Advertisement
ಹಿಂದೆಲ್ಲಾ ಸ್ನೀಕರ್ಅನ್ನು ಕ್ರೀಡಾಳುಗಳು ಮಾತ್ರವೇ ತೊಡುತ್ತಿದ್ದರು. ಹಗುರವಾದ, ತೆಳುವಾಗಿದ್ದ ಈ ಶೂಗಳನ್ನು ಹೆಚ್ಚಾಗಿ ಓಟದ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಬಳಸುತ್ತಿದ್ದರು. ಆದರೆ, ಕಾಲಕ್ರಮೇಣ ಆ ಪರಿಪಾಠ ಬದಲಾಯಿತು. ಸ್ನೀಕರ್ಅನ್ನು ಕ್ರೀಡಾಂಗಣದ ಹೊರಗೆಯೂ ತೊಡುವ ಪರಿಪಾಠ ಪ್ರಾರಂಭವಾಯಿತು. ಕಾಲೇಜು ವಿದ್ಯಾರ್ಥಿಗಳಿಂದ ಶುರುವಾದ ಈ ಟ್ರೆಂಡ್ ಫ್ಯಾಷನ್ ಲೋಕದಲ್ಲಿ ಬಹಳ ಬೇಗನೆ ಪ್ರಖ್ಯಾತಿಯನ್ನು ಪಡೆಯಿತು. ಎಷ್ಟರ ಮಟ್ಟಿಗೆ ಎಂದರೆ ಅಂತಾರಾಷ್ಟ್ರೀಯ ಮಟ್ಟದ ನ್ಪೋರ್ಟ್ಸ್ ಶೂ ತಯಾರಕ ಕಂಪನಿಗಳೇ ದಿನಬಳಕೆಯ ಸ್ನೀಕರ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದವು.
ಫ್ಯಾಷನ್‌ಲೋಕದಲ್ಲಿ ಸಂಬಂಧವೇ ಇರದ್ದನ್ನು ಪೇರ್ ಮಾಡಿ ತೊಡುವ ಪದ್ಧತಿಯಿಂದಾಗಿ ಸ್ನೀಕರ್ಗಳು ಹದಿಹರೆಯದವರ ಫೇವರಿಟ್ ಎನಿಸಿಕೊಂಡಿದೆ. ಕ್ಯಾಶುವಲ್ ದಿರಿಸುಗಳಿಗೆ ಹೆಚ್ಚು ಹೊಂದುವುದರಿಂದ ಕಾಲೇಜು ಸಮಾರಂಭಗಳಲ್ಲಿ ಸ್ನೀಕರ್ ತೊಟ್ಟು ಮಿಂಚುವ ಹುಡುಗಿಯರೇನೂ ಕಡಿಮೆಯಿಲ್ಲ. ಹೆಚ್ಚಿನ ಪಡಿಪಾಟಲುಗಳಿಲ್ಲದೆ ಕ್ಷಣ ಮಾತ್ರದಲ್ಲಿ ತೊಟ್ಟು ಹೊರಡಬಹುದು ಎನ್ನುವುದು ಇದರ ಹೆಗ್ಗಳಿಕೆ. ಆ ನಿಟ್ಟಿನಲ್ಲಿ ಸ್ನೀಕರ್ ತೊಡುವುದರಿಂದ ಫ್ಯಾಷನೇಬಲ್ ಆಗಿ ಕಾಣುವುದು ಮಾತ್ರವಲ್ಲ, ಆರಾಮದಾಯಕವೂ ಹೌದು. ಫ್ಯಾಷನ್ ನೆಪದಲ್ಲಿ ಹೈಹೀಲ್ಸ್ ಚಪ್ಪಲಿ, ಶೂಗಳನ್ನು ತೊಡಬೇಕಾದ ಅನಿವಾರ್ಯತೆಯಲ್ಲಿದ್ದವರಿಗೆ ಸ್ನೀಕರ್ ವರದಾನವಾಗಿ ಪರಿಣಮಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಹೈಹೀಲ್ಸ್‌ನ ಎದುರಾಳಿ
ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ “ಪಾರ್ಟಿಗಳಲ್ಲಿ ಅದೆಷ್ಟೇ ಬೆಲೆ ಬಾಳುವ ವಿದೇಶಿ ಡಿಸೈನರ್ ವಿನ್ಯಾಸಗೊಳಿಸಿದ ಗೌನನ್ನು ಧರಿಸಿದ್ದರೂ ಕಾಲಿಗೆ ಯಾರಿಗೂ ಗೊತ್ತಾಗದಂತೆ ಸ್ನೀಕರ್ ತೊಟ್ಟಿರುತ್ತಿದ್ದೆ’ ಎಂದು ಹೇಳಿದ್ದು ವಿಶ್ವಾದ್ಯಂತ ಸುದ್ದಿಯಾಗಿತ್ತು. ಮಹಿಳೆಯರಿಗೆ ಸ್ನೀಕರ್ ಕುರಿತ ಒಲವನ್ನು ಇದು ಸೂಚಿಸುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಕಾನ್ ಚಿತ್ರೋತ್ಸವದಲ್ಲಿ ರೆಡ್ ಕಾಪೆìಟ್ ಮೇಲೆ ನಡೆಯುವಾಗ ನಟಿಯರು ಹೈ ಹೀಲ್ಸ್ ತೊಡಬೇಕೆಂಬ ನಿಯಮವಿದೆ. ನಟಿ ಕ್ರಿಸ್ಟೆನ್ ಸ್ಟಿವರ್ಟ್ ರೆಡ್ ಕಾಪೆìಟ್ ಮೇಲೆಯೇ, ನೂರಾರು ಛಾಯಾಗ್ರಾಹಕರ ಮುಂದೆಯೇ ಹೈಹೀಲ್ಸ್ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಬರಿಗಾಲಲ್ಲಿ ನಡೆಯುತ್ತಾ ಪ್ರತಿಭಟನೆ ನಡೆಸಿದ್ದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು.
Related Articles
ಚೆಂದದ ಟಾಪ್ ಮತ್ತು ಜೀನ್ಸ್ ಪ್ಯಾಂಟಿನೊಂದಿಗೆ ಸ್ನೀಕರ್ ಪಫೆìಕ್ಟ್ ಮ್ಯಾಚ್ ಆಗುತ್ತದೆಯಾದರೂ ಇನ್ನೂ ಅನೇಕ ದಿರಿಸುಗಳೊಂದಿಗೆ ಮಿಕ್ಸ್ ಮ್ಯಾಚ್ ಮಾಡಿ ಫ್ಯಾಷನ್ ಪ್ರಯೋಗಗಳನ್ನು ಮಾಡಬಹುದು. ಸ್ನೀಕರ್ಗಳಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದಿರುವುದು ಪ್ಲೇನ್ ವೈಟ್. ಈಗೀಗ ಅನೇಕ ವಿನ್ಯಾಸ, ಬಣ್ಣಗಳ ಸ್ನೀಕರ್ಅನ್ನು ಹುಡುಗಿಯರು ತೊಡುತ್ತಿದ್ದಾರೆ. ಫ್ಲೋರಲ್, ಸ್ಟ್ರೈಪ್ಸ್‌ಗಳ ವಿನ್ಯಾಸಗಳುಳ್ಳ ಸ್ನೀಕರ್ಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ.
Advertisement
ಹವನ