ಮಹಾರಾಷ್ಟ್ರ: ಕೋವಿಡ್-19 ವೈರಸ್ ಭೀತಿ ದೇಶಾದ್ಯಂತ ವ್ಯಾಪಕವಾಗಿ ಹರಡಿದ್ದು, ಸೀನಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕ ಥಳಿಸಿದ ಘಟನೆ ಕೊಲ್ಹಾಪುರದಲ್ಲಿ ನಡೆದಿದೆ ಎನ್ ಡಿ ಟಿವಿ ವರದಿ ಮಾಡಿದೆ.
ಈ ವಿಡಿಯೋ ಇದೀಗ ಸಿಸಿಟಿವಿ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಟ್ರಾಫಿಕ್ ಜಾಮ್ ಆಗಿದ್ದ ಕಾರಣ ಬೈಕ್ ಅನ್ನು ನಿಲ್ಲಿಸಿದ್ದನು. ಈ ವೇಳೆ ಸಾರ್ವಜನಿಕವಾಗಿ ಯಾವುದೇ ಕರವಸ್ತ್ರ ಬಳಸದಕ್ಕೆ ಸೀನಿದ್ದರಿಂದ ಇತರ ವಾಹನಗಳಲ್ಲಿದ್ದವರು ಬಂದು ಥಳಿಸಿದ್ದಾರೆ.
ಕೆಲಸಮಯ ಸ್ಥಳದಲ್ಲಿ ಬಿಗುವಾದ ವಾತಾವರಣ ಸೃಷ್ಟಿಯಾಗಿತ್ತು. ಮಾತ್ರವಲ್ಲದೆ ಅನೇಕ ವಾಹನಗಳು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಗೂ ಕಾರಣವಾಯಿತು.
ಮಹಾರಾಷ್ಟ್ರದಲ್ಲಿ ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗಿದ್ದು, 49 ಪ್ರಕರಣಗಳು ವರದಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೊನಾ ವೈರಸ್, ಉಗುಳುವುದರಿಂದ, ಕೆಮ್ಮುವುದರಿಂದ, ಸೀನುವುದರಿಂದ ಮತ್ತು ಸೋಂಕು ಪೀಡಿದ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿದಾಗ ಹರಡುತ್ತದೆ.