ಹೊಸದಿಲ್ಲಿ: ಹೆಚ್ಚು ಹೆಚ್ಚು ಸಂಖ್ಯೆಯ ಭಾರತೀಯರು ತಮ್ಮ ಸ್ಮಾಟ್ ಫೋನ್‌ಗಳಿಗೆ Snapchat ಆ್ಯಪನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ; ಆದರೆ Snapchat ಕಂಪೆನಿ ಸಿಇಓಗೆ ತಮ್ಮ ಉತ್ಪನ್ನದ ಬಳಕೆದಾರರ ಬುನಾದಿ ವಿಸ್ತರಣೆಯನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ “ಭಾರತವು ತುಂಬಾ ಬಡದೇಶ’ ಎನಿಸಿದೆ !
Snapchat ನ ಸಿಇಓ ಇವಾನ್ ಸ್ಪೀಗೆಲ್ ಅವರು ಈ ಭಾರತದ ಬಗ್ಗೆ ಈ ಅವಹೇಳನಕಾರಿ ಮಾತುಗಳನ್ನು ಆಡಿದ್ದು ಕಂಪೆನಿಯ ಈ ಆ್ಯಪ್ ಬಳಕೆದಾರರ ಬುನಾದಿಯನ್ನು ವಿಸ್ತರಿಸುವ ಮಾರ್ಗೋಪಾಯಗಳನ್ನು ಚರ್ಚಿಸುವ ಸಭೆಯಲ್ಲಿ – ಎರಡು ವರ್ಷಗಳ ಹಿಂದೆ, ಎಂದರೆ 2015ರಲ್ಲಿ .
ಆ ಸಭೆಯಲ್ಲಿ ಕಂಪೆನಿಯ ನೌಕರನೊಬ್ಬ ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆ ತೀವ್ರವಾಗಿ ಹೆಚ್ಚುತ್ತಿದೆ; ಆದರೆ ಸ್ನಾಪ್ ಚ್ಯಾಟ್ ಆ್ಯಪ್ ಅತ್ಯಂತ ನಿಧಾನಗತಿಯ ಬೆಳವಣಿಗೆಯನ್ನು ಕಾಣುತ್ತಿದೆಯಲ್ಲ ಎಂದು ಪ್ರಶ್ನಿಸಿದಾಗ ಆತನ ವ್ಯಾಕ್ಯವನ್ನುಅರ್ಧಕ್ಕೇ ಮುರಿದ ಇವಾನ್ ಸ್ಪೀಗೆಲ್, ‘
ಈ ಆ್ಯಪ್ ಇರುವುದು ಕೇವಲ ಶ್ರೀಮಂತರಿಗಾಗಿ’ ಎಂದು ಉತ್ತರಿಸಿದರು.
ಸ್ಪೀಗೆಲ್ ಅವರು ಮುಂದುವರಿದು
‘ಭಾರತ ಮತ್ತು ಸ್ಪೇನ್‌ನಂತಹ ಬಡ ರಾಷ್ಟ್ರಗಳಲ್ಲಿ ಸ್ಯಾಪ್ ಚ್ಯಾಟ್ ಆ್ಯಪ್‌ನ ನೆಲೆ ವಿಸ್ತರಣೆಯನ್ನು ನಾನು ಬಯಸುವುದಿಲ್ಲ’ ಎಂದು ಖಂಡತುಂಡವಾಗಿ ಹೇಳಿದರು.
ಸಿಇಓ ಇವಾನ್ ಸ್ಪೀಗೆಲ್ ಅವರು ಅಂದು ಆಡಿದ್ದ ಮಾತುಗಳನ್ನು ವೈರಟಿ ಎಂಬ ಟೆಕ್ ಸುದ್ದಿ ಜಾಲ ವರದಿ ಮಾಡಿದೆ.