Advertisement

ಸುಪ್ರೀಂ ಕೋರ್ಟ್‌ಗೆ ‘ಸರ್ಪ ಭೀತಿ’

09:44 AM Nov 25, 2019 | Hari Prasad |

ಹೊಸದಿಲ್ಲಿ: ಸದಾ ಜನರಿಂದ ಗಿಜಿಗುಟ್ಟುವ ಸುಪ್ರೀಂ ಕೋರ್ಟ್‌ನಲ್ಲಿ ಹಾವೊಂದು ದರ್ಶನ ನೀಡಿ ಎಲ್ಲರನ್ನೂ ಗಾಬರಿಗೊಳಿಸಿತ್ತು. ಸುಪ್ರೀಂ ಕೋರ್ಟ್‌ನ ಗ್ಯಾಲರಿಯಲ್ಲಿ ಕಾಣಿಸಿಕೊಂಡಿತ್ತು. ತತ್‌ಕ್ಷಣವೇ ಉರಗ ತಜ್ಞರು, ಭದ್ರತಾ ಸಿಬಂದಿ ಆಗಮಿಸಿ ಇಡೀ ನ್ಯಾಯಾಲಯ, ಅದರ ಆವರಣವನ್ನು ಜಾಲಾಡಿದರೂ ಹಾವು ಪತ್ತೆಯಾಗಲಿಲ್ಲ. ಹಾವು ಪತ್ತೆಯಾಗದಿರುವುದರಿಂದ ಸುಪ್ರೀಂ ಕೋರ್ಟ್‌ನ ಅಲ್ಲಲ್ಲಿ ‘ಹಾವು ಇದೆ ಎಚ್ಚರಿಕೆ’ ಎಂಬ ಫ‌ಲಕಗಳನ್ನು ಅಳವಡಿಸಲಾಗಿದೆ.

Advertisement

ಇನ್ನು ಹಾವು ಕಡಿತಕ್ಕೊಳಗಾದಾಗ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಸೂಚನ ಫ‌ಲಕಗಳನ್ನು ನ್ಯಾಯಾಲಯದ ಅಲ್ಲಲ್ಲಿ ಅಳವಡಿಸುವಂತೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ಸೂಚಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಒಬ್ಬ ಮುಖ್ಯ ವೈದ್ಯಾಧಿಕಾರಿ, ಒಂದು ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಇವೆಲ್ಲದರ ಜತೆಗೆ, ಹಾವು ಹಿಡಿಯಲು ಕೇಂದ್ರೀಯ ಲೋಕೋಪಯೋಗಿ ಇಲಾಖೆ, ದಿಲ್ಲಿ ಪೊಲೀಸ್‌ ಮತ್ತು ದಿಲ್ಲಿಯ ಅರಣ್ಯಾಧಿಕಾರಿಯನ್ನು ಕರೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next