ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ನಾರಾಯಣ ಸಪಲ್ಯ ಕಡೇಶಿವಾಲಯ, ಬೆಳ್ತಂಗಡಿ ತಾ| ಗಾಣಿಗರ ಸಂಘದ ಅಧ್ಯಕ್ಷ ಲಕ್ಷ್ಮಣ ಉಜಿರೆ, ಕಾರ್ಯದರ್ಶಿ ಜಯ ಸಪಲ್ಯ,  ಬಂಟ್ವಾಳ ಎಸ್‌ವಿಎಸ್‌ ಕಾಲೇಜು ಉಪನ್ಯಾಸಕಿ ಭಾರತಿ, ಸಪಲಿಗರ ಸೇವಾ ಸಂಘ ಮುಂಡ್ಕೂರು ಕಾರ್ಯದರ್ಶಿ ಎಂ.ದೇವಪ್ಪ ಸಪಲಿಗ, ಉದ್ಯಮಿಗಳಾದ ಜನಾರ್ದನ ಅರ್ಕುಳ, ವಿಶ್ವನಾಥ ಎಸ್‌.ಎ., ನಾಗೇಶ್‌ ಕಲ್ಲಡ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಮುಖರಾದ ಪದ್ಮನಾಭ ಫಜೀರು, ಪ್ರಧಾನ ಕಾರ್ಯದರ್ಶಿ ವೇದವ, ಕೋಶಾಧಿಕಾರಿ ಈಶ್ವರ ಎಂ. ಮೆಲ್ಕಾರ್‌ ಉಪಾಧ್ಯಕ್ಷರಾದ ತಿಮ್ಮಪ್ಪ ಸಪಲ್ಯ ಇಡಿRದು, ಪೂವಪ್ಪ ದರಿಬಾಗಿಲು,  ವಸಂತಿ ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.  ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಜತೆ ಕಾರ್ಯದರ್ಶಿ ಬಾಲಕೃಷ್ಣ ಸೇರ್ಕಳ ಸ್ವಾಗತಿಸಿ, ಕೃಷ್ಣಪ ಗಾಣಿಗ ವಂದಿಸಿದರು. ಶಿಕ್ಷಕ ಬಿ. ರಾಮಚಂದ್ರ ರಾವ್‌, ಜತೆ ಕಾರ್ಯದರ್ಶಿ ಅಶೋಕ್‌ ಕುಮಾರ್‌ ಬರಿಮಾರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next