Advertisement

ವಂದೇ ಭಾರತ್‌ನಲ್ಲಿ ಹಾವು–ಏಣಿ ಆಟ!

01:03 AM Feb 12, 2023 | Team Udayavani |

ಹೊಸದಿಲ್ಲಿ : ಈಗಾಗಲೇ ಹಲವು ವೈಶಿಷ್ಟ್ಯಗಳಿಂದ ಜನರ ಮನಸೆಳೆದಿರುವ ವಂದೇ ಭಾರತ್‌ ಟ್ರೈನ್‌ ಮತ್ತೊಂದು ಅಚ್ಚರಿಯ ಸೌಲಭ್ಯದೊಂದಿಗೆ ಪ್ರಯಾ­ಣಿಕರಿಗೆ ಹತ್ತಿರವಾಗುತ್ತಿದೆ.

Advertisement

ಆ ನೂತನ ಸೌಲಭ್ಯವೇ “ವಂದೇ ಭಾರತ್‌ ಹಾವು ಏಣಿ ‘. ಹೌದು ಟ್ರೈನ್‌ನಲ್ಲಿನ ಪ್ರಯಾಣಿಕರಿಗೆ ಬೇಸರ­ವಾಗದಿರಲು ಅತ್ಯಂತ ಜನ ಪ್ರಿಯ ಆಟವಾದ ಹಾವು -ಏಣಿಯನ್ನು ಟ್ರೈನ್‌ನಲ್ಲಿ ಆಡುವುದಕ್ಕೆ ಅವಕಾಶ ಮಾಡಲಾಗಿದೆ.

ಇದಕ್ಕಾಗಿ ರೈಲ್ವೇ ಹಾವು ಏಣಿ ಬೋರ್ಡ್‌ ಗಳನ್ನಿಟ್ಟಿದ್ದು ಪ್ರಯಾಣಿಕರು ಈ ಸೌಲಭ್ಯ ವನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ವ್ಯವಸ್ಥೆ ಮುಂಬಯಿ-ಸೋಲಾಪುರ, ಮುಂಬಯಿ-­ಸಾಯಿ ನಗರ ಶಿರಡಿ ರೈಲುಗಳಲ್ಲಿ ಮಾತ್ರ ಲಭ್ಯವಿದೆ.

ರೈಲು ಆರಂಭವಾಗುವ ಸ್ಥಳವನ್ನು ಆಟದ ಆರಂಭಕ್ಕೆಂದು ಗುರುತಿಸಿದ್ದು, ತಲುಪುವ ಸ್ಥಳವನ್ನು ಅಂತಿಮ ನಿಲ್ದಾ ಣದ ಹೆಸರಿನಲ್ಲಿ ಗುರುತಿಸಲಾಗಿದೆ. ಸಂಚರಿಸುವ ಮಾರ್ಗಗಳನ್ನೇ ಏಣಿ ತಲುಪುವ ಸ್ಥಳಗಳನ್ನಾಗಿ ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next