Advertisement

ಮನೆಗೆ ಸೂಕ್ತವಾದ ಸೋಫಾ ಮನೆಯಲ್ಲಿರಲಿ

09:31 PM Dec 13, 2019 | mahesh |

ಮನೆ, ಮನೆಯೊಳಗಿರುವ ವಸ್ತುಗಳು ಮನೆಯವರ ಅಭಿರುಚಿಯನ್ನು ತಿಳಿಸುತ್ತದೆ. ಆದ್ದರಿಂದ ಮನೆಯಲ್ಲಿ ಯಾವ ವಸ್ತು ಇರಬೇಕು ಮತ್ತು ಅದು ಹೇಗಿರಬೇಕು ಎನ್ನುವುದರ ಕುರಿತು ಮನೆಯವರು ಇಂದು ಯೋಚಿಸುತ್ತಾರೆ. ಮನೆಯಲ್ಲಿ ಕುಳಿತುಕೊಳ್ಳಲು ಯಾವ ವಸ್ತುಗಳ ಬೇಕು ಅವು ಹೇಗಿರಬೇಕು ಎನ್ನುವುದು ಮನೆಯವರ ಅಭಿರುಚಿಗೆ ಸಂಬಂಧಿಸಿದ್ದು.

Advertisement

ಮನೆ ಎಂದ ಮೇಲೆ ಅಲ್ಲಿ ಕುಳಿತುಕೊಳ್ಳಲು ಕುರ್ಚಿ, ಸೋಫಾ ಇರಲೇ ಬೇಕು. ಆದರೆ ಆಯಾ ಮನೆಗೆ ಯಾವುದು ಸೂಕ್ತವಾಗುತ್ತದೆ ಎಂಬುದನ್ನು ತಿಳಿದು ಸೋಫಾ ಖರೀದಿಸಿದರೆ ಮನೆ ಚಿಕ್ಕದಾಗಿದ್ದರೂ ಚೊಕ್ಕದಾಗಿರುತ್ತದೆ.

ಸೋಫಾ ಎನ್ನುವುದು ಮನೆಯ ಬರೀ ವಸ್ತುವಲ್ಲ. ಅದು ಮನೆಯವರ ಅಭಿರುಚಿಯನ್ನೂ ಸೂಚಿಸುವ ವಸ್ತುವೂ ಹೌದು. ಸೋಫಾಗಳಲ್ಲಿ ಹಲವು ವಿಧಗಳಿದ್ದು ನಮ್ಮ ಮನೆಗೆ ಯಾವುದು ಸೂಕ್ತವಾದುದು ಎಂಬುದು ತಿಳಿದು ಖರೀದಿಸಿದರೆ ಉತ್ತಮ.

1 ಚೆಸ್ಟರ್‌ಫೀಲ್ಡ್‌
ಇದು ಹಲವು ವರ್ಷಗಳ ಹಿಂದೆ ಬ್ರಿಟನ್‌ನಲ್ಲಿ ಬಳಸುತ್ತಿದ್ದ ಕ್ಲಾಸಿಕ್‌ ಡಿಸೈನ್‌ ಸೋಫಾ. ಇದು ಆಳವಾಗಿದ್ದು, ಇದರಲ್ಲಿ ಕುಳಿತುಕೊಂಡರೆ ಬೆನ್ನು ನೋವು ಬರುವುದಿಲ್ಲ. ಜತೆಗೆ ಇದು ಹೆಚ್ಚು ಐಷಾರಾಮಿ ನೋಟ ನೀಡುತ್ತದೆ.

2 ಆರ್ಮ್ ಚೆಯರ್‌
ಇದು ಹೆಚ್ಚು ಜಾಗವನ್ನು ಆಕ್ರಮಿಸುವ ಆದರೆ ಕುಳಿತುಕೊಳ್ಳಲು ಹೆಚ್ಚು ಆರಾಮದಾಯಕವಾದ ಸೋಫಾ.

Advertisement

3 ಸೆಕ್ಷನಲ್‌
ಆಧುನಿಕ ದಿನದ ಮಂಚದ ಮಾದರಿಯಲ್ಲಿ ಇರುವ ಇದು ಮನೆಗೆ ಹೆಚ್ಚು ಕ್ರಿಯಾತ್ಮಕವಾದ ಆಯ್ಕೆಯಾಗಿರುತ್ತದೆ. ಹೆಸರೇ ಸೂಚಿಸುವಂತೆ ಈ ಸೋಫಾ ಅನುಕೂಲಕ್ಕೆ ತಕ್ಕಂತೆ ಜಾಗ ಬದಲಾಯಿಸಬಹುದು. ಇದು ಬ್ಲಾಕ್‌ಗಳ ಮಾದರಿಯಲ್ಲಿದೆ. ಇದನ್ನು ಬೇಕಾದಾಗ ಜೋಡಿಸಬಹುದು ಅಥವಾ ಕಡಿಮೆ ಬೇಕಾದಲ್ಲಿ ತೆಗೆದಿಡಬಹುದು.

4 ಫ‌ುಟಾನ್‌
ಕಡಿಮೆ ಜಾಗವಿರುವ ಮನೆ ಅಥವಾ ಅಪಾರ್ಟ್‌ಮೆಂಟ್‌ಗಳಿಗೆ ಇದು ಸೂಕ್ತವಾದ ಸೋಫಾ. ಇದು ಬಹುಪಯೋಗಿ ಸೋಫಾ ಆಗಿದ್ದು, ಇದನ್ನು ಬಿಡಿಸಿದರೆ ಮಂಚವಾಗಿ ಬದಲಾಗುತ್ತದೆ. ಜತೆಗೆ ಸೋಫಾವಾಗಿರುವಾಗ ಕೆಳಗೆ ಡ್ರಾಯರ್‌ ಮಾದರಿಯಲ್ಲಿದ್ದು, ಇದನ್ನು ಬಹೂಪಯೋಗಿಯಾಗಿ ಬಳಕೆ ಮಾಡಬಹುದು.

5 ವಿಂಗ್ಬಾಕ್‌
ಇದು ಹೆಚ್ಚು ಐಷಾರಾಮಿ ಸೋಫಾವಾಗಿದ್ದು, ಹೆಚ್ಚು ಆರಾಮದಾಯಕವಾಗಿದೆ. ಮನೆಯಲ್ಲಿ ಹೆಚ್ಚು ಜಾಗವನ್ನು ಆಕ್ರಮಿಸುವ ಇದು ಸೋಫಾದ ಬದಿಯಲ್ಲಿ ಹೆಚ್ಚು ಜಾಗವಿದೆ ಮತ್ತು ಒರಗಲು ವಿಂಗ್‌ ಮಾದರಿಯಲ್ಲಿ ಜಾಗವಿದೆ.
ಮನೆ ಚಿಕ್ಕದಾಗಿದ್ದರೂ ಮನೆಯನ್ನು ಚೊಕ್ಕವಾಗಿ ಇಡುವುದು ನಮ್ಮ ಆಯ್ಕೆ. ಆದ್ದರಿಂದ ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಾಗ ಸೂಕ್ತವಾದ ಆಯ್ಕೆ ನಿಮ್ಮದಾಗಿರಲಿ.

- ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next